
ಕಾನ್ಪುರ: ವಿವಾದಾದ್ಮಕ ಹೇಳಿಕೆಗಳನ್ನು ನೀಡಿ ಹಲವು ವಿರೋಧಗಳಿಗೆ ಕಾರಣವಾಗಿದ್ದ ಉತ್ತರ ಪ್ರದೇಶದ ಅಲ್ಪಸಂಖ್ಯಾತ ಕಲ್ಯಾಣ ಖಾತೆ ಸಚಿವ ಅಜಂ ಖಾನ್ ಅವರು ಈಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ನ್ಯಾಯಕ್ಕಾಗಿ ಸಹಾಯ ಕೇಳಿಬಂದ ಅತ್ಯಾಚಾರ ಸಂತ್ರಸ್ತೆಯೊಬ್ಬಳಿಗೆ ಅಪಮಾನದ ಕೆಲಸಕ್ಕೆ ಪ್ರಚಾರ ಪ್ರಯತ್ನ ಬೇಡವೆಂದು ಅವರು ಗುರುವಾರ ಹೇಳಿದ್ದಾರೆ.
ಬಿಹಾರದಲ್ಲಿ ನಿನ್ನೆ ನಡೆದ ಗಂಗಾ ಕಿ ಪುಕಾರ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅತ್ಯಾಚಾರ ಸಂತ್ರಸ್ತೆಯ ಮನವಿಯನ್ನು ಸ್ವೀಕರಿಸುತ್ತೇನೆ ಮತ್ತು ಆಕೆಗೆ ನ್ಯಾಯ ಒದಗಿಸಲು ನಾನು ಆಕೆಯ ಜೊತೆ ಹೋಗುತ್ತೇನೆ. ಆದರೆ, ಆಕೆ ಇದರಿಂದ ಖಂಡಿತವಾಗಿಯೂ ಪ್ರಚಾರ ಗಿಟ್ಟಿಸಿಕೊಳ್ಳುತ್ತಾಳೆ. ಸಂತ್ರಸ್ತೆ ನೀಡಿರುವ ದೂರಿನಲ್ಲಿ ಪ್ರಕರಣಕ್ಕೂ ಆಕೆಗೂ ಸಂಬಂಧವಿರುವುದು ಖಚಿತವಾಗಿದೆ. ಇಂತಹ ಅಪಕೀರ್ತಿಯ ಕೆಲಸಕ್ಕೆ ಶಿಕ್ಷೆಯನ್ನು ಆಕೆ ಅನುಭವಿಸುತ್ತಿದ್ದಾಳೆ. ಆದರೆ ಇಂತಹ ಪ್ರಕರಣವನ್ನು ದೊಡ್ಡದು ಮಾಡುತ್ತಾ ಹೋದರೆ ಮುಂದೆ ಏನಾಗುತ್ತದೆ ಎಂಬುದನ್ನು ಆಲೋಚಿಸಬೇಕಿದೆ. ಮುಂದಿನ ದಿನಗಳಲ್ಲಿ ಪ್ರಪಂಚವನ್ನು ಹೇಗೆ ಎದುರಿಸುತ್ತಾಳೆ ಎಂದು ಹೇಳಿದ್ದಾರೆ.
ಜುಲೈ 27 ರಂದು ಅತ್ಯಾಚಾರ ಘಟನೆ ನಡೆದಿತ್ತು. ಘಟನೆ ಸಂಬಂಧ ನ್ಯಾಯಕ್ಕಾಗಿ ಹಾಗೂ ಸಹಾಯಕ್ಕಾಗಿ ಅತ್ಯಾಚಾರಕ್ಕೊಳಗಾದ ಮಹಿಳೆ ಹಲವು ದಿನಗಳಿಂದಲೂ ಸಚಿವರನ್ನು ಭೇಟಿ ಮಾಡಲು ಪ್ರಯತ್ನಿಸುತ್ತಲೇ ಇದ್ದಾರೆ. ಆದರೆ, ಇದು ಈ ವರೆಗೂ ಸಾಧ್ಯವಾಗಲಿಲ್ಲ. ಭ್ರಷ್ಟ ಅಧಿಕಾರಿಗಳು ಸಚಿವರನ್ನು ಭೇಟಿ ಮಾಡಲು ಅವಕಾಶ ನೀಡುತ್ತಿರಲಿಲ್ಲ ಎಂದು ಸಂತ್ರಸ್ತೆಯ ಪರ ವಕೀಲ ಮಾಧ್ಯಮಗಳ ಬಳಿ ಹೇಳಿಕೊಂಡಿದ್ದಾರೆ.
