ಫೋಸ್ಟ್ ಮಾರ್ಟಮ್ ಮಾಡೋ 1 ನಿಮಿಷ ಮೊದಲು ಎದ್ದು ಕುಳಿತ ಮೃತ ವ್ಯಕ್ತಿ!

ಮುಂಬೈನ ಸಯಾನ್ ಆಸ್ಪತ್ರೆಯಲ್ಲಿ ವ್ಯಕ್ತಿಯೊಬ್ಬ ಮೃತಪಟ್ಟಿದ್ದಾನೆ ಎಂದು ವೈದ್ಯರು ಘೋಷಿಸಿದ್ದರು. ಬಳಿಕ ಮೃತದೇಹವನ್ನು ಶವಾಗಾರಕ್ಕೆ ರವಾನಿದ್ದರು.
ಅಪರಿಚಿತ ವ್ಯಕ್ತಿ
ಅಪರಿಚಿತ ವ್ಯಕ್ತಿ

ಮುಂಬೈ: ಮುಂಬೈನ ಸಯಾನ್ ಆಸ್ಪತ್ರೆಯಲ್ಲಿ ವ್ಯಕ್ತಿಯೊಬ್ಬ ಮೃತಪಟ್ಟಿದ್ದಾನೆ ಎಂದು ವೈದ್ಯರು ಘೋಷಿಸಿದ್ದರು. ಬಳಿಕ ಮೃತದೇಹವನ್ನು ಶವಾಗಾರಕ್ಕೆ ರವಾನಿದ್ದರು. ಆದರೆ ಅಚ್ಚರಿ ಎಂಬಂತೆ ಇನ್ನೇನು ಫೋಸ್ಟ್ ಮಾರ್ಟಮ್ ಮಾಡುವಷ್ಟರಲ್ಲಿ ಆ ಮೃತ ವ್ಯಕ್ತಿ ಜೀವಂತವಾಗಿ ಎದ್ದು ಕುಳಿತ ಘಟನೆ ಭಾನುವಾರ ನಡೆದಿದೆ. ಈ ಘಟನೆ ತಮಾಷೆಯಾಗಿ ಕಾಣಬಹುದು. ಆದರೆ ಸರ್ಕಾರಿ ಆಸ್ಪತ್ರೆಯೊಂದರ ಆಘಾತಕಾರಿ ನಿರ್ಲಕ್ಷಕ್ಕೆ ಸಾಕ್ಷಿಯಾಗಿದೆ.

ಪೊಲೀಸರ ಪ್ರಕಾರ, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಸುಮಾರು 45ವರ್ಷದ ವ್ಯಕ್ತಿಯ ನಾಡಿ ಪರೀಕ್ಷಿಸಿ ವೈದ್ಯರು, ಸಾವನ್ನಪ್ಪಿರುವುದಾಗಿ ಹೇಳಿದ್ದರು. ಆದರೆ ಸಯಾನ್ ಆಸ್ಪತ್ರೆಯಲ್ಲಿ ಫೋಸ್ಟ್ ಮಾರ್ಟಮ್ ಮಾಡೋ ಒಂದು ನಿಮಿಷ ಮುನ್ನ ಎದ್ದುಕುಳಿತಿದ್ದ. ಮೃತ ವ್ಯಕ್ತಿ ಜೀವಂತವಾಗಿದ್ದಾನೆ ಎಂಬ ಸುದ್ದಿ ಕೇಳಿ, ಗಾಬರಿಗೊಂಡ ವೈದ್ಯರಿಗೆ ತಮ್ಮ ತಪ್ಪಿನ ಅರಿವಾಗಿ ಕೂಡಲೇ ಆ ವ್ಯಕ್ತಿಗೆ ಸಂಬಂಧಿಸಿದಂತೆ ವೈದ್ಯರು ದಾಖಲಿಸಿದ್ದ ಎಲ್ಲಾ ದಾಖಲೆಗಳನ್ನು ನಾಶಪಡಿಸಿದ್ದಾರಂತೆ.

ನಿನ್ನೆ 11.15ರ ಸುಮಾರಿಗೆ ಸುಲೋಚನಾ ಶೆಟ್ಟಿ ಮಾರ್ಗದ ಎಸ್ ಟಿ ಬಸ್ ಡಿಪೋ ಬಳಿ ವ್ಯಕ್ತಿಯೊಬ್ಬರು ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ ಎಂದು ಸಯಾನ್ ಪೊಲೀಸರಿಗೆ ದೂರವಾಣಿ ಕರೆಯೊಂದು ಬಂದಿತ್ತು, ಬಳಿಕ ಗಸ್ತು ತಿರುಗುತ್ತಿದ್ದ ಪೊಲೀಸರಿಗೆ ಮಾಹಿತಿ ನೀಡಿ, ಅಪರಿಚಿತ ವ್ಯಕ್ತಿಯನ್ನು ಸಯಾನ್ ನಲ್ಲಿರುವ ಲೋಕಮಾನ್ಯ ತಿಲಕ್ ಆಸ್ಪತ್ರೆಗೆ ದಾಖಲಿಸಿದ್ದರು. ವ್ಯಕ್ತಿಯ ನಾಡಿ ಪರೀಕ್ಷೆ ಮಾಡಿದ ವೈದ್ಯರೊಬ್ಬರು ವ್ಯಕ್ತಿ ಮೃತಪಟ್ಟಿರುವುದಾಗಿ ಘೋಷಿಸಿದ್ದರು.

ನಂತರ ಬಿಳಿ ಬಟ್ಟೆಯನ್ನು ಹೊದಿಸಿ ಶವಾಗಾರದಲ್ಲಿ ಇಡಲಾಗಿತ್ತು. ಆಗ ಶವಾಗಾರದ ಸಿಬ್ಬಂದಿಗಳಾದ ಸುಭಾಶ್ ಮತ್ತು ಸುರೇಂದರ್ ಗಾಬರಿಗೊಳಗಾಗಿದ್ದರು. ಯಾಕೆಂದರೆ ಮೃತ ವ್ಯಕ್ತಿ ಉಸಿರಾಡುತ್ತಿರುವುದು ಕೇಳಿಸಿತ್ತು!

ಹೊಟ್ಟೆಭಾಗ ನಿಧಾನಕ್ಕೆ ಮೇಲಕ್ಕೆ, ಕೆಳಕ್ಕೆ ಹೋಗುತ್ತಿರುವುದನ್ನು ಗಮನಿಸಿದ್ದರು. ವಿಷಯ ತಿಳಿದ ವೈದ್ಯ ಮಹಾಶಯ ಕೂಡಲೇ ಶವಾಗಾರಕ್ಕೆ ಬಂದು ಪರೀಕ್ಷಿಸಿದಾಗ ವ್ಯಕ್ತಿ ಜೀವಂತವಾಗಿರುವುದು ಗಮನಕ್ಕೆ ಬಂದಿತ್ತು. ಕೂಡಲೇ ತನ್ನಿಂದಾದ ತಪ್ಪನ್ನು ಮುಚ್ಚಿಹಾಕಲು ಎಲ್ಲಾ ದಾಖಲೆಗಳನ್ನು ಹರಿದು ಹಾಕಿದ್ದರು ಎಂದು ವರದಿ ತಿಳಿಸಿದೆ.

ಆ ಈಗ ವ್ಯಕ್ತಿ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.ಅಲ್ಲದೆ ಆ ವ್ಯಕ್ತಿ ಆಹಾರದ ಕೊರತೆಯಿಂದ ಬಳಲುತ್ತಿರುವುದಾಗಿ ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com