ವರ್ಷಾಂತ್ಯಕ್ಕೆ ರಾಫೆಲ್ ಜೆಟ್ ಡೀಲ್ ಪೂರ್ಣ: ಏರ್ ಚೀಫ್ ಮಾರ್ಷಲ್ ಅರೂಪ್ ರಹಾ

ಭಾರತೀಯ ವಾಯುಪಡೆಯಲ್ಲಿ ಫೈಟರ್ ಜೆಟ್ ಗಳ ಕೊರತೆ ಇದೆ ಎಂದು ಏರ್ ಚೀಫ್ ಮಾರ್ಷಲ್ ಅರೂಪ್ ರಹಾ ಹೇಳಿದ್ದಾರೆ.
ರಾಫೆಲ್ ಫೈಟರ್ ಜೆಟ್(ಸಂಗ್ರಹ ಚಿತ್ರ)
ರಾಫೆಲ್ ಫೈಟರ್ ಜೆಟ್(ಸಂಗ್ರಹ ಚಿತ್ರ)

ನವದೆಹಲಿ: ಭಾರತೀಯ ವಾಯುಪಡೆಯಲ್ಲಿ ಫೈಟರ್ ಜೆಟ್ ಗಳ ಕೊರತೆ ಇದೆ ಎಂದು ಹೇಳಿರುವ ಏರ್ ಚೀಫ್ ಮಾರ್ಷಲ್ ಅರೂಪ್ ರಹಾ, ಫ್ರಾನ್ಸ್ ನಿಂದ ಖರೀದಿಸಲು ಉದ್ದೇಹಿಸಿರುವ 36 ರಾಫೆಲ್ ಜೆಟ್ ಗಳ ಖರೀದಿ ಪ್ರಕ್ರಿಯೆ ವರ್ಷಾಂತ್ಯದ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ಹೇಳಿದ್ದಾರೆ.
ಏಪ್ರಿಲ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಫ್ರಾನ್ಸ್ ಗೆ ಭೇಟಿ ನೀಡಿದ್ದ ವೇಳೆ ರಾಫೆಲ್ ಖರೀದಿಗಾಗಿ ನಡೆಸಿದ್ದ ಮಾತುಕತೆ ಪ್ರಗತಿಯಲ್ಲಿದೆ. ವರ್ಷಾಂತ್ಯದ ವೇಳೆಗೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ರಹಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಅ.8 ರಂದು ಏರ್ ಫೋರ್ಸ್ ದಿನಾಚರಣೆ ನಡೆಯಲಿದ್ದು ಇದಕ್ಕೂ ಮುನ್ನ ಸಮ್ಮೇಳನವೊಂದರಲ್ಲಿ ಮಾತನಾಡಿರುವ ರಹಾ, ಮೊದಲ ಎರಡು ರಾಫೆಲ್ ತುಕಡಿಗಳು ಕಾರ್ಯನಿರ್ವಹಣೆ ಮಾಡಬೇಕಾದರೆ ಕನಿಷ್ಠ 2 -3 ವರ್ಷ ಕಾಲಾವಕಾಶ ತೆಗೆದುಕೊಳ್ಳುತ್ತದೆ. ಭಾರತೀಯ ವಾಯುಪಡೆಗೆ ಕನಿಷ್ಠ ಮಧ್ಯಮ ಬಹು-ಪಾತ್ರ ಯುದ್ಧ ವಿಮಾನಗಳ ತುಕಡಿ ಅಗತ್ಯವಿದೆ ಎಂದು ರಹಾ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com