ಮಹಿಳಾ ಅಧಿಕಾರಿಯ ಮಡಿಲಲ್ಲಿ ಕುಳಿತ ಪೊಲೀಸ್; ಸಾಮಾಜಿಕ ತಾಣದಲ್ಲಿ ವೈರಲ್ ಆದ ಫೋಟೋ

ರಜೌರಿ ಜಿಲ್ಲೆಯ ಬುಧಾಲ್ ಪೊಲೀಸ್ ಠಾಣೆಯಲ್ಲಿ ಬಿಳಿಗಡ್ಡದ ಪೊಲೀಸ್ ಒಬ್ಬರು ಮಹಿಳಾ ಪೊಲೀಸ್ ಅಧಿಕಾರಿಯ ಮಡಿಲಲ್ಲಿ ಕುಳಿತ...
ಮಹಿಳಾ ಪೊಲೀಸ್ ಅಧಿಕಾರಿಯ ಮಡಿಲಲ್ಲಿ ಕುಳಿತ ಪೊಲೀಸ್  (ಕೃಪೆ: ಟ್ವಿಟರ್ )
ಮಹಿಳಾ ಪೊಲೀಸ್ ಅಧಿಕಾರಿಯ ಮಡಿಲಲ್ಲಿ ಕುಳಿತ ಪೊಲೀಸ್ (ಕೃಪೆ: ಟ್ವಿಟರ್ )
ಜಮ್ಮು:  ರಜೌರಿ ಜಿಲ್ಲೆಯ ಬುಧಾಲ್ ಪೊಲೀಸ್ ಠಾಣೆಯಲ್ಲಿ ಬಿಳಿಗಡ್ಡದ ಪೊಲೀಸ್ ಒಬ್ಬರು ಮಹಿಳಾ ಪೊಲೀಸ್ ಅಧಿಕಾರಿಯ ಮಡಿಲಲ್ಲಿ ಕುಳಿತ ಫೋಟೊವೊಂದು ಈಗ ಸಾಮಾಜಿಕ ತಾಣದಲ್ಲಿ ಸಂಚಲನ ಸೃಷ್ಟಿಸಿದೆ.
 ಪೊಲೀಸ್ ಠಾಣೆಯಲ್ಲಿ ಕುರ್ಚಿಯಲ್ಲಿ ಆಸೀನರಾಗಿದ್ದ ಮಹಿಳಾ ಎಸ್‌ಪಿಒ (ಸ್ಪೆಷಲ್ ಪೊಲೀಸ್ ಆಫೀಸರ್ ) ಮಡಿಲಲ್ಲಿ ಜಕೀರ್ ಹುಸೈನ್ ಎಂಬ ಪೊಲೀಸ್ ಹೆಡ್ ಕಾನ್‌ಸ್ಟೇಬಲ್ ಕುಳಿತುಕೊಂಡಿರುವ ಫೋಟೋ ಫೇಸ್‌ಬುಕ್ ಮತ್ತು ವಾಟ್ಸಾಪ್‌ನಲ್ಲಿ ಹರಿದಾಡುತ್ತಿದೆ.
ಆಗಸ್ಟ್ ತಿಂಗಳಲ್ಲಿ ಈ ಘಟನೆ ನಡೆದಿತ್ತು. ಈ ಫೋಟೋ ನಮ್ಮ ಗಮನಕ್ಕೆ ಬಂದ ಕೂಡಲೇ ನಾವು ಹೆಡ್ ಕಾನ್‌ಸ್ಟೇಬಲ್‌ನ್ನು ನೌಕರಿಯಿಂದ ವಜಾ ಮಾಡಿದ್ದೇವೆ ಎಂದು  ರಜೌರಿ -ಪೂಂಚ್ ರೇಂಜ್‌ನ ಡಿಐಜಿ  ಎಕೆ ಆತ್ರಿ ಹೇಳಿದ್ದಾರೆ.
ಅದೇ ವೇಳೆ ಈ ಘಟನೆಗೆ ಸಂಬಂಧಿಸಿದಂತೆ ಮಹಿಳಾ ಪೊಲೀಸ್ ಅಧಿಕಾರಿ ಮತ್ತು ಪೊಲೀಸ್ ಇಲಾಖೆಯಲ್ಲಿದ್ದ ಇತರರ ವಿರುದ್ಧ ತನಿಖೆ ನಡೆಸಲಾಗಿದೆ.
ಪೊಲೀಸರ ಈ ರೀತಿಯ ವರ್ತನೆಯನ್ನು ನಾವು ಸಹಿಸುವುದಿಲ್ಲ ಎಂದು ಡಿಐಜಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com