ಮೂರು ಪರೀಕ್ಷೆಗಳಲ್ಲಿ ಮ್ಯಾಗಿ ಪಾಸ್, ಹೊಸರೂಪದಲ್ಲಿ ಶೀಘ್ರವೇ ಮಾರುಕಟ್ಟೆಗೆ ಮ್ಯಾಗಿ ನೂಡಲ್ಸ್

ಮೂರು ಲ್ಯಾಬೋರೇಟರಿಗಳಲ್ಲಿ ನೆಸ್ಲ್ಟೆ ಕಂಪನಿಯ ಮ್ಯಾಗಿ ನೂಡಲ್ಸ್ ಟೆಸ್ಟ್ ನಡೆಸಿದ್ದು. ಅದರಲ್ಲಿ ಯಾವುದೇ ರೀತಿಯ ಹಾನಿಕಾರಕ ಅಂಶಗಳಿಲ್ಲ ಎಂಬ ವರದಿ ಬಂದಿದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಮೂರು ಲ್ಯಾಬೋರೇಟರಿಗಳಲ್ಲಿ ನೆಸ್ಲ್ಟೆ ಕಂಪನಿಯ ಮ್ಯಾಗಿ ನೂಡಲ್ಸ್ ಟೆಸ್ಟ್ ನಡೆಸಿದ್ದು. ಅದರಲ್ಲಿ ಯಾವುದೇ ರೀತಿಯ ಹಾನಿಕಾರಕ ಅಂಶಗಳಿಲ್ಲ ಎಂಬ ವರದಿ ಬಂದಿದೆ. ಹೀಗಾಗಿ ಮ್ಯಾಗಿ ಪ್ರಿಯರು ತಮ್ಮ ನೆಚ್ಚಿನ ಮ್ಯಾಗಿಯನ್ನು ಶೀಘ್ರದಲ್ಲೇ ಸವಿಯಬಹುದಾಗಿದೆ.

ಬಾಂಬೆ ಹೈ ಕೋರ್ಟ್ ಆದೇಶದನ್ವಯ ನಡೆಸಿದ ಮೂರು ಟೆಸ್ಟ್ ನಲ್ಲಿ ಮ್ಯಾಗಿ ಪಾಸ್ ಆಗಿದ್ದು, ಮ್ಯಾಗಿ ಸೇಫ್ ಎಂಬ ರಿಸಲ್ಟ್ ಬಂದಿದೆ ಎಂದು ನೆಸ್ಲ್ಟೆ ಕಂಪನಿ ತಿಳಿಸಿದೆ.

9 ವಿವಿಧ ರೀತಿಯ ಮ್ಯಾಗಿ ತಯಾರಿಸಲು ನೆಸ್ಲ್ಟೆ ಕಂಪನಿ ಸಿದ್ಧವಾಗಿದ್ದು, ದೇಶಾದ್ಯಂತ ಶೀಘ್ರವೇ ಮ್ಯಾಗಿ ನೂಡಲ್ಸ್ ಬಿಡುಗಡೆಗೊಳಿಸಲಿದೆ.

ಹೊಸದಾಗಿ ತಯಾರಿಸಿದ ಮ್ಯಾಗಿಯನ್ನು ಪ್ರಯೋಗಾಲಯಗಳಲ್ಲಿ ಪರೀಕ್ಷಿಸಿದ ನಂತರವೇ ಮಾರುಕಟ್ಟೆಗೆ ಬಿಡುಗಡೆಗೊಳಿಸುವುದಾಗಿ ಕಂಪನಿ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com