ಶತೃಘ್ನ ಸಿನ್ಹಾ ಬಿಜೆಪಿ ವಿರೋಧಿ ಪ್ಯಾಕೇಜಿಂಗ್ ನ ಒಂದು ಭಾಗ: ಉಮಾಭಾರತಿ ಕಿಡಿ

ಶತೃಘ್ನ ಸಿನ್ಹಾ ಬಿಜೆಪಿ ವಿರೋಧಿ ಪ್ಯಾಕೇಜಿಂಗ್ ನ ಒಂದು ಭಾಗವಾಗಿದ್ದಾರೆ. ಹೀಗಾಗಿ ಪಕ್ಷದ ಹಿರಿಯ ನಾಯಕರು ಅವರ ವಿರುದ್ಧ ಅವಶ್ಯಕ ಕ್ರಮ ಜರುಗಿಸಲಿದ್ದಾರೆ ....
ಉಮಾ ಭಾರತಿ
ಉಮಾ ಭಾರತಿ
Updated on: 

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ನಡೆಸಿದ ಪಿತೂರಿ, ಅಸಹಿಷ್ಟುತೆ ಚರ್ಚೆ ಹಾಗೂ ಗೋಮಾಂಸ ಪ್ರಕರಣಗಳು ಬಿಹಾರದಲ್ಲಿ ಬಿಜೆಪಿ ಸೋಲಿಗೆ ಕಾರಣವಾಗಿದೆ ಎಂದು ಕೇಂದ್ರ ಜಲಸಂಪನ್ಮೂಲ ಸಚಿವೆ ಉಮಾಭಾರತಿ ಹೇಳಿದ್ದಾರೆ.

ಪ್ರಶಸ್ತಿ ವಾಪಸ್  ಯೋಜಿತ ಪಿತೂರಿಯಾಗಿತ್ತು. ಬಿಹಾರ ವಿಧಾನ ಸಭೆ ಚುನಾವಣೆ ವೇಳೆ ಉದ್ದೇಶಪೂರ್ವಕವಾಗಿಯೇ ಗೋಮಾಂಸ ವಿಷಯವನ್ನು ಅತಿ ಹೆಚ್ಚು ರಂಜಿಸಲಾಯಿತು ಎಂದು ಆರೋಪಿಸಿದ ಉಮಾ ಭಾರತಿ, ಅಸಹಿಷ್ಣುತೆ ವಿಚಾರ ಬಿಜೆಪಿ ಇಮೇಜಿಗೆ ಧಕ್ಕೆಯಾಗುವಂತೆ ಮಾಡಿತು ಎಂದು ಆಪಾದಿಸಿದ್ದಾರೆ.

ಇನ್ನು ಸಂಸದ ಹಾಗೂ ಹಿರಿಯ ನಟ ಶತೃಘ್ನ ಸಿನ್ಹಾ ಪಕ್ಷದ ವಿರುದ್ಧ ನೀಡಿದ ಹೇಳಿಕೆಯಿಂದ ಬಿಹಾರದಲ್ಲಿ ಬಿಜೆಪಿಗೆ ನೀರಸ ಪ್ರತಿಕ್ರಿಯೆ ಸಿಕ್ಕಿದೆ ಎಂದು ಆರೋಪಿಸಿದ್ದಾರೆ.

ಶತೃಘ್ನ ಸಿನ್ಹಾ ಬಿಜೆಪಿ ವಿರೋಧಿ ಪ್ಯಾಕೇಜಿಂಗ್ ನ ಒಂದು ಭಾಗವಾಗಿದ್ದಾರೆ. ಹೀಗಾಗಿ ಪಕ್ಷದ ಹಿರಿಯ ನಾಯಕರು ಅವರ ವಿರುದ್ಧ ಅವಶ್ಯಕ ಕ್ರಮ ಜರುಗಿಸಲಿದ್ದಾರೆ ಎಂದು ಉಮಾಭಾರತಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com