ಅಜಂಖಾನ್ ಹೇಳಿಕೆ: ಅಖಿಲೇಶ್ ರಿಂದ ಸ್ಪಷ್ಟನೆ ಕೇಳಿದ ಬಿಜೆಪಿ

ಮೊಬೈಲ್ ನಿಂದಲೇ ಅತ್ಯಾಚಾರ ಪ್ರಕರಣಗಳು ಏರಿಕೆಯಾಗುತ್ತಿದೆ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದ ಹಿರಿಯ ನಾಯಕ ಅಜಂಖಾನ್ ಅವರ ಹೇಳಿಕೆ ಕುರಿತಂತೆ ಸ್ಪಷ್ಟನೆ ನೀಡುವಂತೆ ಬಿಜೆಪಿಯು ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರನ್ನು ಶನಿವಾರ ಕೇಳಿದೆ...
ಸಮಾಜವಾದಿ ಪಕ್ಷದ ಮುಖಂಡ ಅಜಂಖಾನ್ (ಸಂಗ್ರಹ ಚಿತ್ರ)
ಸಮಾಜವಾದಿ ಪಕ್ಷದ ಮುಖಂಡ ಅಜಂಖಾನ್ (ಸಂಗ್ರಹ ಚಿತ್ರ)

ಲಖನೌ: ಮೊಬೈಲ್ ನಿಂದಲೇ ಅತ್ಯಾಚಾರ ಪ್ರಕರಣಗಳು ಏರಿಕೆಯಾಗುತ್ತಿದೆ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದ ಹಿರಿಯ ನಾಯಕ ಅಜಂಖಾನ್ ಅವರ ಹೇಳಿಕೆ ಕುರಿತಂತೆ ಸ್ಪಷ್ಟನೆ ನೀಡುವಂತೆ ಬಿಜೆಪಿಯು ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರನ್ನು ಶನಿವಾರ ಕೇಳಿದೆ.

ಅಜಂಖಾನ್ ಹೇಳಿಕೆ ಕುರಿತಂತೆ ಇಂದು ಪ್ರತಿಕ್ರಿಯೆ ನೀಡಿರುವ ಬಿಜೆಪಿ ವಕ್ತಾರ ವಿಜಯ್ ಬಹದ್ದೂರ್ ಪಥಕ್ ಅವರು, ಅಖಿಲೇಖ್ ಯಾದವ್ ಅವರು ಡಿಜಿಟಲ್ ಯೋಜನೆಗಳಿಗೆ ದೊಡ್ಡ ಬೆಂಬಲಿಗರಾಗಿದ್ದಾರೆ. ಆದರೆ, ಅವರ ಪಕ್ಷದ ನಾಯಕರಿಂದಲೇ ಇಂದು ಡಿಜಿಟಲ್ ಕುರಿತಂತೆ ವಿರೋಧದ ಹೇಳಿಕೆಗಳು ಬರುತ್ತಿವೆ. ಹೀಗಾಗಿ ಅಜಂಖಾನ್ ಅವರ ಹೇಳಿಕೆ ಕುರಿತಂತೆ ಶೀಘ್ರವೇ ಯಾದವ್ ಅವರು ಸ್ಪಷ್ಟನೆ ನೀಡಬೇಕೆಂದು ಹೇಳಿದ್ದಾರೆ.

ಡಿಜಿಟಲ್ ಯೋಜನೆಗೆ ಬೆಂಬಲ ವ್ಯಕ್ತಪಡಿಸುವ ಯಾದವ್ ಅವರು ಈ ಹಿಂದೆ ರಾಜ್ಯದ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್, ಕೆಲವು ಪ್ರದೇಶಗಳಲ್ಲಿ ಉಚಿತ ವೈಫೈ ಸೌಲಭ್ಯಗಳನ್ನು ನೀಡಿದ್ದರು. ಇದಲ್ಲದೆ, ಅಧಿಕೃತ ಸಾಮಾಜಿಕ ಆರೋಗ್ಯ ಹೋರಾಟಗಾರರಿಗೆ ಆರೋಗ್ಯ ಅಭಿವೃದ್ಧಿಯಾಗಲೆಂದು ಸ್ಮಾರ್ಟ್ ಫೋನ್ ಗಳನ್ನು ನೀಡಿದ್ದರು. ಡಿಜಿಟಲ್ ಯೋಜನೆಗಳಿಗೆ ಬೆಂಬಲ ಸೂಚಿಸುವ ಮಂತ್ರಿಗಳು ಇದೀಗ ಅಜಂಖಾನ್ ಅವರ ಹೇಳಿಕೆಗೆ ಸ್ಪಷ್ಟನೆ ನೀಡಲಿ. ಹೇಳಿಕೆ ಕುರಿತಂತೆ ಅಖಿಲೇಶ್ ಅವರು ಮೌನವಹಿಸಿದರೆ ಇದನ್ನು ನಾವು ಒಪ್ಪುವುದಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ, ರಾಜ್ಯದಲ್ಲಿ ಉತ್ತರ ಹಾಗೂ ಭದ್ರತಾ ವಾತಾವರಣ ನಿರ್ಮಾಣವಾಗಲು ಸರ್ಕಾರ ಮೊದಲು ಕಾನೂನು ಮತ್ತು ಆದೇಶಗಳನ್ನು ಅಭಿವೃದ್ಧಿಪಡಿಸಬೇಕಿದೆ ಎಂದು ಸಲಹೆ ನೀಡಿದ್ದಾರೆ.

ನಿನ್ನೆಯಷ್ಟೇ ಖಾಸಗಿ ಮಾಧ್ಯಮವೊಂದರಲ್ಲಿ ಮಾತನಾಡಿದ್ದ ಸಮಾಜವಾದಿ ಪಕ್ಷದ ಮುಖಂಡ ಅಜಂಖಾನ್ ಅವರು, ಇಂದು ಸಣ್ಣಪುಟ್ಟ ಮಕ್ಕಳೆಲ್ಲಾ ಅತ್ಯಾಚಾರಕ್ಕೊಳಗಾಗುತ್ತಿದ್ದಾರೆ. ಇದಕ್ಕೆ ಪ್ರಮುಖ ಕಾರಣ ಮೊಬೈಲ್ ಫೋನುಗಳು, ಮೊಬೈಲ್ ಫೋನುಗಳಲ್ಲಿ ಉಚಿತವಾಗಿ ಅಶ್ಲೀಲ ಚಿತ್ರಗಳು ದೊರೆಯುತ್ತಿದ್ದು, ಇದರಿಂದ ಅತ್ಯಾಚಾರದಂತಹ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com