ಅ.26ಕ್ಕೆ ಗೀತಾ ಭಾರತಕ್ಕೆ

ಪಾಕಿಸ್ತಾನದಲ್ಲಿರುವ ಭಾರತದ ಯುವತಿ ಗೀತಾ ಅ.26ಕ್ಕೆ ಸ್ವದೇಶಕ್ಕೆ ಆಗಮಿಸಲಿದ್ದಾಳೆ. ಇದುವರೆಗೆ ಆ ರಾಷ್ಟ್ರದಲ್ಲಿ ಗೀತಾಳನ್ನು ನೋಡಿಕೊಂಡ ಎಧಿ ಪ್ರತಿಷ್ಠಾನದ ಐವರು ಸದಸ್ಯರು ಆಕೆಯ ಜತೆ ಆಗಮಿಸಲಿದ್ದಾರೆ...
ಪಾಕಿಸ್ತಾನದಲ್ಲಿರುವ ಗೀತಾ ಮತ್ತು ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ (ಸಂಗ್ರಹ ಚಿತ್ರ)
ಪಾಕಿಸ್ತಾನದಲ್ಲಿರುವ ಗೀತಾ ಮತ್ತು ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ (ಸಂಗ್ರಹ ಚಿತ್ರ)

ನವದೆಹಲಿ: ಪಾಕಿಸ್ತಾನದಲ್ಲಿರುವ ಭಾರತದ ಯುವತಿ ಗೀತಾ ಅ.26ಕ್ಕೆ ಸ್ವದೇಶಕ್ಕೆ ಆಗಮಿಸಲಿದ್ದಾಳೆ. ಇದುವರೆಗೆ ಆ ರಾಷ್ಟ್ರದಲ್ಲಿ ಗೀತಾಳನ್ನು ನೋಡಿಕೊಂಡ ಎಧಿ ಪ್ರತಿಷ್ಠಾನದ ಐವರು  ಸದಸ್ಯರು ಆಕೆಯ ಜತೆ ಆಗಮಿಸಲಿದ್ದಾರೆ.

ವಿದೇಶಾಂಗ ಇಲಾಖೆ ವಕ್ತಾರ ವಿಕಾಸ್ ಸ್ವರೂಪ್ ಶುಕ್ರವಾರ ಈ ಮಾಹಿತಿ ನೀಡಿದ್ದಾರೆ. ಮೂಲಗಳ ಪ್ರಕಾರ ಗೀತಾ ತನ್ನ ಹೆತ್ತವಳನ್ನು ಗುರುತಿಸಿದ್ದಾಳೆ. ಜತೆಗೆ ಕುಟುಂಬದ ಇತರ ಸದಸ್ಯರನ್ನೂ ಗುರುತುಸಿದ್ದಾಳೆ. ಆಕೆ ಏಳು ಅಥವಾ ಎಂಟು ವರ್ಷದವಳಿದ್ದಾಗ ಲಾಹೋರ್ ರೈಲು ನಿಲ್ದಾಣದಲ್ಲಿ ಒಬ್ಬಂಟಿಯಾಗಿ ಕುಳಿದ್ದಳು. ಪೊಲೀಸರು ಆಕೆಯನ್ನು ಎಧಿ ಪ್ರತಿಷ್ಠಾನಕ್ಕೆ ಒಪ್ಪಿಸಿದ್ದರು. ಇತ್ತೀಚೆಗೆ  ಇಸ್ಲಾಮಾಬಾದ್‍ನಲ್ಲಿರುವ ಭಾರತದ ಹೈಕಮಿಷನರ್ ಟಿ.ಸಿ.ಎ.ರಾಘವನ್ ಮತ್ತು ಪತ್ನಿ ಗೀತಾ ಜತೆ ಭೇಟಿಯಾಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com