ರಾಷ್ಟ್ರಪತಿಗಳ ಮಧ್ಯಪ್ರವೇಶಕ್ಕೆ ಒತ್ತಾಯ

ಪ್ರಶಸ್ತಿ ವಾಪಸ್ ಸರಣಿಯ ಬಳಿಕ ಈಗ ಪಶ್ಚಿಮ ಬಂಗಾಳದ 90ಕ್ಕೂ ಹೆಚ್ಚು ಲೇಖಕರು ಮತ್ತು ವಿಚಾರವಾದಿ ಗಳು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಪತ್ರ ಬರೆದಿದ್ದಾರೆ....
ಪ್ರಶಸ್ತಿ ಹಿಂದಿರುಗಿಸಿದ ಬಂಗಾಳ ಸಾಹಿತಿಗಳು
ಪ್ರಶಸ್ತಿ ಹಿಂದಿರುಗಿಸಿದ ಬಂಗಾಳ ಸಾಹಿತಿಗಳು

ನವದೆಹಲಿ: ಪ್ರಶಸ್ತಿ ವಾಪಸ್ ಸರಣಿಯ ಬಳಿಕ ಈಗ ಪಶ್ಚಿಮ ಬಂಗಾಳದ 90ಕ್ಕೂ ಹೆಚ್ಚು ಲೇಖಕರು ಮತ್ತು ವಿಚಾರವಾದಿ ಗಳು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಪತ್ರ ಬರೆದಿದ್ದಾರೆ.

ದಾದ್ರಿ ಘಟನೆ ಮತ್ತು ವಿಚಾರವಾದಿಗಳ ಮೇಲಾಗುತ್ತಿರುವ ದಾಳಿ ಕುರಿತು ಮಧ್ಯಪ್ರವೇಶಿಸುವಂತೆ ಪತ್ರದಲ್ಲಿ ಕೋರಲಾಗಿದೆ. ತಪ್ಪಿತಸ್ಥರನ್ನು ಪತ್ತೆಹಚ್ಚಿ, ಶಿಕ್ಷಿಸುವಲ್ಲಿ ಸರ್ಕಾರಗಳು ತೋರುತ್ತಿರುವ  ನಿರ್ಲಕ್ಷ್ಯದಿಂದ ನಾವು ಭಯಭೀತರಾಗಿದ್ದೇವೆ. ಭಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಅನಿಶ್ಚಿತತೆಯಿಂದ ಮುಕ್ತರಾಗಬೇಕೆಂದರೆ, ನೀವು ಈ ವಿಚಾರದಲ್ಲಿ ಮಧ್ಯಪ್ರವೇಶಿಸಬೇಕು ಎಂದೂ ಪತ್ರದಲ್ಲಿ ತಿಳಿಸಲಾಗಿದೆ. ಕವಿಗಳಾದ ಸಂಖಾ ಘೋಷ್, ನೀರೇಂದ್ರನಾಥ್ ಚಕ್ರವರ್ತಿ, ಅರ್ಥಶಾಸ್ತ್ರಜ್ಞರಾದ ಅಶೋಕ್ ಮಿತ್ರಾ ಮತ್ತು ಅಮಿಯಾ ಬಾಗ್ಚಿ, ನಟ ಕೌಶಿಕ್ ಸೇನ್, ಲೇಖಕರಾದ ನವನೀತ ದೇವ್ ಸೇನ್, ಬನಿ ಬಸು, ಶ್ರೀಶೇಂದು ಮುಖರ್ಜಿ,ಸಮರೇಶ್ ಮಜುಂದಾರ್, ರುದ್ರ ಪ್ರಸಾದ್ ಸೇನ್ಗುಪ್ತಾ ಮತ್ತು ಕಲಾವಿದ ವಸೀಂ ಕಪೂರ್ ಸೇರಿದಂತೆ ಅನೇಕರು ಪತ್ರಕ್ಕೆ ಸಹಿ ಮಾಡಿದ್ದಾರೆ.

