ಶ್ರೀಮಂತನಾಗುವ ಆಸೆಯಲ್ಲಿ ಕೊಲೆಗಾರನಾದ ಅಪ್ರಾಪ್ತ ಬಾಲಕ

ಬಲಿ ನೀಡಿದರೆ ಆಧ್ಯಾತ್ಮಿಕ ಶಕ್ತಿ ಹಾಗೂ ಶ್ರೀಮಂತನಾಗಬಹುದೆಂಬ ಹುಚ್ಚಾಸೆಯಿಂದಾಗಿ ಅಪ್ರಾಪ್ತ ಬಾಲಕನೊಬ್ಬರು ಇಬ್ಬರು ವ್ಯಕ್ತಿಗಳನ್ನು ಹತ್ಯೆ ಮಾಡಿ ಇದೀಗ ಪೊಲೀಸರ ಅತಿಥಿಯಾಗಿರುವ ಘಟನೆಯೊಂದು ದೆಹಲಿಯ ನಿಹಾಲ್ ವಿಹಾರ್ ಬಳಿ ಮಂಗಳವಾರ ನಡೆದಿದೆ...
(ಸಾಂದರ್ಭಿಕ  ಚಿತ್ರ)
(ಸಾಂದರ್ಭಿಕ ಚಿತ್ರ)

ನವದೆಹಲಿ: ಬಲಿ ನೀಡಿದರೆ ಆಧ್ಯಾತ್ಮಿಕ ಶಕ್ತಿ ಹಾಗೂ ಶ್ರೀಮಂತನಾಗಬಹುದೆಂಬ ಹುಚ್ಚಾಸೆಯಿಂದಾಗಿ ಅಪ್ರಾಪ್ತ ಬಾಲಕನೊಬ್ಬರು ಇಬ್ಬರು ವ್ಯಕ್ತಿಗಳನ್ನು ಹತ್ಯೆ ಮಾಡಿ ಇದೀಗ ಪೊಲೀಸರ ಅತಿಥಿಯಾಗಿರುವ ಘಟನೆಯೊಂದು ದೆಹಲಿಯ ನಿಹಾಲ್ ವಿಹಾರ್ ಬಳಿ ಮಂಗಳವಾರ ನಡೆದಿದೆ.

ಹತ್ಯೆ ಮಾಡಿದ ಬಾಲಕ 16 ವರ್ಷದ ಹರೆಯನಾಗಿದ್ದು, ಬಾಲಕನ ಹುಚ್ಚಾಸೆಗೆ ಹತ್ಯೆ ಮಾಡಲು ಸಹಾಯ ಮಾಡಿದ ಪ್ರದೀಪ್ (25) ಎಂಬುವವನನ್ನೂ ದೆಹಲಿ ಪೊಲೀಸರು ಇದೀಗ ಬಂಧನಕ್ಕೊಳಪಡಿಸಿದ್ದಾರೆ.

ಹುಚ್ಚಾಸೆಗೆ ಹತ್ಯೆ ಮಾಡಿದ ಬಾಲಕನ ಕುಟುಂಬದವರು ಕಡುಬಡವರಾಗಿದ್ದು, ಬಾಲಕನ ತಾಯಿ ಹಾಗೂ ಆತನ ಸಹೋದರ ಕೂಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದಾರೆ. ಬಡ ಕುಟುಂಬದ ಈ ಬಾಲಕನಿಗೆ ಶ್ರೀಮಂತನಾಗುವ ಅತೀವ ಬಯಕೆಯಿತ್ತು. ಕನಸಿನಲ್ಲಿ ಬಂದ ಬಾಬಾ ಒಬ್ಬರು 10 ಮಾನವರನ್ನು ಬಲಿ ನೀಡಿದರೆ, ಆಧ್ಯಾತ್ಮಿಕ ಶಕ್ತಿ ಹಾಗೂ ಶ್ರೀಮಂತನಾಗಬಹುದು ಎಂದು ಹೇಳಿದ್ದರಂತೆ. ಹೀಗಾಗಿ ಕನಸಿನಲ್ಲಿ ಬಾಬಾ ಹೇಳಿದ ಮಾತನ್ನು ನಡೆಸಿಕೊಡಲು ಕನಸು ಕಂಡ ನಾಲ್ಕು ತಿಂಗಳ ನಂತರ ಹತ್ಯೆ ಮಾಡಲು ಪ್ರಾರಂಭಿಸಿದ್ದಾನೆ. ಇದರಂತೆ ತನ್ನ ಸಹಾಯಕ್ಕೆ ಪ್ರದೀಪ್ ಎಂಬ ಯುವಕನನ್ನು ಬಳಸಿಕೊಂಡಿದ್ದಾನೆ.

