
ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಭೇಟಿಗೆ ಮೊದಲು ಭಾರತ ಸರ್ಕಾರ, ಭೂಗತ ಪಾತಕಿ ದಾವೂದ್ ಇಬ್ರಾಹಿಂ ಇಂಗ್ಲೆಂಡ್ ನಲ್ಲಿ ಹೊಂದಿರುವ ಆಸ್ತಿಗಳ ಪಟ್ಟಿ ತಯಾರಿಸಿ ಕಡತ ಸಿದ್ಧಪಡಿಸಿದೆ.
ಸುದ್ದಿ ವಾಹಿನಿಯೊಂದಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ, ದಾವೂದ್ ಇಬ್ರಾಹಿಂ ಮತ್ತು ಅವನ ಸಹಚರರು ಇಂಗ್ಲೆಂಡಿನಲ್ಲಿ ಕನಿಷ್ಠ 15 ಕಡೆಗಳಲ್ಲಿ ಆಸ್ತಿ ಹೊಂದಿದೆ.
ದಾವೂದ್ ನ ಮೊದಲ ಆಸ್ತಿ ಲಂಡಲ್ ನ ಸೈಂಟ್ ಜಾನ್ ವುಡ್ ರಸ್ತೆಯಲ್ಲಿ ಹೊಂದಿದ್ದು, ಅಲ್ಲಿಯೇ ಮನೆ ಹೊಂದಿದ್ದಾನೆ. ಅಲ್ಲಿಂದಲೇ ಅವನ ಕಾರ್ಯ ಚಟುವಟಿಕೆಗಳು ನಡೆಯುತ್ತವೆ. ನಂತರ ಅಲ್ಲಿನ ಹರ್ಬರ್ಟ್ ರಸ್ತೆ, ಹಾರ್ನ್ ಚರ್ಚ್ ನಲ್ಲಿ, ರಿಚ್ ಮಂಡ್ ರಸ್ತೆ, ಡಾರ್ಟ್ ಫೋರ್ಡ್ ನ ಸ್ಪೈಟಲ್ ರಸ್ತೆ, ಚಿಗ್ ವೆಲ್ ನಲ್ಲಿ ಟಾಮ್ಸ್ ವುಡ್ ರಸ್ತೆ, ಲಂಡನ್ ನ ರೊಯೆಹಮ್ಟನ್ ಹೈ ರಸ್ತೆಯಲ್ಲಿ ಅಪಾರ್ಟ್ ಮೆಂಟ್ ಮತ್ತು ಮಳಿಗೆ, ಲನ್ಸೆಲೊಟ್ ರಸ್ತೆಯಲ್ಲಿ ಮನೆ ಮತ್ತು ಅಂಗಡಿ, ತಾರ್ತೊನ್ ರಸ್ತೆಯಲ್ಲಿ ಆಸ್ತಿ, ರೊಮ್ಫೊರ್ಡ್ ಎಸ್ಸೆಕ್ಸ್, ಶೆಫರ್ಢ್ಸ್ ಬುಶ್ ಗಾರ್ಡನ್, ಗ್ರೇಟ್ ಸೆಂಟ್ರಲ್ ಅವೆನ್ಯೂ, ಸೈಂಟ್ ಸ್ವಿತಿನ್ಸ್ ಲೇನ್, ರೊಯಂಪ್ಟನ್ ನಲ್ಲಿ ಫ್ಲ್ಯಾಟ್, ಹೈನಲ್ಟ್ ನ ನ್ಯೂ ನಾರ್ತ್ ರಸ್ತೆಯಲ್ಲಿ ಆಸ್ತಿ ಮತ್ತು ರಿಚ್ ಮಂಡ್ ರಸ್ತೆಯಲ್ಲಿ ಆಸ್ತಿಗಳನ್ನು ದಾವೂದ್ ಹೊಂದಿದ್ದಾನೆ ಎಂಬ ಮಾಹಿತಿ ಸಿಕ್ಕಿದೆ.
ಭಾರತದ ಗುಪ್ತಚರ ಸಂಸ್ಥೆ ದಾವೂದ್ ಇಬ್ರಾಹಿಂ ಆಸ್ತಿಗಳ ಪಟ್ಟಿಯನ್ನು ಸಿದ್ಧಪಡಿಸಿದೆ.
Advertisement