ಪ್ರಶಸ್ತಿ ವಾಪ್ಸಿಯು ನಿರ್ಮಿತ ಬಂಡಾಯ ಎಂದ ಜೇಟ್ಲಿ:
ಸಾಹಿತಿಗಳ ಪ್ರಶಸ್ತಿ ವಾಪ್ಸಿ ಚಳವಳಿಯು ಒಂದು ರೀತಿಯ `ನಿರ್ಮಿತ ಬಂಡಾಯ'. ದೇಶಾದ್ಯಂತ ಸಾಹಿತಿಗಳು, ಲೇಖಕರು ತಮ್ಮ ಪ್ರಶಸ್ತಿಗಳನ್ನು ಹಿಂತಿರುಗಿಸುತ್ತಿರುವುದರ ಬಗ್ಗೆ ಈ ರೀತಿ  ವ್ಯಾಖ್ಯಾನಿಸಿದ್ದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ. ಪ್ರಶಸ್ತಿ ವಾಪ್ಸಿಗೆ ಸಂಬಂಧಿಸಿ ತಮ್ಮ ಬ್ಲಾಗ್ನಲ್ಲಿ ಬರೆದುಕೊಂಡಿರುವ ಜೇಟ್ಲಿ, ``ಸಾಹಿತಿಗಳ ಪ್ರತಿಭಟನೆಯು ನೈಜವಾದದ್ದೇ ಅಥವಾ   ನಿರ್ಮಿತವೇ ಅಥವಾ ಇದೂ ಕೂಡ ಸೈದ್ಧಾಂತಿಕ ಅಸಹಿಷ್ಣು ತೆಯೇ'' ಎಂದು ಪ್ರಶ್ನಿಸಿದ್ದಾರೆ. `ಎ ಮ್ಯಾನ್ಯುಫ್ಯಾಕ್ಟರ್ಡ್ ರಿವೋಲ್ಟ್ ಪಾಲಿಟಿಕ್ಸ್ ಬೈ ಅದರ್ ಮೀನ್ಸ್' ಎಂಬ ಶೀರ್ಷಿಕೆಯಡಿ ತಮ್ಮ ಅಭಿಪ್ರಾಯವನ್ನು ಮಂಡಿಸಿರುವ ಸಚಿವ ಜೇಟ್ಲಿ, ಸಾಹಿತಿಗಳನ್ನು ತರಾಟೆಗೆ ತೆಗೆದು ಕೊಂಡಿದ್ದಾರೆ.

ಕಾಂಗ್ರೆಸ್ ಪುನಶ್ಚೇತನಗೊಳ್ಳುವ ಯಾವುದೇ ಕುರುಹು ಕಾಣುತ್ತಿಲ್ಲ. ಎಡಪಕ್ಷಗಳು ಧೂಳೀಪಟವಾಗಿವೆ. ಹೀಗಾಗಿ, ಈ ಹಿಂದೆ ಇವರ ಅನುಗ್ರಹಗಳನ್ನು ಪಡೆದಿದ್ದ ಸಾಹಿತಿಗಳು, ಲೇಖಕರು ಈಗ  `ಇನ್ನೊಂದು ರೀತಿಯ ರಾಜಕೀಯ' ಮಾಡುತ್ತಿದ್ದಾರೆ. ಲೇಖಕರ ನಿರ್ಮಿತ ಬಂಡಾಯವೂ ಇದರ ಫಲವೇ ಎಂದಿದ್ದಾರೆ ಜೇಟ್ಲಿ. ದಾದ್ರಿಯಲ್ಲಿ ಅಲ್ಪಸಂಖ್ಯಾತನ ಹತ್ಯೆಯು ದುರದೃಷ್ಟಕರ ಮತ್ತು  ಖಂಡನೀಯ. ಇಂಥ ಘಟನೆಗಳು ದೇಶಕ್ಕೆ ಕೆಟ್ಟ ಹೆಸರು ತಂದುಕೊಡುತ್ತವೆ. ಆದರೆ, ಪ್ರಶಸ್ತಿ ವಾಪಸ್ ನೀಡುತ್ತಿರುವ ಸಾಹಿತಿಗಳು ಎಡಪಂಥೀಯರು ಮತ್ತು ನೆಹರೂ ಪರ ಧೋರಣೆಯಿರುವವರು  ಎಂದಿದ್ದಾರೆ ಜೇಟ್ಲಿ.