ಸಚಿವರನ್ನು ಭೇಟಿಯಾಗ ನೋವಿನಲ್ಲಿದ್ದ ಸಂತ್ರಸ್ತೆ, ಅಜಂಖಾನ್ ಅವರು ಕಾರ್ಯಕ್ರಮಕ್ಕೆ ಹಾಜರಾಗುತ್ತಿದ್ದಂತೆ ಕಾರ್ಯಕ್ರಮದ ಹೊರಾಂಗಣದಲ್ಲಿ ನ್ಯಾಯಕ್ಕಾಗಿ ಪ್ರತಿಭಟನೆಗಿಳಿದಿದ್ದರು. ಈ ವಿಷಯ ತಿಳಿದ ಅಜಂಖಾನ್ ಅವರು ಕಾರ್ಯಕ್ರಮದಲ್ಲಿ ಅತ್ಯಾಚಾರ ಸಂತ್ರಸ್ತೆ ಕುರಿತಂತೆ ಈ ರೀತಿಯಾಗಿ ಹೇಳಿಕೆ ನೀಡಿದ್ದರು.
ಇದೀಗ ಅಜಂಖಾನ್ ಅವರ ಈ ಹೇಳಿಕೆಗೆ ಹಲವು ವಿರೋಧಗಳು ವ್ಯಕ್ತವಾಗುತ್ತಿದ್ದು, ಅಜಂಖಾನ್ ಅವರು ಮಹಿಳೆಯರಿಗೆ ಅವಮಾನಿಸಿದ್ದಾರೆಂದು ಬಿಜೆಪಿ ನಾಯಕ ಲಕ್ಷ್ಮಿಕಾಂತ್ ಬಾಜ್ಪಾಯ್ ಹೇಳಿದ್ದಾರೆ.
ತಮ್ಮ ಪಕ್ಷದ ಸಚಿವರೊಬ್ಬರು ಈ ರೀತಿಯ ಬೇಜವಾಬ್ದಾರಿಯುತ ಹೇಳಿಕೆ ನೀಡುತ್ತಿದ್ದರು ಮುಲಾಯಂ ಸಿಂಗ್ ಮತ್ತು ಅಖಿಲೇಶ್ ಯಾದವ್ ಅವರು ಕ್ರಮ ಕೈಗೊಳ್ಳುತ್ತಿಲ್ಲ ಯಾಕೆ? ಹೇಳಿಕೆ ಕುರಿತಂತೆ ಅಖಿಲೇಶ್ ಅವರು ತಮ್ಮ ಮೌನವನ್ನು ಮುಂದುವರಿಸಿದ್ದೇ ಆದರೆ, ಪಕ್ಷದ ವರ್ಚಸ್ಸನ್ನು ಹಾಳಾಗಲಿದೆ. ನಿಜಕ್ಕೂ ಅಖಿಲೇಶ್ ಅವರು ಮಹಿಳೆಯರನ್ನು ಗೌರವಿಸುವುದೇ ಆದರೆ, ಅಜಂಖಾನ್ ವಿರುದ್ಧ ಕ್ರಮ ಕೈಗೊಳ್ಳಲಿ ಎಂದು ಬಾಜ್ಪಾಯ್ ಹೇಳಿದ್ದಾರೆ.
Advertisement