ನ್ಯಾ.ಬಾಲಕೃಷ್ಣನ್‍ಗೆ ಕ್ಲೀನ್‍ಚಿಟ್

ಸುಪ್ರೀಂಕೋರ್ಟ್‍ನ ನಿವೃತ್ತ ನ್ಯಾ. ಕೆ.ಜಿ. ಬಾಲಕೃಷ್ಣನ್ ವಿರುದ್ಧದ ಅಕ್ರಮ ಆಸ್ತಿ ಸಂಪಾದನೆ ಆರೋಪ ಸಂಬಂಧ ಆದಾಯ ತೆರಿಗೆ ಇಲಾಖೆ ಕ್ಲೀನ್‍ಚಿಟ್ ನೀಡಿದೆ..
ನಿವೃತ್ತ ನ್ಯಾ. ಕೆ.ಜಿ. ಬಾಲಕೃಷ್ಣನ್ (ಸಂಗ್ರಹ ಚಿತ್ರ)
ನಿವೃತ್ತ ನ್ಯಾ. ಕೆ.ಜಿ. ಬಾಲಕೃಷ್ಣನ್ (ಸಂಗ್ರಹ ಚಿತ್ರ)

ನವದೆಹಲಿ: ಸುಪ್ರೀಂಕೋರ್ಟ್‍ನ ನಿವೃತ್ತ ನ್ಯಾ. ಕೆ.ಜಿ. ಬಾಲಕೃಷ್ಣನ್ ವಿರುದ್ಧದ ಅಕ್ರಮ ಆಸ್ತಿ ಸಂಪಾದನೆ ಆರೋಪ ಸಂಬಂಧ ಆದಾಯ ತೆರಿಗೆ ಇಲಾಖೆ ಕ್ಲೀನ್‍ಚಿಟ್ ನೀಡಿದೆ.

ಈ ಸಂಬಂಧ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‍ಗೆ ಮಾಹಿತಿ ನೀಡಿದ್ದು, ನ್ಯಾ. ಬಾಲಕೃಷ್ಣನ್ ಅವರಿಗೆ ನಿರಾಳ ತಂದಿದೆ. 2007 ರಿಂದ 2010ರ ವರೆಗೆ ಸಿಜೆಐ ಆಗಿದ್ದ ಸಂದರ್ಭದಲ್ಲಿ ಅವರ  ಸಂಬಂಧಿಕರು ಅಕ್ರಮವಾಗಿ ಆಸ್ತಿಗಳಿಸಿದ್ದರು ಎಂಬ ಆರೋಪ ಕೇಳಿಬಂದಿತ್ತು. ಈ ಸಂಬಂಧ ತನಿಖೆ ನಡೆಸಿದ ಆದಾಯ ತೆರಿಗೆ ಇಲಾಖೆ, ನ್ಯಾ. ಬಾಲಕೃಷ್ಣನ್ ವಿರುದ್ಧ ಯಾವುದೇ ಸಾಕ್ಷ್ಯಾಧಾರ  ದೊರೆತಿಲ್ಲ ಎಂದು ಹೇಳಿದೆ. ಅಟಾರ್ನಿ ಜನರಲ್ ಮುಕುಲ್ ರೋಹಟಗಿ ಅವರು ನ್ಯಾಯಪೀಠಕ್ಕೆ ಈ ಮಾಹಿತಿ ನೀಡಿದ್ದಾರೆ.

ತಾವು ಮುಚ್ಚಿದ ಲಕೋಟೆಯಲ್ಲಿ ಸ್ಥಿತಿಗತಿ ವರದಿ ಸಲ್ಲಿಸುತ್ತೇನೆ. ಆದರೆ ಅವರ ವಿರುದ್ಧ ಯಾವುದೇ ಆರೋಪಗಳು ಸಾಬೀತಾಗಿಲ್ಲ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com