ಮೋದಿ ಸರ್ಕಾರಕ್ಕೆ ಮುಜುಗರ ತರುವ ಯತ್ನ
ನರೇಂದ್ರ ಮೋದಿ ಸರ್ಕಾರಕ್ಕೆ ಮುಜುಗರ ತರಲೆಂದೇ ಸಾಹಿತಿಗಳು ಪ್ರಶಸ್ತಿಗಳನ್ನು ವಾಪಸ್ ನೀಡುತ್ತಿದ್ದಾರೆ ಎಂದು ಆರೆಸ್ಸೆಸ್ ಆರೋಪಿಸಿದೆ. ಈ ಬಗ್ಗೆ ಮಾತನಾಡಿರುವ ಆರೆಸ್ಸೆಸ್‍ನ ಸುಧಿೀರ್  ಪಾಠಕ್, ``ಬಿಹಾರ ಚುನಾವಣೆ ನಡೆಯುತ್ತಿರುವಾಗ ಸರ್ಕಾರಕ್ಕೆ ಮುಜುಗರ ಉಂಟುಮಾಡಬೇಕೆಂದು ಎಡಪಂಥೀಯ ಸಾಹಿತಿಗಳು ಮಾಡುತ್ತಿರುವ ಕೃತ್ಯವಿದು. ತುರ್ತು ಪರಿಸ್ಥಿತಿಯ ವೇಳೆ  ಅಭಿವ್ಯಕ್ತಿ ಸ್ವಾತಂತ್ರ್ಯ, ಪತ್ರಿಕಾ ಸ್ವಾತಂತ್ರ್ಯವನ್ನು ಹತ್ತಿಕ್ಕಲಾಗಿತ್ತು. ಆಗ ಏಕೆ ಈ ಸಾಹಿತಿಗಳು ಮೌನ ವಹಿಸಿದ್ದರು? ದೆಹಲಿಯಲ್ಲಿ ಸಾವಿರಾರು ಸಿಖ್ಖರ ಹತ್ಯೆ ನಡೆದಾಗ ಇವರೇಕೆ ಪ್ರಶಸ್ತಿ ವಾಪಸ್  ನೀಡಿರಲಿಲ್ಲ'' ಎಂದು ಪ್ರಶ್ನಿಸಿದ್ದಾರೆ. ಇದೇ ವೇಳೆ, ದಾದ್ರಿ ಘಟನೆಯನ್ನು ನೇರವಾಗಿ ಉಲ್ಲೇಖಿಸದ ಆರೆಸ್ಸೆಸ್ ಪ್ರಧಾನ ಕಾರ್ಯದರ್ಶಿ ಭಯಾ್ಯಜಿ ಜೋಷಿ, ``ಈ ಹಿಂದೆಯೂ ಅನೇಕ  ಪ್ರಕರಣಗಳು ದೇಶದಲ್ಲಿ ನಡೆದಿವೆ. ಆದರೆ, ಯಾರೂ ಪ್ರಶಸ್ತಿ ಹಿಂದಿರುಗಿಸಿರಲಿಲ್ಲ. ಪ್ರಶಸ್ತಿ ವಾಪಸ್ ನೀಡುತ್ತಿರುವವರ ಪ್ರಾಮಾಣಿಕತೆಯನ್ನು ಪರಿಶೀಲಿಸಬೇಕಾದ ಅಗತ್ಯವಿದೆ. ಇವರ ಕ್ರಮವು  ವಾತಾವರಣವನ್ನು ಕೆಡಿಸುತ್ತಿದೆ'' ಎಂದು ಆರೋಪಿಸಿದ್ದಾರೆ ಎಂದು ಹಿಂದೂಸ್ಥಾನ್ ಟೈಮ್ಸ್  ವರದಿ ಮಾಡಿದೆ.

ಪ್ರಶಸ್ತಿ ಹಿಂದಿರುಗಿಸುವಂತೆ ಯಾರಾದರೂ ಸಾಹಿತಿಗಳೊಂದಿಗೆ ಲಾಬಿ ಮಾಡುತ್ತಿದ್ದಾರಾ ಎಂಬುದನ್ನು ಪತ್ತೆ ಹಚ್ಚಬೇಕು. ಸಾಹಿತಿಗಳು ಪ್ರಶಸ್ತಿ ಪಡೆದಾಗಿನಿಂದ ಈವರೆಗೆ ದೇಶದೆಲ್ಲೆಡೆ ಏನೇನೋ ಘಟನೆಗಳು ಸಂಭವಿಸಿ.
- ಕೇಸರಿನಾಥ್ ತ್ರಿಪಾಠಿ ಬಂಗಾಳ ರಾಜ್ಯಪಾಲ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com