ಕೇಂದ್ರ ಮಾಜಿ ಸಚಿವೆ ಪ್ರಣೀತ್ ಕೌರ್
ಕೇಂದ್ರ ಮಾಜಿ ಸಚಿವೆ ಪ್ರಣೀತ್ ಕೌರ್

ಪ್ರಣೀತ್ ಕೌರ್ ಕಪ್ಪು ಹಣ ವಿಚಾರಣೆ: ಸ್ವಿಸ್ ಸಹಕಾರ ಕೇಳಿದ ಭಾರತ

ಸ್ವಿಡ್ಜರ್ಲೆಂಡಿನ ಬ್ಯಾಂಕ್ ಖಾತೆಗಳಲ್ಲಿ ಹಲವು ಭಾರತೀಯರು ಹಣ ಇಟ್ಟಿರುವ ಬಗ್ಗೆ ತೆರಿಗೆ ಇಲಾಖೆ ಅಧಿಕಾರಿಗಳು...

ಬರ್ನೆ/ನವದೆಹಲಿ: ಸ್ವಿಡ್ಜರ್ಲೆಂಡಿನ ಬ್ಯಾಂಕ್ ಗಳಲ್ಲಿ ಖಾತೆ ಹೊಂದಿರುವ ಹಲವು ಭಾರತೀಯರ ವಿರುದ್ಧ ತೆರಿಗೆ ಇಲಾಖೆ ಅಧಿಕಾರಿಗಳು ತನಿಖೆ ಮುಂದುವರಿಸಿದ್ದು, ಕಾಂಗ್ರೆಸ್ ನ ಮಾಜಿ ಸಚಿವೆ ಪ್ರಣೀತ್ ಕೌರ್ ಮತ್ತು ಅವರ ಪುತ್ರ ರಣೀಂದರ್ ಸಿಂಗ್ ಅವರ ತನಿಖೆ ನಡೆಸಲು ಭಾರತ ಸಹಾಯ ಕೋರಿದೆ ಎಂದು ಸ್ವಿಡ್ಜರ್ಲೆಂಡ್ ತಿಳಿಸಿದೆ.

ಸ್ವಿಡ್ಜರ್ಲೆಂಡಿನ ಫೆಡರಲ್ ತೆರಿಗೆ ಆಡಳಿತ ಕೇಸಿಗೆ ಸಂಬಂಧಿಸಿ ಇನ್ನು ಹತ್ತು ದಿನಗಳೊಳಗೆ ಮನವಿ ಸಲ್ಲಿಸುವಂತೆ ಸೂಚಿಸಿದೆ.ಈ ಕುರಿತು ಅಧಿಸೂಚನೆ ಹೊರಡಿಸಿದೆ. ಸ್ವಿಡ್ಜರ್ಲೆಂಡ್ ಹೊರಡಿಸಿದ ಅಧಿಸೂಚನೆಯಲ್ಲಿ ಪ್ರಣೀತ್ ಕೌರ್ ಮತ್ತು ಅವರ ಪುತ್ರನ ರಾಷ್ಟ್ರೀಯತೆ ಮತ್ತು ಹುಟ್ಟಿದ ದಿನಾಂಕ ಬಿಟ್ಟರೆ ಬೇರೆನನ್ನೂ ಬಹಿರಂಗಪಡಿಸಿಲ್ಲ.

ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯೆ ನೀಡಲು ಪ್ರಣೀತ್ ಕೌರ್ ಲಭ್ಯರಾಗಿಲ್ಲ. ಈ ಹಿಂದೆ ಸೋರಿಕೆಗೊಂಡ ಎಚ್ ಎಸ್ ಬಿಸಿ ಪಟ್ಟಿಯಲ್ಲಿ ಕೌರ್ ಮತ್ತು ಅವರ ಪುತ್ರನ ಹೆಸರಿತ್ತಾದರೂ ಆರಂಭದಲ್ಲಿ ಅವರು ಒಪ್ಪಿಕೊಂಡಿರಲಿಲ್ಲ.

Related Stories

No stories found.

Advertisement

X
Kannada Prabha
www.kannadaprabha.com