ಮ್ಯಾಗಿ ಪಾಸ್ತಾದಲ್ಲಿ ವಿಷಕಾರಿ ಅಂಶ ಪತ್ತೆ: ಆರೋಪ ತಳ್ಳಿ ಹಾಕಿದ ನೆಸ್ಲೆ

ನೆಸ್ಲೆ ಕಂಪನಿಯ ಮತ್ತೊಂದು ಉತ್ಪನ್ನವಾದ ಪಾಸ್ತಾದಲ್ಲಿ ವಿಷಕಾರಿ ಸೀಸದ ಅಂಶ ಪತ್ತೆಯಾಗಿದೆ ಎಂದು ಉತ್ತರ ಪ್ರದೇಶ ಸರ್ಕಾರದ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ನೆಸ್ಲೆ ಕಂಪನಿಯ ಮತ್ತೊಂದು ಉತ್ಪನ್ನವಾದ ಪಾಸ್ತಾದಲ್ಲಿ ವಿಷಕಾರಿ ಸೀಸದ ಅಂಶ ಪತ್ತೆಯಾಗಿದೆ ಎಂದು ಉತ್ತರ ಪ್ರದೇಶ ಸರ್ಕಾರದ ಅಧೀನದ ಪ್ರಯೋಗಾಲಯ ವರದಿ ಮಾಡಿದ್ದು, ಈ ಮೂಲಕ ಮ್ಯಾಗಿ ಮೇಲಿನ ನಿಷೇಧದಿಂದ ಚೇತರಿಸಿಕೊಂಡು ಹೊಸ ಉತ್ಪನ್ನ ಬಿಡುಗಡೆಗೊಳಿಸಿರುವ ನೆಸ್ಲೆ ಕಂಪನಿಗೆ ಮತ್ತೊಂದು ಸಂಕಟ ಎದುರಾದಂತಾಗಿದೆ. 
ಉತ್ತರ ಪ್ರದೇಶದ ಮೌವಿಲೆಯಲ್ಲಿಯ ನೆಸ್ಲೆ ಉತ್ಪನ್ನಗಳನ್ನು ವಿತರಣೆ ಮಾಡುವ ಶ್ರೀಜಿ ಟ್ರೇಡರ್ಸ್ ಶೇಖರಿಸಿಟ್ಟಿದ್ದ ಪಾಸ್ತಾ ಮಾದರಿಗಳನ್ನು ಲಖ್ನೋ ನ್ಯಾಶನಲ್  ಫುಡ್ ಅನಾಲಿಸಿಸ್ ಲ್ಯಾಬರೇಟರಿಗೆ ಪರಿಶೋಧನೆಗೆ ಕಳುಹಿಸಿತ್ತು. ಈ ಮಾದರಿಗಳನ್ನು ಪರೀಕ್ಷಿಸಿದಾಗ 6 ಪಿಪಿಎಂ ಸೀಸದ ಅಂಶಗಳಿರುವುದು ಪತ್ತೆಯಾಗಿದೆ. ಅನುಮತಿಸಲಾದ 2.5 ಪಿಪಿ ಎಂ ಸೀಸದ ಅಂಶಗಳಿಗಿಂತಲೂ ಅಪಾಯಕಾರಿ ಮಟ್ಟದಲ್ಲಿ ಇರುವುದು ಪತ್ತೆಯಾಗಿದೆ ಎಂದು ಪ್ರಯೋಗಾಲಯ ಹೇಳಿದೆ. 
ಆದರೆ ಈ ಆರೋಪವನ್ನು ತಳ್ಳಿ ಹಾಕಿರುವ ನೆಸ್ಲೆ ಕಂಪನಿ, ಪಾಸ್ತಾದಲ್ಲಿ ಯಾವುದೇ ವಿಷಕಾರಿ ಅಂಶ ಇಲ್ಲ. ಪಾಸ್ತಾ ಶೇ.100ರಷ್ಟು ಸುರುಕ್ಷಿತವಾಗಿದ್ದು, ಉತ್ಪನ್ನ ತಯಾರಾಗುವ ವೇಳೆ ಪ್ರತಿಹಂತದಲ್ಲೂ ಪರೀಕ್ಷೆಗೆ ಒಳಪಡಿಸಲಾಗಿದೆ. ಹಾಗಾಗಿ, ಪಾಸ್ತಾ ಶೇ.100ರಷ್ಟು ಸುರಕ್ಷಿತ ಎಂದು ನೆಸ್ಲೆ ಕಂಪನಿ ಹೇಳಿದೆ.
ಈ ಸಂಬಂಧ ಪ್ರಯೋಗಾಲಯದ ಅಧಿಕಾರಿಗಳೊಂದಿಗೆ ಮಾತನಾಡಲಾಗುವುದು. ಅಧಿಕಾರಿಗಳ ಹೇಳಿಕೆಗಳನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ. ಪಾಸ್ತಾದಲ್ಲಿ ಯಾವುದೇ ವಿಷಕಾರಿ ಅಂಶ ಇಲ್ಲ. ನೂರಕ್ಕೆ ನೂರರಷ್ಟು ಸುರಕ್ಷಿತವಾಗಿದ್ದು, ಜನತೆ ಇದನ್ನು ಬಳಸಬಹುದಾಗಿದೆ ಎಂದು ನೆಸ್ಲೆ ಕಂಪನಿ ಸ್ಪಷ್ಟನೇ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com