ಕಾರ್ಮಿಕ ವರ್ಗಕ್ಕೆ ಹಬ್ಬದ ಉಡುಗೊರೆ: ಬೋನಸ್‌ ವೇತನ ಹೆಚ್ಚಳ

ದಸರಾ ಹಬ್ಬದ ಉಡುಗೊರೆಯಾಗಿ ದೇಶದ ಕಾರ್ಮಿಕ ವರ್ಗಕ್ಕೆ ಕೇಂದ್ರ ಸರ್ಕಾರ ಕೊಡುಗೆ ನೀಡಿದೆ. ಬೋನಸ್‌ ವೇತನ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ನವದೆಹಲಿ: ದಸರಾ ಹಬ್ಬದ ಉಡುಗೊರೆಯಾಗಿ ದೇಶದ ಕಾರ್ಮಿಕ ವರ್ಗಕ್ಕೆ ಕೇಂದ್ರ ಸರ್ಕಾರ ಕೊಡುಗೆ ನೀಡಿದೆ. ಬೋನಸ್‌ ವೇತನ ಮಿತಿಯನ್ನು 3500 ರೂಪಾಯಿಯಿಂದ 7 ಸಾವಿರ ರೂಪಾಯಿಗೆ ಹೆಚ್ಚಿಸಲು ನಿರ್ಧರಿಸಿದೆ.

ಈ ಸಂಬಂಧ ಬೋನಸ್‌ ಪಾವತಿ (ತಿದ್ದುಪಡಿ) ವಿಧೇಯಕ 2015ಕ್ಕೆ ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಕೈಗಾರಿಕೆಗಳು ಹಾಗೂ 20 ಅಥವಾ ಅದಕ್ಕಿಂತ ಹೆಚ್ಚು ನೌಕರರನ್ನು ಹೊಂದಿರುವ ಉದ್ದಿಮೆಗಳಿಗೆ ಈ ಪರಿಷ್ಕರಣೆ ಅನ್ವಯವಾಗಲಿದೆ.

ವಿಧೇಯಕ 2015ರ ಏಪ್ರಿಲ್ 1 ರಿಂದ ಪೂರ್ವಾನ್ವಯವಾಗುವಂತೆ ಜಾರಿಗೆ ಬರಲಿದೆ. ಬೋನಸ್‌ ಪಡೆಯಲು ಇರಬೇಕಾದ ವೇತನ ಅರ್ಹತೆಯನ್ನು 10 ಸಾವಿರ ರೂಪಾಯಿಯಿಂದ 21 ಸಾವಿರ ರೂಪಾಯಿಗೆ ಹೆಚ್ಚಳ ಮಾಡಲಿದೆ.ಬೋನಸ್‌ ನೀಡಲು ವೇತನ ಮಿತಿಯನ್ನು ಇಟ್ಟುಕೊಳ್ಳಲಾಗುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com