ಕನಸನ್ನು ನನಸು ಮಾಡಲು ಹೊರಟ ಬಾಲಕ ಮಧ್ಯವ್ಯಸನಿಯಾಗಿರುವ ಇಬ್ಬರು ವ್ಯಕ್ತಿಗಳನ್ನು ಆಯ್ಕೆ ಮಾಡಿಕೊಂಡಿದ್ದಾನೆ. ಇದರಂತೆ ಮಧ್ಯವ್ಯಸನಿಯಾಗಿದ್ದ 25 ರ ಹರೆಯದ ಕನ್ನಯ್ಯಾ ಎಂಬಾತನಿಕೆ ಮಧ್ಯದ ಆಸೆ ತೋರಿಸಿ ಮದ್ಯವನ್ನು ಕುಡಿಸಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದಾನೆ. ಯೋಜನೆಯಂತೆಯೇ ಕನ್ನಯ್ಯಾ ವ್ಯಕ್ತಿಯ ಕತ್ತನ್ನು ಸೀಳಿ ಹತ್ಯೆ ಮಾಡಿದ್ದಾನೆ. ಇದರಂತೆಯೇ ಎರಡು ದಿನಗಳ ಬಳಿಕವೂ ಮಧ್ಯವ್ಯಸನಿಯಾಗಿದ್ದ 40 ವರ್ಷದ ಹರಿರಾಮ್ ಎಂಬ ವ್ಯಕ್ತಿಯನ್ನು ಮಧ್ಯ ಕುಡಿಸಿ ಅದೇ ಸ್ಥಳಕ್ಕೆ ಕರೆದೊಯ್ದು ಹತ್ಯೆ ಮಾಡಿದ್ದಾನೆಂದು ತಿಳಿದುಬಂದಿದೆ.

ಎರಡು ಹತ್ಯೆಗಳೂ ಒಂದೇ ರೀತಿಯಿದ್ದ ಕಾರಣ ಅನುಮಾನಗೊಂಡ ಪೊಲೀಸರು ಕೊಲೆ ಪ್ರಕರಣ ಸಂಬಂಧ ತನಿಖಾ ತಂಡವೊಂದನ್ನು ರೂಪಿಸಿದ್ದಾರೆ. ಇದರಂತೆ ಮೊದಲು ದೆಹಲಿ ನಿಹಾಲ್ ವಿಹಾರ್ ಪ್ರದೇಶದಲ್ಲಿದ್ದ ಪ್ರದೀಪ್ ಎಂಬಾತನ ಮನೆಯನ್ನು ಪೊಲೀಸರು ಸುತ್ತುವರೆದಿದ್ದಾರೆ. ಈ ವೇಳೆ ಪ್ರದೀಪ್ ಪೊಲೀಸರ ಬಲೆಗೆ ಬಿದ್ದಿದ್ದಾನೆ. ನಂತರ ಅದೇ ಪ್ರದೇಶದಲ್ಲಿದ್ದ 16 ವರ್ಷದ ಬಾಲಕನನ್ನು ಪೊಲೀಸರು ಬಂಧನಕ್ಕೊಳಪಡಿಸಿದಾಗ ಬಾಲಕ ನಡೆದ ಸಂಗತಿಯನ್ನು ವಿವರಿಸಿದ್ದಾನೆಂದು ಪೊಲೀಸರು ಹೇಳಿದ್ದಾರೆ.

10 ಮಾನವರ ಬಲಿ ನೀಡಿದರೆ ಶ್ರೀಮಂತನಾಗಬಹುದೆಂದು ಬಾಬಾ ಕನಸಿನಲ್ಲಿ ಹೇಳಿದ್ದರು. ಹೀಗಾಗಿ ಹತ್ಯೆ ಮಾಡುವುದಕ್ಕೂ ಮೊದಲು ಉತ್ತರಾಖಂಡ ಮತ್ತು ಹರಿದ್ವಾರಗಳಿಗೆ ಹೋಗಿ ದೇವರ ಆಶೀರ್ವಾದ ಪಡೆದುಕೊಂಡು ನಂತರ ಅಸ್ತ್ರವನ್ನು ಕೊಂಡು ದೆಹಲಿಗೆ ಮರಳಿದ್ದೆ. ನಂತರ ಹತ್ಯೆಗೆ ಯೋಜನೆ ರೂಪಿಸಲಾಗಿತ್ತು ಎಂದು ತನಿಖೆ ವೇಳೆ ಬಾಲಕ ತಿಳಿಸಿದ್ದಾನೆಂದು ಪೊಲೀಸರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com