

ಗುವಾಹಟಿ: ನಿಷೇಧಿತ ಉಗ್ರಗಾಮಿ ಸಂಘಟನೆ ಉಲ್ಪಾ ನಾಯಕ ಅನುಪ್ ಚೆಟಿಯಾನನ್ನು ಟ್ರಾನ್ಸಿಟ್ ರಿಮಾಂಡ್ನಲ್ಲಿ ಸಿಬಿಐ ಗುವಾಹಟಿಗೆ ಬಿಗಿ ಭದ್ರತೆಯಲ್ಲಿ ಕರೆತರಲಾಗಿದ್ದು ಚೀಫ್ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.
ಬಾಂಗ್ಲಾದೇಶದಿಂದ ಹಸ್ತಾಂತರ ಗೊಂಡಿದ್ದ ಅನೂಪ್ ಛೆಟಿಯಾನನ್ನು ಸಿಬಿಐ ವಶಕ್ಕೆ ಪಡೆದುಕೊಂಡಿತ್ತು. ಈಗ ಚೆತಿಯಾ ಟ್ರಾನ್ಸಿಟ್ ರಿಮಾಂಡ್ ಮುಕ್ತಾಯವಾದ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
1986ರಲ್ಲಿ ಅಸ್ಸಾಂನಲ್ಲಿ ಸಂಭವಿಸಿದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಲು ಸಿಬಿಐ ಆತನನ್ನು ತನ್ನ ಬಳಿ ಇಟ್ಟುಕೊಂಡಿದೆ. ಚೆತಿಯಾ ಈ ಕೊಲೆ ಪ್ರಕರಣದಲ್ಲಿ ಷಾಮೀಲಾಗಿದ್ದ ಎಂದು ಆಪಾದಿಸಲಾಗಿದೆ. ಇನ್ನೂ ಜಾಮೀನಿಗಾಗಿ ಮನವಿ ಸಲ್ಲಿಸಲಾಗಿದೆ ಎಂದು ಅನೂಪ್ ಛೆಟಿಯಾ ಪರ ವಕೀಲ ಬಿಜನ್ ಮಹಾಜವನ್ ತಿಳಿಸಿದ್ದಾರೆ.