ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ದೆಹಲಿ ಅತ್ಯಾಚಾರ ಪ್ರಕರಣ: ಇಬ್ಬರು ಬಾಲಾಪರಾಧಿಗಳ ಬಂಧನ

ದೆಹಲಿಯ ನಂಗ್ಲೊಯಿಯಲ್ಲಿ ಪುಟ್ಟ ಮಗುವನ್ನು ಅಪಹರಿಸಿ, ಭೀಕರವಾಗಿ ಅತ್ಯಾಚಾರ ಎಸಗಿದ್ದ ಪ್ರಕರಣ ಸಂಬಂಧ ದೆಹಲಿ ಪೊಲೀಸರು ಇಬ್ಬರು ಬಾಲಾಪರಾಧಿಗಳನ್ನು ಬಂಧಿಸಿದ್ದಾರೆ
Published on

ನವದೆಹಲಿ: ದೆಹಲಿಯ ನಂಗ್ಲೊಯಿಯಲ್ಲಿ ಪುಟ್ಟ ಮಗುವನ್ನು ಅಪಹರಿಸಿ, ಭೀಕರವಾಗಿ ಅತ್ಯಾಚಾರ ಎಸಗಿದ್ದ ಪ್ರಕರಣ ಸಂಬಂಧ ದೆಹಲಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ಇಬ್ಬರು ಸುಮಾರು 17 ವರ್ಷದೊಳಗಿನ ಬಾಲಾಪರಾಧಿಗಳಾಗಿದ್ದಾರೆ. ಅದೇ ಪ್ರದೇಶದಲ್ಲಿ ವಾಸಿಸುವ ಆರೋಪಿಗಳು ಮಗುವಿನ ಕುಟುಂಬದವರಿಗೆ ಪರಿಚಿತರು ಎನ್ನಲಾಗಿದೆ.

'ಪ್ರಕರಣ ಸಂಬಂಧ 15ಕ್ಕೂ ಹೆಚ್ಚು ತಂಡಗಳನ್ನು ರಚಿಸಲಾಗಿತ್ತು. ಇಡೀ ರಾತ್ರಿ ಸುಮಾರು 250 ಸ್ಥಳೀಯರನ್ನು ಪ್ರಶ್ನಿಸಲಾಗಿತ್ತು. ಕೊನೆಗೆ ಬಾಲಾರೋಪಿಗಳನ್ನು ಪೊಲೀಸರು ಬಂಧಿಸಿದರು,' ಎಂದು ಜಂಟಿ ಪೊಲೀಸ್‌ ಆಯುಕ್ತ (ನೈಋತ್ಯ) ದೀಪೇಂದ್ರ ಪಾಠಕ್‌ ಹೇಳಿದ್ದಾರೆ.
ಅತ್ಯಾಚಾರ ಪ್ರಕರಣ ಗಮನಕ್ಕೆ ಬಂದ ಕೂಡಲೇ, ಪೊಕ್ಸೊ ಕಾಯಿದೆ ಹಾಗೂ ಐಪಿಸಿ ಸೆಕ್ಷನ್‌ ಅಡಿ ಪ್ರಕರಣ ದಾಖಲಿಸಿದ್ದ ಪೊಲೀಸರು, ಅತ್ಯಾಚಾರಿಗಳ ಬಂಧನಕ್ಕೆ ಜಾಲ ಬೀಸಿದ್ದರು.

ಘಟನೆ ನಡೆದ ರಾತ್ರಿ ರಾಮಲೀಲಾ ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳದಲ್ಲಿ ಆರೋಪಿಗಳು ಹಾಗೂ ಎರಡೂವರೆ ವರ್ಷದ ಮಗು  ತನ್ನ ಅಜ್ಜಿ ಜೊತೆ  ಇತ್ತು ಎಂದು ಹೇಳಲಾಗಿದೆ.ರಾತ್ರಿ 11.30ರ ಸುಮಾರಿಗೆ 10 ನಿಮಿಷಗಳ ಕಾಲ ವಿದ್ಯುತ್‌ ಸಂಪರ್ಕ ಕಡಿತಗೊಂಡ ನಂತರ ಅಜ್ಜಿ ಜತೆ ಇದ್ದ ಮಗು ಕಾಣೆಯಾಗಿತ್ತು. ಕೆಲ ತಾಸಿನ ನಂತರ ಸಮೀಪದ ಉದ್ಯಾನದಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಗು ಪತ್ತೆಯಾಗಿತ್ತು. ನಂತರ ಮಗುವನ್ನು ಸಂಜಯ್‌ ಗಾಂಧಿ ಮೆಮೊರಿಯಲ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಗುವಿನ ಮೇಲೆ ಅತ್ಯಾಚಾರ ನಡೆದಿರುವ ವಿಷಯವನ್ನು ವೈದ್ಯರು ಖಚಿತಪಡಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com