'ಹಿಂದೂ ನಾಯಕ ಹೇಳಿಕೆ': ರಾಜನಾಥ ಸಿಂಗ್'ಗೆ ಕ್ಷಮೆಯಾಚಿಸಿದ ಔಟ್‌ಲುಕ್

800 ವರ್ಷಗಳ ಬಳಿಕ ಮೊದಲ ಹಿಂದೂ ಪ್ರಧಾನಿ ಹೇಳಿಕೆಯೊಂದು ಸೋಮವಾರ ನಡೆದ ಕಲಾಪದಲ್ಲಿ ಭಾರೀ ಗದ್ದಲವನ್ನುಂಟು ಮಾಡಿತ್ತು. ಇದೀಗ ಗೃಹ ಸಚಿವರು ಹೇಳಿಕೆ ನೀಡಿದ್ದಾರೆಂದು ಪ್ರಕಟಣೆ ಮಾಡಿದ್ದ ನಿಯತಕಾಲಿಕೆ ಪ್ರಕಟಣೆಗೆ ರಾಜನಾಥ ಸಿಂಗ್...
ಗೃಹ ಸಚಿವ ರಾಜನಾಥ ಸಿಂಗ್ (ಸಂಗ್ರಹ ಚಿತ್ರ)
ಗೃಹ ಸಚಿವ ರಾಜನಾಥ ಸಿಂಗ್ (ಸಂಗ್ರಹ ಚಿತ್ರ)

ನವದೆಹಲಿ: 800 ವರ್ಷಗಳ ಬಳಿಕ ಮೊದಲ ಹಿಂದೂ ಪ್ರಧಾನಿ ಹೇಳಿಕೆಯೊಂದು ಸೋಮವಾರ ನಡೆದ ಕಲಾಪದಲ್ಲಿ ಭಾರೀ ಗದ್ದಲವನ್ನುಂಟು ಮಾಡಿತ್ತು. ಇದೀಗ ಗೃಹ ಸಚಿವರು ಹೇಳಿಕೆ ನೀಡಿದ್ದಾರೆಂದು ಪ್ರಕಟಣೆ ಮಾಡಿದ್ದ ನಿಯತಕಾಲಿಕೆ ಪ್ರಕಟಣೆಗೆ ರಾಜನಾಥ ಸಿಂಗ್ ಬಳಿ ಮಂಗಳವಾರ ಕ್ಷಮೆಯಾಚಿಸಿದೆ ಎಂದು ತಿಳಿದುಬಂದಿದೆ.

'800 ವರ್ಷಗಳ ಬಳಿಕ ಮೊದಲ ಹಿಂದೂ ನಾಯಕರೊಬ್ಬರು ಪ್ರಧಾನಿಯಾಗಿದ್ದಾರೆಂದು ಗೃಹ ಸಚಿವರು ಹೇಳಿದ್ದಾರೆಂಬ ಲೇಖನವೊಂದನ್ನು ಔಟ್‌ಲುಕ್ ನಿಯತಕಾಲಿಕೆ ತನ್ನ ಆನ್ ಲೈನ್ ಆವೃತ್ತಿಯಲ್ಲಿ ಪ್ರಕಟಿಸಿತ್ತು.

