ಚೆನ್ನೈನಲ್ಲಿ ಗಾಳಿಪಟದ ಮಾಂಜಾ ನಿಷೇಧ..!

ಗಾಳಿಪಟ ಹಾರಿಸಲು ಬಳಕೆ ಮಾಡಲಾಗುವ ಮಾಂಜಾ ಮೇಲೆ ಚೆನ್ನೈ ಪೊಲೀಸರು ನಿಷೇಧ ಹೇರಿದ್ದು, ಮುಂದಿನ 60 ದಿನಗಳ ಕಾಲ ನಗರದಲ್ಲಿ ಮಾಂಜಾ ಬಳಕೆ ಮತ್ತು ಮಾರಾಟವನ್ನು ನಿಷೇಧಿಸಲಾಗಿದೆ...
ಗಾಳಿಪಟದ ಅಂಗಡಿ ಮತ್ತು ಮಾಂಜಾ (ಸಂಗ್ರಹ ಚಿತ್ರ)
ಗಾಳಿಪಟದ ಅಂಗಡಿ ಮತ್ತು ಮಾಂಜಾ (ಸಂಗ್ರಹ ಚಿತ್ರ)
Updated on

ಚೆನ್ನೈ: ಗಾಳಿಪಟ ಹಾರಿಸಲು ಬಳಕೆ ಮಾಡಲಾಗುವ ಮಾಂಜಾ ಮೇಲೆ ಚೆನ್ನೈ ಪೊಲೀಸರು ನಿಷೇಧ ಹೇರಿದ್ದು, ಮುಂದಿನ 60 ದಿನಗಳ ಕಾಲ ನಗರದಲ್ಲಿ ಮಾಂಜಾ ಬಳಕೆ ಮತ್ತು ಮಾರಾಟವನ್ನು ನಿಷೇಧಿಸಲಾಗಿದೆ.

ಗಾಳಿಪಟದ ಮಾಂಜಾದಿಂದಾಗಿ 5 ವರ್ಷದ ಬಾಲಕನೊಬ್ಬ ಸಾವನ್ನಪ್ಪಿದ ಹಿನ್ನಲೆಯಲ್ಲಿ ಚೆನ್ನೈ ಪೊಲೀಸ್ ಆಯುಕ್ತ ಎಸ್. ಜಾರ್ಜ್ ಅವರು ಈ ಕ್ರಮ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಪೊಲೀಸ್ ಮೂಲಗಳ ಗಾಳಿಪಟ ಹಾರಿಸುವ ಪ್ರಕ್ರಿಯೆಯಲ್ಲಿ ಬಳಕೆ ಮಾಡಲಾಗುವ ಮಾಂಜಾದಿಂದಾಗಿ ಕಳೆದ ಮೂರು ವರ್ಷದಲ್ಲಿ ನಾಲ್ಕು ಮಕ್ಕಳು ಮೃತಪಟ್ಟಿದ್ದಾರೆ. ಇತ್ತೀಚೆಗೆ ಪೆರಂಬೂರಿನಲ್ಲಿ  ಮಾಂಜಾ ಬಳಸಿ ಗಾಳಿಪಟ ಹಾರಿಸಿ ಐದು ವರ್ಷದ ಅಜಯ್ ಎಂಬ ಬಾಲಕ ಮೃತಪಟ್ಟ ಹಿನ್ನಲೆಯಲ್ಲಿ ಆಯುಕ್ತರು ಈ ಕ್ರಮ ಕೈಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ನಗರ ಪೊಲೀಸ್ ಕಾಯ್ದೆಯ 71 ವಿಧಿಯನ್ವಯ ಮಾಂಜಾ ಬಳಕೆ ಮತ್ತು ಮಾರಾಟಕ್ಕೆ ನಿಷೇಧ ಹೇರಲಾಗಿದ್ದು, ನಿಷೇಧ ಆದೇಶ ಮುಂದಿನ 60 ದಿನಗಳವರೆಗೆ ಜಾರಿಯಲ್ಲಿ ಇರಲಿದೆ. ಅಲ್ಲದೆ ನಿಷೇಧದ ಅವಧಿಯನ್ನು ಸಂದರ್ಭಕ್ಕನುಸಾರವಾಗಿ ವಿಸ್ತರಿಸಬಹುದಾಗಿದೆ ಎಂದು ತಿಳಿದುಬಂದಿದೆ.

"ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಚೆನ್ನೈ ಪೊಲೀಸ್ ಆಯುಕ್ತ ಜಾರ್ಜ್, "ಕಳೆದ 3 ವರ್ಷಗಳಲ್ಲಿ ನಗರದಲ್ಲಿ ನಾಲ್ಕು ಮಾಂಜಾ ಸಾವುಗಳಾಗಿದ್ದು, ಇದಕ್ಕೆ ಸಂಬಂಧಿಸಿದಂತೆ 14  ಅಪಘಾತಗಳಾಗಿವೆ. ನಿಷೇಧ ಉಲ್ಲಂಘಿಸಿ ಮಾಂಜಾ ಬಳಕೆ ಹಾಗೂ ಮಾರಾಟ ಮಾಡಿದಲ್ಲಿ ಅಂತಹವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು. ಮಾಂಜಾ ಮಾಡುವ ವ್ಯಕ್ತಿಗೆ 6  ತಿಂಗಳು ಜೈಲು ಶಿಕ್ಷೆ ವಿಧಿಸಲು ಕಾಯ್ದೆಯಲ್ಲಿ ಅವಕಾಶವಿದೆ ಎಂದು ಎಚ್ಚರಿಸಿದ್ದಾರೆ. ಅಲ್ಲದೆ ಮಕ್ಕಳು ಮಾಂಜಾ ಬಳಕೆ ಮಾಡದಂತೆ ಸಲಹೆ ಮಾಡಬೇಕೆಂದು ಜಾರ್ಜ್ ಅವರು ಪೋಷಕರಿಗೆ ಮನವಿ ಮಾಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com