
ಮುಂಬೈ: ಶೀನಾ ಬೋರಾ ಹತ್ಯೆ ಪ್ರಕರಣದ ಆರೋಪಿ ಇಂದ್ರಾಣಿ ಮುಖರ್ಜಿ ಆತ್ಮಹತ್ಯೆಗೆ ಮುಂದಾಗಿದ್ದಾರೆ.
ಮೂರ್ಛೆರೋಗಕ್ಕೆ ತೆಗೆದುಕೊಳ್ಳುತ್ತಿದ್ದ ತಮ್ಮ ಬಳಿ ಇದ್ದ ಎಲ್ಲ ಮಾತ್ರೆ ತೆಗೆದುಕೊಂಡು ಸಾವಿಗೆ ಶರಣಾಗಲು ಮುಂದಾಗಿದ್ದಾರೆ ಹೇಳಲಾಗಿದೆ. ಘಟನೆಯ ಬಗ್ಗೆ ತನಿಖೆ ನಡೆಸುವಂತೆ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್ ಆದೇಶಿಸಿದ್ದಾರೆ. ಮುಖರ್ಜಿಯವರನ್ನು ಶುಕ್ರವಾರ ಮಧ್ಯಾಹ್ನ ಪ್ರಜ್ಞಾಹೀನ ಸ್ಥಿತಿಯಲ್ಲಿ ಆಸ್ಪತ್ರೆಗೆ ತರಲಾಗಿತ್ತು. ಅವರಿಗೆ ಮೂರ್ಛೆರೋಗಕ್ಕೆ ಚಿಕಿತ್ಸೆ ನೀಡಲಾಗುತ್ತಿತ್ತು ಎಂದು ಜೆ.ಜೆ.ಆಸ್ಪತ್ರೆ ಡೀನ್ ಡಾ.ಟಿ.ಪಿ.ಲಹಾನೆ ತಿಳಿಸಿದ್ದಾರೆ.
ಮುಂದಿನ 24 ಗಂಟೆಗಳ ವರೆಗೆ ಕಾಯಬೇಕಾಗಿದೆ ಎಂದಿದ್ದಾರೆ ಅವರು. ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದ ಔಷಧ ಹೇಗೆ ಮುಖರ್ಜಿ ಕೈಗೆ ದೊರಕಿತು ಎಂಬ ಬಗ್ಗೆ ಜೈಲಧಿಕಾರಿಗಳು ತನಿಖೆ ನಡೆಸಲಿದ್ದಾರೆ. ಸದ್ಯ ಪ್ರಕರಣದ ತನಿಖೆಯನ್ನು ಸಿಬಿಐ ನಡೆಸುತ್ತಿದೆ.
Advertisement