ದೆಹಲಿಯಲ್ಲಿ ಮತ್ತಿಬ್ಬರು ಬಾಲೆಯರ ಮೇಲೆ ಅತ್ಯಾಚಾರ

ನಾಲ್ಕು ವರ್ಷದ ಮಗುವಿನ ಮೇಲೆ ಅತ್ಯಾಚಾರವೆಸಗಿರುವ ಪ್ರಕರಣದ ವಿಷಯ ಇನ್ನೂ ಜೀವಂತವಾಗಿರುವಾಗಲೇ ರಾಜಧಾನಿ ದೆಹಲಿಯಲ್ಲಿ ಮತ್ತಿಬ್ಬರು...
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ

ನವದೆಹಲಿ: ನಾಲ್ಕು ವರ್ಷದ ಮಗುವಿನ ಮೇಲೆ ಅತ್ಯಾಚಾರವೆಸಗಿರುವ ಪ್ರಕರಣದ ವಿಷಯ ಇನ್ನೂ ಜೀವಂತವಾಗಿರುವಾಗಲೇ ರಾಜಧಾನಿ ದೆಹಲಿಯಲ್ಲಿ ಮತ್ತಿಬ್ಬರು ಅಪ್ರಾಪ್ತ ಬಾಲಕಿಯರ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿರುವ ಪ್ರಕರಣ ಶುಕ್ರವಾರ ನಡೆದಿದೆ.ಇಬ್ಬರು ಬಾಲಕಿಯರಿಗೂ ಅಘಾತವಾಗಿದ್ದು ಅವರ ಪರಿಸ್ಥಿತಿ ಚಿಂತಾಜನಕವಾಗಿದೆ.

ಪಶ್ಚಿಮ ದೆಹಲಿಯ ನಂಗ್ಲೋಯಿ ಪ್ರದೇಶದಲ್ಲಿ ಮನೆಯ ಹೊರಗೆ ಇದ್ದ ಎರಡೂವರೆ ವರ್ಷದ ಮಗುವನ್ನು ಅಪಹರಿಸಿದ ಇಬ್ಬರು ಆರೋಪಿಗಳು ಬೈಕಿನಲ್ಲಿ ಎತ್ತಿಕೊಂಡು ಹೋಗಿ ಅತ್ಯಾಚಾರವೆಸಗಿದ್ದಾರೆ. ಸ್ವಲ್ಪ ಹೊತ್ತು ಕಳೆದ ನಂತರ ಸ್ಥಳೀಯರು ಅವಳನ್ನು ಹತ್ತಿರದ ಪಾರ್ಕ್ ನಲ್ಲಿ ಅಸ್ವಸ್ಥವಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದನ್ನು ಕಂಡಿದ್ದಾರೆ. ಅಪಾರ ರಕ್ತಸ್ರಾವವಾಗುತ್ತಿತ್ತು.

ಮನೆಯ ಪಕ್ಕ ರಾಮಲೀಲಾ ಪ್ರದರ್ಶನ ನಡೆಯುತ್ತಿತ್ತು. ಮಧ್ಯದಲ್ಲಿ ಕರೆಂಟು ಹೋಯಿತು. ಆಗ ದುಷ್ಕರ್ಮಿಗಳು ನನ್ನ ಮಗಳನ್ನು ಅಪಹರಿಸಿದರು ಎಂದು ಮಗುವಿನ ತಾಯಿ ಹೇಳಿದ್ದಾರೆ.
ಮಗುವಿನ ಆರೋಗ್ಯ ವಿಚಾರಿಸಲು ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್, ಮಗುವಿನ ಗುಪ್ತಾಂಗಕ್ಕೆ ತೀವ್ರ ಗಾಯವಾಗಿದ್ದು, ಅವಳ ದೇಹದ ಮೇಲೆಯೂ ಪರಚಿದ ಗುರುತುಗಳಿವೆ. ರಕ್ತ ಸೋರುವುದು ನಿಂತಿಲ್ಲ. ಮಗುವಿಗೆ ಸಂಜಯ್ ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಟ್ವಿಟ್ಟರ್ ನಲ್ಲಿ ತಿಳಿಸಿದ್ದಾರೆ. ಆರೋಪಿಗಳನ್ನು ಇದುವರೆಗೆ ಬಂಧಿಸಿಲ್ಲ.

ಇನ್ನೊಂದು ಘಟನೆಯಲ್ಲಿ, ಪೂರ್ವ ದೆಹಲಿಯ ಆನಂದ್ ವಿಹಾರ್ ಪ್ರದೇಶದಲ್ಲಿ ಐದು ವರ್ಷದ ಹೆಣ್ಣು ಮಗುವಿನ ಮೇಲೆ ಕೂಡ ಸಾಮೂಹಿಕ ಅತ್ಯಾಚಾರ ನಡೆದಿದ್ದು, ಮಗುವಿನ ನೆರೆಮನೆಯವನು ತನ್ನ ಮನೆಗೆ ಕರೆದುಕೊಂಡು ಹೋಗಿ ತನ್ನ ಸ್ನೇಹಿತರೊಡಗೂಡಿ ಅತ್ಯಾಚಾರ ಮಾಡಿದ್ದಾನೆ.

ಮಗು ಅತ್ತುಕೊಂಡು ಮನೆಯಿಂದ ಹೊರಬರುತ್ತಿದ್ದುದನ್ನು ಕಂಡ ನೆರೆ ಮನೆಯವರು ಮಗುವಿನ ತಾಯಿಗೆ ತಿಳಿಸಿದ್ದಾರೆ. ಮಗುವಿನ ಬಟ್ಟೆ ಮೇಲೆ ರಕ್ತದ ಕಲೆಗಳಿದ್ದವು. ಪೊಲೀಸರಿಗೆ ದೂರು ನೀಡಿದಾಗ ಕಾರ್ಯಪ್ರವೃತ್ತರಾಗಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com