ಈ ಲೇಖನವನ್ನು ಓದಿದ್ದ ಸಿಪಿಎಂ ನಾಯಕ  ಸಲೀಮ್ ಅವರು ನಿನ್ನೆಯಷ್ಟೇ ನಿಯತಕಾಲಿಕೆಯೊಂದಕ್ಕೆ 800 ವರ್ಷದ ಬಳಿಕ ಮೊದಲ ಹಿಂದೂ ನಾಯಕರೊಬ್ಬರು ದೇಶದ ಪ್ರಧಾನಿಯಾಗಿದ್ದಾರೆಂದು ರಾಜನಾಥ ಸಿಂಗ್ ಅವರು ಹೇಳಿದ್ದಾರೆಂದು ಆರೋಪಿಸಿದ್ದರು. ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದ ರಾಜನಾಥ್ ಸಿಂಗ್ ಅವರು ನಾನು ಈ ರೀತಿಯ ಹೇಳಿಕೆಯನ್ನು ನೀಡಿಯೇ ಇಲ್ಲ. ನೀಡಿದ್ದೇನೆಂದು ಹೇಳುತ್ತಿರುವ ಮೊಹಮ್ಮದ್ ಸಲೀಮ್ ಅವರು ದಾಖಲೆಯನ್ನೊದಗಿಸಲಿ. ಇಲ್ಲವೇ ಕ್ಷಮಾಯಾಚಿಸಲಿ ಎಂದು ಪಟ್ಟು ಹಿಡಿದಿದ್ದರು. ಸದನದಲ್ಲಿ ಗದ್ದಲವುಂಟಾದ ಕಾರಣ ಕಲಾಪವನ್ನು ಎರಡು ಬಾರಿ ಮುಂದೂಡಲಾಗಿತ್ತು.

ಈ ಎಲ್ಲಾ ಗದ್ದಲಕ್ಕೆ ಔಟ್ ಲುಕ್ ಪ್ರಕಟಣೆ ಕಾರಣವಾಗಿತ್ತು. ಈ ಪ್ರಕಟಣೆಗೆ ಇದೀಗ ಔಟ್ ಲುಕ್ ಗೃಹ ಸಚಿವರ ಬಳಿ ಕ್ಷಮೆಯಾಚಿಸಿದ್ದು, ಪ್ರಕಟಣೆಗೆ ವಿಷಾದವನ್ನು ವ್ಯಕ್ತಪಡಿಸಿದೆ.

ಮೂಲಗಳ ಪ್ರಕಾರ ಈ ಹೇಳಿಕೆಯನ್ನು ವಿಶ್ವ ಹಿಂದೂ ಪರಿಷತ್ ನ ನಾಯಕ ದಿವಂಗತ ಅಶೋಕ್ ಸಿಂಘಲ್ ಅವರು ನೀಡಿದ್ದು, ಇದೀಗ ಹೇಳಿಕೆಯನ್ನು ರಾಜನಾಥ ಸಿಂಗ್ ಅವರು ನೀಡಿದ್ದಾರೆಂದು ಪ್ರಕಟಿಸಲಾಗಿದೆ ಎಂದು ಹೇಳಲಾಗುತ್ತಿತ್ತು. ಹೀಗಾಗಿ ಪ್ರಕಟಣೆಗೆ ಕ್ಷಮೆಯಾಚಿಸಿರುವ ಔಟ್ ಲುಕ್ ನಿಯತಕಾಲಿಕೆ, ಹೇಳಿಕೆ ಕುರಿತ ಮೂಲಗಳನ್ನು ಪರಿಶೀಲಿಸಲಾಗುತ್ತಿದ್ದು, ಗೃಹ ಸಚಿವರ ಅಥವಾ ಸಂಸತ್ತಿನ ಹೆಸರಿಗೆ ಹಾನಿಯುಂಟು ಮಾಡುವುದು ನಮ್ಮ ಉದ್ದೇಶವಾಗಿರಲಿಲ್ಲ. ಪ್ರಕಟಣೆಯಿಂದಾಗಿ ರಾಜನಾಥ್ ಸಿಂಗ್ ಅವರಿಗೆ ಉಂಟಾದ ಅಪಮಾನಕ್ಕೆ ವಿಷಾದಿಸುತ್ತೇವೆ. ಶೀಘ್ರದಲ್ಲೇ ಹೇಳಿಕೆ ಕುರಿತ ಮೂಲಗಳನ್ನು ಪರಿಶೀಲಿಸಿ ಸರಿಪಡಿಸಲಾಗುವುದು ಎಂದು ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com