ನಿತೀಶ್ ಸಂಪುಟದಲ್ಲಿ ಯಾರಿಗೆ ಒಲಿಯಲಿದೆ ಸಚಿವ ಸ್ಥಾನ?

ಬಿಹಾರದ ಮುಖ್ಯಮಂತ್ರಿಯಾಗಿ 5ನೇ ಬಾರಿಗೆ ನಿತೀಶ್ ಕುಮಾರ್ ಅವರು ಶುಕ್ರವಾರ ಪ್ರಮಾಣ ವಚನ ಸ್ವೀಕರಿಸಲಿದ್ದು, ನಿತೀಶ್ ಸಂಪುಟದಲ್ಲಿ ಯಾರು ಸ್ಥಾನಗಳಿಸಲಿದ್ದಾರೆ ಎಂಬ ಚರ್ಚೆ ವ್ಯಾಪಕವಾಗಿದೆ...
ನಿತೀಶ್ ಕುಮಾರ್, ಲಾಲು ಪ್ರಸಾದ್ ಯಾದವ್ ಮತ್ತು ಲಾಲು ಪುತ್ರ ತೇಜ್ ಪ್ರತಾಪ್ (ಸಂಗ್ರಹ ಚಿತ್ರ)
ನಿತೀಶ್ ಕುಮಾರ್, ಲಾಲು ಪ್ರಸಾದ್ ಯಾದವ್ ಮತ್ತು ಲಾಲು ಪುತ್ರ ತೇಜ್ ಪ್ರತಾಪ್ (ಸಂಗ್ರಹ ಚಿತ್ರ)

ಪಾಟ್ನಾ: ಬಿಹಾರದ ಮುಖ್ಯಮಂತ್ರಿಯಾಗಿ 5ನೇ ಬಾರಿಗೆ ನಿತೀಶ್ ಕುಮಾರ್ ಅವರು ಶುಕ್ರವಾರ ಪ್ರಮಾಣ ವಚನ ಸ್ವೀಕರಿಸಲಿದ್ದು, ನಿತೀಶ್ ಸಂಪುಟದಲ್ಲಿ ಯಾರು ಸ್ಥಾನಗಳಿಸಲಿದ್ದಾರೆ ಎಂಬ ಚರ್ಚೆ ವ್ಯಾಪಕವಾಗಿದೆ.

ಮೂಲಗಳ ಪ್ರಕಾರ ಬಿಹಾರ ಚುನಾವಣೆಯಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಆರ್ ಜೆಡಿ ಪಕ್ಷಕ್ಕೇ ಅಧಿಕ ಮಂತ್ರಿ ಸ್ಥಾನ ಅಂದರೆ 13 ಸ್ಥಾನಗಳ ಲಭ್ಯವಾಗುವ ಸಾಧ್ಯತೆ ಇದೆ. ಇನ್ನು  ಜೆಡಿಯುಗೆ 12 ಸ್ಥಾನ ಮತ್ತು ಕಾಂಗ್ರೆಸ್ ಗೆ 6 ಸ್ಥಾನಗಳನ್ನು ಹಂಚಿಕೆ ಮಾಡಲು ಮಹಾಘಟ್ ಬಂಧನ್ ಮೈತ್ರಿಕೂಟ ನಿರ್ಧರಿಸಿದೆ. ಇದಲ್ಲದೆ ಲಾಲು ಪ್ರಸಾದ್ ಯಾದವ್ ಪುತ್ರರಲ್ಲಿ ಒಬ್ಬರಿಗೆ ಸಂಪುಟದಲ್ಲಿ ಪ್ರಮುಖ ಸ್ಥಾನ ಅಂದರೆ ಗೃಹ ಸಚಿವ ಅಥವಾ ಉಪ ಮುಖ್ಯಮಂತ್ರಿ ಸ್ಥಾನ ನೀಡಲಾಗುತ್ತದೆ ಎಂದು ತಿಳಿದುಬಂದಿದೆ.

ನಿತೀಶ್ ಸಂಪುಟದ ಸಂಭಾವ್ಯ ಸಚಿವರ ಪಟ್ಟಿ ಇಂತಿದೆ.
ಆರ್ ಜೆಡಿ

ತೇಜ್ ಪ್ರತಾಪ್
ತೇಜಸ್ವಿ ಯಾದವ್
ಅಬ್ದುಲ್ ಬರಿ ಸಿದ್ದಿಕಿ
ರಾಮ್ ಚಂದ್ರ ಪುರ್ವೆ
ಮುಂದ್ರಿಕಾ ಸಿಂಗ್ ಯಾದವ್
ಸುಬೇದಾರ್ ದಾಸ್
ಡಾ.ಅಬ್ದುಲ್ ಗಫೂರ್
ಚಂದ್ರಿಕಾ ರಾಯ್
ಫೈಯಾಜ್ ಅಹ್ಮದ್
ಸಮ್ತಾ ದೇವಿ
ರಾಮ್ ವಿಚಾರ್ ರಾಯ್
ಮಹೇಶ್ವರ್ ಪ್ರಸಾದ್ ಯಾದವ್
ಶ್ರೀನಾರಾಯಣ್ ಯಾದವ್

ಜೆಡಿಯು
ವಿಜಯ್ ಕುಮಾರ್ ಚೌದರಿ
ಶ್ಯಾಮ್ ರಜಾಕ್
ಬಿಜೇಂದರ್ ಪ್ರಸಾದ್ ಯಾದವ್
ರಾಜಿವ್ ರಂಜನ್ ಸಿಂಗ್ ಅಲಿಯಾಸ್ ಲಲನ್ ಸಿಂಗ್
ಪಿಕೆ ಶಾಹಿ
ನರೇಂದ್ರ ನಾರಾಯಣ್ ಯಾದವ್
ಜಯ ಕುಮಾರ್ ಸಿಂಗ್
ಶ್ರವಣ್ ಕುಮಾರ್
ವಿಜಯ್ ಕುಮಾರ್ ಮಿಶ್ರಾ
ಲೆಸಿ ಸಿಂಗ್
ಜಾವೆದ್ ಇಕ್ಬಾಲ್ ಅನ್ಸಾರಿ
ಮಹೇಶ್ವರ್ ಹಜಾರಿ

ಕಾಂಗ್ರೆಸ್

ಅಶೋಕ್ ಕುಮಾರ್ ಚೌದರಿ
ಸದಾನಂದ್ ಸಿಂಗ್
ಡಾ.ಮಹಮದ್ ಜಾವೆದ್
ವಿಜಯ್ ಶಂಕರ್ ದುಬೆ
ಅಮಿತಾ ಭೂಷಣ್
ಅಶೋಕ್ ಕುಮಾರ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com