20ಕ್ಕೆ ನಿತೀಶ್ ಪ್ರಮಾಣವಚನ

ಬಿಹಾರ ಚುನಾವಣೆಯಲ್ಲಿ ಭಾರಿ ಸ್ಥಾನಗಳೊಂದಿಗೆ ಗೆದ್ದ ನಿತೀಶ್ ಕುಮಾರ್ ಅಧಿಕಾರ ಸ್ವೀಕಾರಕ್ಕೆ ಎಲ್ಲ ಸಿದ್ಧತೆ ನಡೆಸಿಕೊಂಡಿದ್ದಾರೆ...
ಬಿಹಾರ ನಿಯೋಜಿತ ಮುಖ್ಯಮಂತ್ರಿ (ಸಂಗ್ರಹ ಚಿತ್ರ)
ಬಿಹಾರ ನಿಯೋಜಿತ ಮುಖ್ಯಮಂತ್ರಿ (ಸಂಗ್ರಹ ಚಿತ್ರ)

ಪಾಟ್ನಾ: ಬಿಹಾರ ಚುನಾವಣೆಯಲ್ಲಿ ಭಾರಿ ಸ್ಥಾನಗಳೊಂದಿಗೆ ಗೆದ್ದ ನಿತೀಶ್ ಕುಮಾರ್ ಅಧಿಕಾರ ಸ್ವೀಕಾರಕ್ಕೆ ಎಲ್ಲ ಸಿದ್ಧತೆ ನಡೆಸಿಕೊಂಡಿದ್ದಾರೆ.

ಇದೇ 20 ರಂದು ಅವರು ಸಂಪುಟದ ಹೊಸ ಸದಸ್ಯರೊಂದಿಗೆ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಗಾಂಧಿ ಮೈದಾನದಲ್ಲಿ ಮಧ್ಯಾಹ್ನ 2 ಗಂಟೆಗೆ ಪ್ರಮಾಣವಚನ ಸ್ವೀಕಾರ ಸಮಾರಂಭ ಆರಂಭವಾಗಲಿದೆ. ಶನಿವಾರ ನಡೆದ ಮಹಾಮೈತ್ರಿ ಕೂಟದ ಶಾಸಕಾಂಗ ಸಭೆಯಲ್ಲಿ ನಿತೀಶ್ ಕುಮಾರ್ ಅವರನ್ನು ನಾಯಕರನ್ನಾಗಿ ಆಯ್ಕೆ ಮಾಡಲಾಯಿತು. ಇದಾದ ಬಳಿಕ ರಾಜಭವನಕ್ಕೆ ಭೇಟಿ ನೀಡಿದ ನಿತೀಶ್ ಕುಮಾರ್ ಮತ್ತು ಲಾಲು ಪ್ರಸಾದ್ ಯಾದವ್ ಸರ್ಕಾರ ರಚನೆಗೆ ಅನುಮತಿ ಕೋರಿದರು. ಎಷ್ಟು ಮಂದಿ ಸಂಪುಟಕ್ಕೆ ಸೇರಲಿದ್ದಾರೆ ಎಂಬ ಪ್ರಶ್ನೆಗೆ ನಿತೀಶ್ ಕುಮಾರ್ ಯಾವುದೇ ಉತ್ತರ ನೀಡಿಲ್ಲ. ಆದರೆ ಗರಿಷ್ಠ 36 ಮಂದಿಯನ್ನಷ್ಟೇ ಸೇರಿಸಿಕೊಳ್ಳಲು ಅವಕಾಶವಿದೆ ಎಂದಷ್ಟೇ ಹೇಳಿದರು.

ಪ್ರಧಾನಿ ಮೋದಿ ಮತ್ತು ಬಿಜೆಪಿ ನಾಯಕ ಎಲ್.ಕೆ.ಆಡ್ವಾಣಿ ಅವರನ್ನು ಸಮಾರಂಭಕ್ಕೆ ಆಹ್ವಾನಿಸುತ್ತೀರಾ ಎಂಬ ಪ್ರಶ್ನೆಗೆ, ಈ ಬಗ್ಗೆ ಏನಾದರೂ ಬೆಳವಣಿಗೆಯಾದರೆ ತಿಳಿಸುತ್ತೇನೆ ಎಂದರು. ಸಂಪುಟ ಸೇರುವವರ ಕುರಿತಂತೆ ಈಗಾಗಲೇ ನಿರ್ಧಾರವಾಗಿದೆ. ಈ ಬಗ್ಗೆ ಯಾವುದೇ ಮಾಹಿತಿ ನೀಡಲ್ಲ. ಇದರಲ್ಲಿ ಯಾವುದೇ ವಿವಾದವೂ ಇಲ್ಲ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com