ದುಬಾರಿ ಶಾಲಾ ಶುಲ್ಕ ಪಾವತಿ ಮಾಡಲಾಗದೇ ವಿದ್ಯಾರ್ಥಿ ಆತ್ಮಹತ್ಯೆ..!

ಶಿಕ್ಷಣದ ವ್ಯಾಪಾರೀಕರಣ ಬಾಲಕನೊಬ್ಬನ ಜೀವ ಪಡೆದಿದೆ. ಶುಲ್ಕ ಪಾವತಿಸದಕ್ಕಾಗಿ ಶಿಕ್ಷೆಗೆ ಗುರಿಯಾಗಿದ್ದ ಖಾಸಗಿ ಶಾಲೆಯಲ್ಲಿ ಓದುತ್ತಿದ್ದ 10ನೇ ತರಗತಿ ಬಾಲಕ ತೆಲಂಗಾಣದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ...
ಶುಲ್ಕ ಪಾವತಿ ಮಾಡಲಾಗದೇ ಆತ್ಮಹತ್ಯೆಗೆ ಶರಣಾದ ಬಾಲಕ
ಶುಲ್ಕ ಪಾವತಿ ಮಾಡಲಾಗದೇ ಆತ್ಮಹತ್ಯೆಗೆ ಶರಣಾದ ಬಾಲಕ

ಕರೀಂನಗರ: ಶಿಕ್ಷಣದ ವ್ಯಾಪಾರೀಕರಣ ಬಾಲಕನೊಬ್ಬನ ಜೀವ ಪಡೆದಿದೆ. ಶುಲ್ಕ ಪಾವತಿಸದಕ್ಕಾಗಿ ಶಿಕ್ಷೆಗೆ ಗುರಿಯಾಗಿದ್ದ ಖಾಸಗಿ ಶಾಲೆಯಲ್ಲಿ ಓದುತ್ತಿದ್ದ 10ನೇ ತರಗತಿ ಬಾಲಕ  ತೆಲಂಗಾಣದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಸತೀಶ್ ಆತ್ಮಹತ್ಯೆ ಮಾಡಿಕೊಂಡಾತ. ಆರ್ಥಿಕ ಸಮಸ್ಯೆಯಿಂದಾಗಿ ಈತನ ಕುಟುಂಬ ಶಾಲೆಯವರು ಕೇಳಿದಷ್ಟು ಶುಲ್ಕ ಪಾವತಿಸಿರಲಿಲ್ಲ. ಈ ಸಂಬಂಧ ವಿಚಾರಣೆ ನಡೆಸಿದ ಪ್ರಾಂಶುಪಾಲರು  ಆತನ ಕೆನ್ನೆಗೆ ಬಾರಿಸಿದ್ದರು. ನಂತರ ಇತರೆ 6 ವಿದ್ಯಾರ್ಥಿಗಳ ಜತೆಗೆ ತರಗತಿ ಹೊರಗೆ ನಿಲ್ಲಿಸಿದ್ದರು. ತೀವ್ರ ಅವಮಾನಕ್ಕೀಡಾದ ಸತೀಶ್ ಮಧ್ಯಾಹ್ನದ ಊಟದ ವೇಳೆಗೆ ಮನೆಗೆ ವಾಪಸಾಗಿದ್ದ. ನಂತರ ಸಂಬಂಧಿಯೋಬ್ಬನಿಂದ ಮೊಬೈಲ್ ಪಡೆದುಕೊಂಡು ಅದರಲ್ಲಿ ತನ್ನ ಕೊನೆಯ ಹೇಳಿಕೆಗಳನ್ನು ವಿಡಿಯೋ ದಾಖಲು ಮಾಡಿಕೊಂಡಿದ್ದಾನೆ.

ಈಗಾಗಲೇ ರು.5 ಸಾವಿರ ಶುಲ್ಕ ಪಾವತಿಸಿದ್ದೇನೆ. ಇದಕ್ಕಿಂತ ಹೆಚ್ಚಿನ ಹಣ ಪಾವತಿಸಲು ಹೆತ್ತವರಿಗೆ ಸಾಧ್ಯವಾಗಿಲ್ಲ ಎಂದೂ ಹೇಳಿರುವುದು ದಾಖಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com