ದೇವದಾಸಿ ಪದ್ಧತಿಗೆ ಕೊನೆ: ಉತ್ತರಿಸದ್ದಕ್ಕೆ ಸರ್ಕಾರಕ್ಕೆ 25 ಸಾವಿರ ದಂಡ

ನಮ್ಮ ದೇಶದಲ್ಲಿ ಇರುವ ಹಳೆಯ ದೇವದಾಸಿ ಪದ್ಧತಿಗೆ ಮಹಿಳೆಯರನ್ನು ಬಲವಂತವಾಗಿ ತಳ್ಳುವುದನ್ನು ತಪ್ಪಿಸುವ ಕುರಿತು...
ಸುಪ್ರೀಂ ಕೋರ್ಟ್ (ಸಂಗ್ರಹ ಚಿತ್ರ)
ಸುಪ್ರೀಂ ಕೋರ್ಟ್ (ಸಂಗ್ರಹ ಚಿತ್ರ)

ನವದೆಹಲಿ: ನಮ್ಮ ದೇಶದಲ್ಲಿ ಇರುವ ಹಳೆಯ ದೇವದಾಸಿ ಪದ್ಧತಿಗೆ ಮಹಿಳೆಯರನ್ನು ಬಲವಂತವಾಗಿ ತಳ್ಳುವುದನ್ನು ತಪ್ಪಿಸುವ ಕುರಿತು ಸಮಯಕ್ಕೆ ಸರಿಯಾಗಿ ಅಫಿದವಿಟ್ಟು ಸಲ್ಲಿಸುವುದಕ್ಕೆ ವಿಫಲವಾಗಿರುವುದಕ್ಕೆ ಸುಪ್ರೀಂ ಕೋರ್ಟ್ 25 ಸಾವಿರ ರೂಪಾಯಿ ದಂಡ ವಿಧಿಸಿದೆ.

ಸುಪ್ರೀಂ ಕೋರ್ಟ್ ನ ಮದನ್ ಬಿ ಲೋಕೂರ್ ಮತ್ತು ಯು.ಯು. ಲಲಿತ್ ಅವರನ್ನೊಳಗೊಂಡ ವಿಭಾಗೀಯ ಪೀಠ, ಸೆಪ್ಟೆಂಬರ್ 11ಕ್ಕೆ ಕೊ ನೆಯ ಬಾರಿಗೆ ಅವಕಾಶ ನೀಡಿದರೂ ಸಹ ಕೇಂದ್ರ ಸರ್ಕಾರ ಅರ್ಜಿ ಸಲ್ಲಿಸಿಲ್ಲ. ಆದುದರಿಂದ 25 ಸಾವಿರ ದಂಡ ಕಟ್ಟುವಂತೆ ಆದೇಶ ನೀಡಿದೆ. ಈ ಬಗ್ಗೆ ಏನಾದರೂ ಆಕ್ಷೇಪಗಳಿದ್ದಲ್ಲಿ ಉತ್ತರಿಸುವಂತೆ ನಾಲ್ಕು ವಾರಗಳ ಅವಕಾಶ ನೀಡಿದೆ.

ದೇವದಾಸಿ ಪದ್ಧತಿಯಿಂದ ಮಹಿಳೆಯರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದು, ಆ ಅನಿಷ್ಠ ಪದ್ಧತಿಯನ್ನು ಕಿತ್ತು ಹಾಕುವ ಬಗ್ಗೆ ಸಾಮೂಹಿಕವಾಗಿ ಅಫಿದವಿಟ್ಟು ಸಲ್ಲಿಸಲು ಕಳೆದ ಸೆಪ್ಟೆಂಬರ್ ನಲ್ಲಿ ಕೇಂದ್ರ ಸರ್ಕಾರ ಒಪ್ಪಿಕೊಂಡಿತ್ತು. ಸಮಯವನ್ನು ಮುಂದೂಡಲು ಸುಪ್ರೀಂ ಕೋರ್ಟ್ ಅವಕಾಶ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ದಂಡ ವಿಧಿಸಿತ್ತು. ಇದೀಗ ಅರ್ಜಿ ವಿಚಾರಣೆಯನ್ನು ಜನವರಿ 8ಕ್ಕೆ ನಿಗದಿಪಡಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com