ಬಿಹಾರ ಅವಮಾನಿಸಿದ್ದ ಮೋದಿಗೆ ತಕ್ಕ ಶಾಸ್ತಿ: ಲಾಲು ಪುತ್ರಿ ಹೇಳಿಕೆ

ಬಿಹಾರವನ್ನು ಅವಮಾನಿಸಿದ್ದ ಪ್ರಧಾನಿ ಮೋದಿಗೆ ಚುನಾವಣೆಯಲ್ಲಿ ಜನತೆ ತಕ್ಕ ಶಾಸ್ತಿ ಮಾಡಿದ್ದಾರೆ ಎಂದು ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಪುತ್ರಿ ಮಿಸಾ ಭಾರ್ತಿ ಹೇಳಿದ್ದಾರೆ...
ಲಾಲು ಪ್ರಸಾದ್ ಪುತ್ರಿ ಮಿಸಾ ಭಾರ್ತಿ (ಸಂಗ್ರಹ ಚಿತ್ರ)
ಲಾಲು ಪ್ರಸಾದ್ ಪುತ್ರಿ ಮಿಸಾ ಭಾರ್ತಿ (ಸಂಗ್ರಹ ಚಿತ್ರ)

ಪಾಟ್ನಾ: ಬಿಹಾರವನ್ನು ಅವಮಾನಿಸಿದ್ದ ಪ್ರಧಾನಿ ಮೋದಿಗೆ ಚುನಾವಣೆಯಲ್ಲಿ ಜನತೆ ತಕ್ಕ ಶಾಸ್ತಿ ಮಾಡಿದ್ದಾರೆ ಎಂದು ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಪುತ್ರಿ ಮಿಸಾ ಭಾರ್ತಿ ಹೇಳಿದ್ದಾರೆ.

ಬಿಹಾರ ಚುನಾವಣೆಯಲ್ಲಿ ಜೆಡಿಯು-ಆರ್ ಜೆಡಿ ನೇತೃತ್ವದ ಮಹಾಘಟಬಂಧನ್ ಮೈತ್ರೀಕೂಟ ಭಾರಿ ಜಯ ಸಾಧಿಸಿದ ಹಿನ್ನಲೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮಿಸಾ ಭಾರ್ತಿ ಅವರು, ಬಿಹಾರಿಗರನ್ನು ಪ್ರಧಾನಿ ನರೇಂದ್ರ ಮೋದಿ ಅವಮಾನಿಸಿದ್ದರು. ಅವರ ತಪ್ಪಿಗೆ ಬಿಹಾರದ ಜನತೆ ಚುನಾವಣೆಯಲ್ಲಿ ಸೋಲಿಸುವ ಮೂಲಕ ಶಾಸ್ತಿ ಮಾಡಿದ್ದಾರೆ ಎಂದು ಹೇಳಿದರು.

"ಮೈತ್ರಿಕೂಟದ ಗೆಲುವು ಬಿಹಾರದ ಜನತೆಯ ಗೆಲುವಾಗಿದ್ದು, ಇಡೀ ಬಿಹಾರದ ಜನತೆ ಚುನಾವಣಾ ಗೆಲುವನ್ನು ದೀಪಾವಳಿ ಸಂಭ್ರಮವಾಗಿ ಆಚರಿಸುತ್ತಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಅಸಹಿಷ್ಣುತೆಯನ್ನು ಜನತೆ ತಿರಸ್ಕರಿಸಿದ್ದು, ನಿತೀಶ್ ಕುಮಾರ್ ಅವರ ಅಭಿವೃದ್ಧಿಗೆ ಮತ್ತು ಲಾಲು ಪ್ರಸಾದ್ ಅವರ ಸಾಮಾಜಿಕ ನ್ಯಾಯಕ್ಕೆ ಮನ್ನಣೆ ನೀಡಿದ್ದಾರೆ ಎಂದು ಹೇಳಿದರು.

ಬಿಹಾರ ಚುನಾವಣೆಯಲ್ಲಿ ಜೆಡಿಯು ಮೈತ್ರೀಕೂಟದ ತಾರಾ ಪ್ರಚಾರಕರೆಂದೇ ಮಿಸಾ ಭಾರ್ತಿ ಅವರನ್ನು ಪರಿಗಣಿಸಲಾಗಿತ್ತು.

5 ಹಂತಗಳಲ್ಲಿ ನಡೆದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ನಿತೀಶ್ ಕುಮಾರ್ ನೇತೃತ್ವದ ಮಹಾಘಟ್ ಬಂಧನ ಮೈತ್ರೀಕೂಟ ಒಟ್ಟು 173 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಳ್ಳುವ ಮೂಲಕ  ಬಿಹಾರದಲ್ಲಿ ಮತ್ತೆ ಅಧಿಕಾರದತ್ತ ದಾಪುಗಾಲಿಟ್ಟಿದೆ. ಜೆಡಿಯು ಮೈತ್ರೀಕೂಟಕ್ಕೆ ತೀವ್ರ ಪೈಪೋಟಿ ನೀಡಲಿದೆ ಎಂದು ಹೇಳಲಾಗುತ್ತಿದ್ದ ಬಿಜೆಪಿ ಮೈತ್ರಿಕೂಟ ಕೇವಲ 63 ಸ್ಥಾನಗಳಲ್ಲಿ ಮಾತ್ರ ಮುನ್ನಡೆ ಪಡೆದುಕೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com