ಹಿಂದೂಗಳು ದನದ ಮಾಂಸ ತಿನ್ನುತ್ತಾರೆ: ಲಾಲು

ಉತ್ತರಪ್ರದೇಶದಲ್ಲಿ ದನದ ಮಾಂಸ ಸೇವನೆಗೆ ಸಂಬಂಧಿಸಿದ ವಿವಾದ ಇನ್ನೂ ತಣ್ಣಗಾಗಿಲ್ಲ ಎನ್ನುವಾಗಲೇ ಆರ್‍ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಅವರು ದನದ ಮಾಂಸ ಸೇವನೆಗೆ ಸಂಬಂಧಿಸಿ ಮತ್ತೊಂದು ವಿವಾದ ಸೃಷ್ಟಿಸಿದ್ದಾರೆ...
ಲಾಲು ಪ್ರಸಾದ್ ಯಾದವ್ (ಸಂಗ್ರಹ ಚಿತ್ರ)
ಲಾಲು ಪ್ರಸಾದ್ ಯಾದವ್ (ಸಂಗ್ರಹ ಚಿತ್ರ)

ಪಾಟ್ನಾ: ಉತ್ತರಪ್ರದೇಶದಲ್ಲಿ ದನದ ಮಾಂಸ ಸೇವನೆಗೆ ಸಂಬಂಧಿಸಿದ ವಿವಾದ ಇನ್ನೂ ತಣ್ಣಗಾಗಿಲ್ಲ ಎನ್ನುವಾಗಲೇ ಆರ್‍ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಅವರು ದನದ ಮಾಂಸ  ಸೇವನೆಗೆ ಸಂಬಂಧಿಸಿ ಮತ್ತೊಂದು ವಿವಾದ ಸೃಷ್ಟಿಸಿದ್ದಾರೆ.

ದನದ ಮಾಂಸವನ್ನು ಮುಸ್ಲಿಮರು ಮಾತ್ರವಲ್ಲ ಹಿಂದೂಗಳೂ ಸೇವಿಸುತ್ತಾರೆ ಎಂದಿದ್ದಾರೆ. ಜತೆಗೆ, ಆರೆಸ್ಸೆಸ್ ಹಾಗೂ ಬಿಜೆಪಿ ಈ ವಿಚಾರಕ್ಕೆ ಕೋಮು ಬಣ್ಣ ಬಳಿಯಲು ಯತ್ನಿಸುತ್ತಿದೆ. ದನದ  ಮಾಂಸಕ್ಕೂ ಆಡಿನ ಮಾಂಸಕ್ಕೂ ಯಾವುದೇ ವ್ಯತ್ಯಾಸವಿಲ್ಲ. ಬಡವರು ತಮ್ಮ ಹಸಿವು ನೀಗಿಸಲು ಮಾಂಸ ಸೇವಿಸುತ್ತಾರೆ ಎಂದು ಹೇಳಿದ್ದಾರೆ. ಈ ನಡುವೆ, ಲಾಲೂ ಹೇಳಿಕೆಗೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಲಾಲೂ ಅವರ ಮಾತಿನ ಮೇಲೆ ನಿಯಂತ್ರಣ ಕಳೆದುಕೊಂಡಿದ್ದಾರೆ. ಹಿಂದೂಗಳು ಗೋವನ್ನು ಪೂಜಿಸುತ್ತಾರೆಯೇ ಹೊರತು ಅದರ ಮಾಂಸ ಸೇವಿಸುವುದಿಲ್ಲ  ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com