ನವದೆಹಲಿ: ಆನ್‌ಲೈನ್ ನಲ್ಲಿ ಔಷಧ ಮಾರಾಟವನ್ನು ಕ್ರಮಬದ್ಧಗೊಳಿಸುವ ಕೇಂದ್ರ ಸರಕಾರದ ಕ್ರಮವನ್ನು ವಿರೋಧಿಸಿ ಬುಧವಾರ ದೇಶಾದ್ಯಂತ ಔಷಧ ವ್ಯಾಪಾರ ಸಂಘಟನೆಗಳು ಕರೆ ನೀಡಿದ್ದ ಬಂದ್ ಯಶಸ್ವಿಯಾಗಿದೆ. ಸುಮಾರು ಎಂಟು ಲಕ್ಷ ಸದಸ್ಯರು ತಮ್ಮ ವಹಿವಾಟುಗಳನ್ನು ಮುಚ್ಚಿ ಬಂದ್ ಗೆ ಬೆಂಬಲ ನೀಡಿದ್ದರು.
ದೇಶಾದ್ಯಂತ ತಮ್ಮ ಔಷಧಿ ಅಂಗಡಿಗಳನ್ನು ಮುಚ್ಚಿ ಬಂದ್ ಯಶಸ್ವಿಗೊಳಿಸಿದ್ದಾರೆ ಎಂದು ಸಂಘಟನೆಯ ಅಧ್ಯಕ್ಷ ಜೆ ಎಸ್ ಶಿಂಧೆ ಹೇಳಿದರು. "ನಮ್ಮ ಸಂಘಟನೆಯ ಶೇ.90ರಷ್ಟು ಸದಸ್ಯರು ಇಂದು ತಮ್ಮ ಔಷಧಿ ಅಂಗಡಿಗಳನ್ನು ಮುಚ್ಚಿ ಪ್ರತಿಭಟನೆ ನಡೆಸಿದ್ದಾರೆ. ಉಳಿದ ಶೇ.10 ಸದಸ್ಯರು ತುರ್ತು ಸ್ಥಿತಿಯಲ್ಲಿರುವ ರೋಗಿಗಳ ನೆರವಿಗಾಗಿ ತಮ್ಮ ಅಂಗಡಿಯನ್ನು ಮಾನವೀಯ ನೆಲೆಯಲ್ಲಿ ತೆರೆದಿಟ್ಟಿದ್ದರು' ಎಂದು ಶಿಂಧೆ ಹೇಳಿದ್ದಾರೆ.
ಕೇಂದ್ರ ಸರಕಾರ ಇನ್ನೊಂದು ವಾರದೊಳಗೆ ಔಷಧಿ ವ್ಯಾಪಾರಸ್ಥರ ಸಮಸ್ಯೆಯನ್ನು ಬಗೆಹರಿಸದಿದ್ದಲ್ಲಿ ಅನಿರ್ದಿಷ್ಟಾವಧಿ ಬಂದ್ ಮುಷ್ಕರ ನಡೆಸಲಾಗುವುದು ಎಂಬ ಎಚ್ಚರಿಕೆಯನ್ನು ಶಿಂಧೆ ಈ ಸಂದರ್ಭದಲ್ಲಿ ನೀಡಿದ್ದಾರೆ.
Advertisement