ಮಸಿ ದಾಳಿ: ಭಾರತ-ಪಾಕ್ ವಾಗ್ಯುದ್ಧ

ಕುಲಕರ್ಣಿ ಪ್ರಕರಣ ಮಂಗಳವಾರ ಭಾರತ ಮತ್ತು ಪಾಕ್ ನಡುವಿನ ವಾಗ್ಯುದ್ಧಕ್ಕೂ ಕಾರಣವಾಯಿತು...
ಸುಧೀಂದ್ರ ಕುಲಕರ್ಣಿ
ಸುಧೀಂದ್ರ ಕುಲಕರ್ಣಿ
ನವದೆಹಲಿ: ಕುಲಕರ್ಣಿ ಪ್ರಕರಣ ಮಂಗಳವಾರ ಭಾರತ ಮತ್ತು ಪಾಕ್ ನಡುವಿನ ವಾಗ್ಯುದ್ಧಕ್ಕೂ ಕಾರಣವಾಯಿತು.
ಕಸೂರಿ ಪುಸ್ತಕ ಬಿಡುಗಡೆಗೆ ವಿರೋಧ ಹಾಗೂ ಗಜಲ್ ಗಾಯಕ ಗುಲಾಂ ಅಲಿ  ಕಾರ್ಯಕ್ರಮ ರದ್ದು ವಿಚಾರಗಳನ್ನು ಖಂಡಿಸಿರುವ ಪಾಕ್, 'ಭಾರತದಲ್ಲಿ ಪಾಕ್‍ನ ಗಣ್ಯ ವ್ಯಕ್ತಿಗಳ ವಿರುದ್ಧ ಕೆಲವು ಮೂಲಭೂತವಾ ದಿ ಸಂಘಟನೆಗಳು ಅಭಿಯಾನ ಮಾಡುತ್ತಿವೆ. ಇಂಥ  ಘಟನೆಗಳು ಮರುಕಳಿಸದಂತೆ ಭರವಸೆ ಸಿಗಬೇಕಿದೆ'' ಎಂದಿದೆ.
ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಭಾರತ, 'ಪಾಕಿಸ್ತಾನವೇನು ಸಹಿಷ್ಣುತೆ, ಬಹುತ್ವದ ಸಾಕಾರವೇ? ಬಹುತ್ವದ ಬಗ್ಗೆ  ಪಾಕಿಸ್ತಾನದ ಪಾಠ ನಮಗೆ ಬೇಕಿಲ್ಲ. ಭಾರತದಲ್ಲೇನಾದರೂ ಲೋಪವಿದ್ದರೆ, ಅದನ್ನು ನೋಡಿಕೊಳ್ಳಲು ನಮಗೆ ಗೊತ್ತು'' ಎಂದಿದೆ.
ಶಿವಸೇನೆಯ ಕೃತ್ಯ ರಾಜ್ಯಕ್ಕೆ ಮುಜುಗರ ತಂದಿತು ಎಂದು ಸಿಎಂ ಫಡ್ನವಿಸ್ ಹೇಳುತ್ತಾರೆ. ನಿಜ ಹೇಳಬೇಕೆಂದರೆ, ಫಡ್ನವಿಸ್‍ರ ಪಾಕಿಸ್ತಾನಪರ ಧೋರಣೆಯಿಂದ ರಾಜ್ಯದ ಮರ್ಯಾದೆ  ಹಾಳಾಯಿತು.
-ಸಂಜಯ್ ರಾವುತ್ ಶಿವಸೇನೆ ನಾಯಕ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com