ಡ್ಯಾನ್ಸ್ ಬಾರ್ ನಿಷೇಧಕ್ಕೆ ತಡೆ; ಮಹಾರಾಷ್ಟ್ರ ಸರ್ಕಾರಕ್ಕೆ ತೀವ್ರ ಹಿನ್ನಡೆ

ಮಹಾರಾಷ್ಟ್ರದಲ್ಲಿ ಡ್ಯಾನ್ಸ್ ಬಾರ್ ಗಳ ಮೇಲಿನ ನಿಷೇಧವನ್ನು ತೆರವುಗೊಳಿಸಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದು, ಕೆಲವೇ ದಿನಗಳಲ್ಲಿ ಹೋಟೆಲ್, ಬಾರ್ ಮತ್ತು ರೆಸ್ಟೋರೆಂಟ್ ಗಳಲ್ಲಿ ಡ್ಯಾನ್ಸ್ ಬಾರ್..
ಮುಂಬೈ ಡಾನ್ಸ್ ಬಾರ್ ಗಳು (ಸಂಗ್ರಹ ಚಿತ್ರ)
ಮುಂಬೈ ಡಾನ್ಸ್ ಬಾರ್ ಗಳು (ಸಂಗ್ರಹ ಚಿತ್ರ)

ನವದೆಹಲಿ: ಮಹಾರಾಷ್ಟ್ರದಲ್ಲಿ ಡ್ಯಾನ್ಸ್ ಬಾರ್ ಗಳ ಮೇಲಿನ ನಿಷೇಧವನ್ನು ತೆರವುಗೊಳಿಸಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದು, ಕೆಲವೇ ದಿನಗಳಲ್ಲಿ ಹೋಟೆಲ್, ಬಾರ್ ಮತ್ತು ರೆಸ್ಟೋರೆಂಟ್  ಗಳಲ್ಲಿ ಡ್ಯಾನ್ಸ್ ಬಾರ್ ಆರಂಭವಾಗಲಿದೆ. ಸುಪ್ರೀಂ ತೀರ್ಪಿನಿಂದಾಗಿ ಮಹಾರಾಷ್ಟ್ರ ಸರ್ಕಾರಕ್ಕೆ ಹಿನ್ನಡೆಯಾದಂತಾಗಿದೆ.

ಆದರೆ ಸ್ವೇಚ್ಛೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ, ಡ್ಯಾನ್ಸ್ ಬಾರ್ ಗಳಿಗೆ ಪರವಾನಗಿ ನೀಡುವ ಅಧಿಕಾರಿಗಳು ಅಶ್ಲೀಲತೆ, ನಗ್ನತೆ ಇತ್ಯಾದಿಗಳಿಗೆ ಅವಕಾಶ ನೀಡ ದಂತೆ ನಿಯಂತ್ರಣವಿಟ್ಟುಕೊಳ್ಳ ಬೇಕು ಹಾಗೂ ಮಹಿಳಾ ಕಲಾವಿದರ ಗೌರವಕ್ಕೆ ಚ್ಯುತಿ ಬಾರದಂತೆ ಎಚ್ಚರ ವಹಿಸಬೇಕೆಂದು ಕೋರ್ಟ್ ತಾಕೀತು ಮಾಡಿದೆ. 2014ರ ಮಹಾರಾಷ್ಟ್ರ ಪೊಲೀಸ್ ಕಾಯ್ದೆ ಅನ್ವಯ ಡ್ಯಾನ್ಸ್ ಬಾರ್  ಗಳನ್ನು ನಿಷೇಧಿಸುವ ಮೂಲಕ ಸರ್ಕಾರ ಸುಪ್ರೀಂ ಕೋರ್ಟ್‍ನ 2013ರ ತೀರ್ಪನ್ನು ಸರ್ಕಾರ ಉಲ್ಲಂಘಿಸಿದಂತಾಗಿತ್ತು. ಇದೀಗ ನ್ಯಾಯಪೀಠವು ಕೆಲವು ನಿಬಂಧನೆಗಳೊಂದಿಗೆ ಡ್ಯಾನ್ಸ್ ಬಾರ್‍ಗಳಿಗೆ ಮತ್ತೊಮ್ಮೆ ಚಾಲನೆ ನೀಡಿದೆ.

ಸುಪ್ರೀಂ ನಿರ್ಧಾರವನ್ನು ಗೌರವಿಸುತ್ತೇವೆ ಎಂದು ಮಹಾರಾಷ್ಟ್ರ ಸಿಎಂ ಫಡ್ನವೀಸ್ ಪ್ರತಿಕ್ರಿಯಿಸಿದ್ದಾರಾದರೂ, ಜೊತೆಜೊತೆಗೇ ತಾವು ಈಗಲೂ ಡ್ಯಾನ್ಸ್ ಬಾರ್ ನಿಷೇಧಕ್ಕೆ ಬದ್ಧರಾಗಿದ್ದೇವೆ ಎಂದೂ ಹೇಳಿ ದ್ದಾರೆ. ಹೋಟೆಲ್  ಮತ್ತು ರೆಸ್ಟೋರೆಂಟ್ ಅಸೋಸಿಯೇಷನ್ ಸಲ್ಲಿಸಿದ್ದ ಅರ್ಜಿಯ ಅಂತಿಮ ವಿಚಾರಣೆ ನ. 5ಕ್ಕೆ ನಿಗದಿಗೊಂಡಿದ್ದು, ಅಷ್ಟರೊಳಗೆ ಸುಪ್ರೀಂ ಎದುರು ವಾದ  ಮಂಡಿಸಲಿರುವುದಾಗಿ ಸಿಎಂ ಟ್ವೀಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com