ಗ್ರೀನ್ ಪೀಸ್ ಇಂಡಿಯಾ ನೋಂದಣಿ ರದ್ದತಿಗೆ ತಡೆ

ಗ್ರೀನ್ ಪೀಸ್ ಇಂಡಿಯಾ ಸೊಸೈಟಿಯ ನೋಂದಣಿ ರದ್ದು ಮಾಡಿದ್ದ ಕೇಂದ್ರ ಸರ್ಕಾರದ ಕ್ರಮಕ್ಕೆ ಮದ್ರಾಸ್ ಹೈಕೋರ್ಟ್ ತಡೆ ನೀಡಿದೆ...
ಗ್ರೀನ್ ಪೀಸ್ ಇಂಡಿಯಾ (ಸಂಗ್ರಹ ಚಿತ್ರ)
ಗ್ರೀನ್ ಪೀಸ್ ಇಂಡಿಯಾ (ಸಂಗ್ರಹ ಚಿತ್ರ)

ಚೆನ್ನೈ: ಗ್ರೀನ್ ಪೀಸ್ ಇಂಡಿಯಾ ಸೊಸೈಟಿಯ ನೋಂದಣಿ ರದ್ದು ಮಾಡಿದ್ದ ಕೇಂದ್ರ ಸರ್ಕಾರದ ಕ್ರಮಕ್ಕೆ ಮದ್ರಾಸ್ ಹೈಕೋರ್ಟ್ ತಡೆ ನೀಡಿದೆ.

ನೋಂದಣಿ ಕಚೇರಿಯ ನ.4ರ ಆದೇಶವನ್ನು ಪ್ರಶ್ನಿಸಿ ಗ್ರೀನ್‍ಪೀಸ್ ಸಲ್ಲಿಸಿದ್ದ ಅರ್ಜಿಯನ್ನು ಪರಿಶೀಲಿಸಿದ ನ್ಯಾ.ಎಂ.ಎಂ. ಸುಂದ್ರೇಶ್ ಮಧ್ಯಂತರ ತಡೆಯಾಜ್ಞೆ ನೀಡಿರುವುದಲ್ಲದೆ, ನಾಲ್ಕು  ವಾರದೊಳಗೆ ಸ್ಪಷ್ಟೀಕರಣ ಕೊಡಬೇಕೆಂದು ಜಿಲ್ಲಾ ನೋಂದಣಾಧಿಕಾರಿಗಳಿಗೆ ನೋಟಿಸ್ ನೀಡಿದರು. ಗ್ರೀನ್‍ಪೀಸ್ ಇಂಡಿಯಾದ ಕಾರ್ಯಕಾರಿ ನಿರ್ದೇಶಕ ವಿನುತಾ ಗೋಪಾಲ್ ಅವರು  ಸಲ್ಲಿಸಿದ್ದ ಅರ್ಜಿಯಲ್ಲಿ ``ರಿಜಿಸ್ಟ್ರಾರ್ ಅವರು ಸಾಮಾಜಿಕ ನ್ಯಾಯದ ತತ್ವಗಳನ್ನೇ ಕಡೆಗಣಿಸಿ ಏಕಾಏಕಿ ಆದೇಶ ನೀಡಿದ್ಧಾರೆ.

ನಮಗೆ ವಿವರಣೆ ನೀಡುವ ಅವಕಾಶವನ್ನೂ ನೀಡಿಲ್ಲ. ಅದು ರಿಜಿಸ್ಟ್ರಾರ್ ವ್ಯಾಪ್ತಿಯಲ್ಲಿ ಇಲ್ಲದಾಗ್ಯೂ ಅವರು ಆದೇಶ ನೀಡಿದರು'' ಎಂದು ಉಲ್ಲೇಖಿಸಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರೀನ್  ಪೀಸ್ ಇಂಡಿಯಾ ಕೇಂದ್ರ ಸರ್ಕಾರಕ್ಕೆ ಮದ್ರಾಸ್ ಹೈಕೋರ್ಟ್ ತೀರ್ಪಿನಿಂದ ಮುಖಭಂಗವಾದಂತಾಗಿದೆ ಎಂದು ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com