
ನವದೆಹಲಿ: ಚಿಲ್ಲರೆ ಮಾರುಕಟ್ಟೆಯಲ್ಲಿ ಬೇಳೆಕಾಳುಗಳ ಬೆಲೆ ಪ್ರತಿ ಕೆಜಿಗೆ ರು.210 ಆಗುತ್ತಿದ್ದಂತೆಯೇ ಕರ್ನಾಟಕ ಸೇರಿದಂತೆ 13 ರಾಜ್ಯಗಳಲ್ಲಿ ಕೇಂದ್ರ ಸರ್ಕಾರ ವಶಪಡಿಸಿಕೊಂಡ ಬೇಳೆಕಾಳುಗಳ ಪ್ರಮಾಣ 75 ಸಾವಿರ ಟನ್‍ಗೆ ಏರಿಕೆಯಾಗಿದೆ.
ಮಹಾರಾಷ್ಟ್ರದಲ್ಲಿ 46,397, ಕರ್ನಾಟಕದಲ್ಲಿ 8,755.34, ಬಿಹಾರ, 4,933.89, ಛತ್ತೀಸ್ ಗಡ 4,530.39, ತೆಲಂಗಾಣ 2,546, ಮಧ್ಯಪ್ರದೇಶ 2,295, ರಾಜಸ್ಥಾನದಲ್ಲಿ 2,222 ಟನ್‍ಗಳಷ್ಟು ಬೇಳೆಕಾಳನ್ನು ವಶಪಡಿಸಿಕೊಳ್ಳಲಾಗಿದೆ. ಕೈಗೆಟಕುವ ದರದಲ್ಲಿ ಬೇಳೆಕಾಳುಗಳು ಜನಸಾಮಾನ್ಯರಿಗೆ ಸಿಗುವಂತಾಗಲು ರಾಜ್ಯ ಸರ್ಕಾರಗಳು ಮಿಲ್ ಮಾಲೀಕರು, ಸಗಟು ಮಾರಾಟಗಾರರು, ಚಿಲ್ಲರೆ ಮಾರಾಟಗಾರರ ಜತೆ ಚರ್ಚಿಸಬೇಕೆಂದು ಕೇಂದ್ರ ಸೂಚಿಸಿದೆ.
Advertisement