ತೆಲಂಗಾಣ: ನಕ್ಸಲರಿಂದ 6 ಟಿಆರ್‌ಎಸ್‌ ಮುಖಂಡರ ಅಪಹರಣ

ತೆಲಂಗಾಣದ ಕಮ್ಮಂ ಜಿಲ್ಲೆಯಲ್ಲಿ ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್‌ಎಸ್‌)ಯ ಆರು ಮಂದಿ ಮುಖಂಡರನ್ನು ಕಳೆದ ರಾತ್ರಿ ನಕ್ಸಲರು ಅಪಹರಣ ಮಾಡಿದ್ದಾರೆ...
ನಕ್ಸಲ್
ನಕ್ಸಲ್
Updated on
ತೆಲಂಗಾಣ: ತೆಲಂಗಾಣದ ಕಮ್ಮಂ ಜಿಲ್ಲೆಯಲ್ಲಿ ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್‌ಎಸ್‌)ಯ ಆರು ಮಂದಿ ಮುಖಂಡರನ್ನು ಕಳೆದ ರಾತ್ರಿ ನಕ್ಸಲರು ಅಪಹರಿಸಿದ್ದಾರೆ.
ನಕ್ಸಲರ ವಿರುದ್ಧ ಕೂಂಬಿಂಗ್ ಕಾರ್ಯಾಚರಣೆ ಹಾಗೂ ನಕಲಿ ಎನ್ಕೌಂಟರ್ ಸ್ಧಗಿತಕ್ಕೆ ಆಗ್ರಹಿಸಿ ನಕ್ಸಲರು ಟಿಆರ್‌ಎಸ್‌ ನ ಆರು ಮಂದಿ ಮುಖಂಡರಾದ ರಾಮಕೃಷ್ಣ, ಸುರೇಶ್, ನರಸಿಂಹ, ವೆಂಕಟೇಶ್ವರಲು, ಯು. ರಾಮಕೃಷ್ಣ ಹಾಗೂ ಸತ್ಯನಾರಾಯಣ ಎಂಬುವರನ್ನು ಅಪಹರಿಸಿದ್ದಾರೆ. 
ಟಿಆರ್‌ಎಸ್‌ ಮುಖಂಡರನ್ನು ಅಪಹರಿಸಿರುವ ನಕ್ಸಲರು ಅಪಹರಣ ಸ್ಥಳದಲ್ಲಿ ಪತ್ರವನ್ನು ಇರಿಸಿದ್ದು, ಪತ್ರದಲ್ಲಿ ನಕ್ಸಲರ ನಕಲಿ ಎನ್ಕೌಂಟರ್ ಹಾಗೂ ಕೂಂಬಿಂಗ್ ಕಾರ್ಯಾಚರಣೆ ನಿಲ್ಲಿಸುವಂತೆ ಆಗ್ರಹಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com