ಅಮಿತ್ ಶಾ ರ್ಯಾಲಿ ವೇಳೆ ಗೋಡೆ ಕುಸಿತ: 10 ಗಾಯ

ಬಿಹಾರ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ರ್ಯಾಲಿ ನಡೆಯುಸುತ್ತಿದ್ದ ವೇಳೆ ಗೋಡೆಯೊಂದು ಕುಸಿದು ಬಿದ್ದ ಪರಿಣಾಮ 4 ಮಕ್ಕಳು ಸೇರಿ 10 ಮಂದಿ ಗಾಯಗೊಂಡಿರುವ ಘಟನೆ ಬಿಹಾರದ ಬಾಘದಲ್ಲಿ ಗುರುವಾರ ನಡೆದಿದೆ...
ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ (ಸಂಗ್ರಹ ಚಿತ್ರ)
ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ (ಸಂಗ್ರಹ ಚಿತ್ರ)

ಬಾಘ: ಬಿಹಾರ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ರ್ಯಾಲಿ ನಡೆಯುಸುತ್ತಿದ್ದ ವೇಳೆ ಗೋಡೆಯೊಂದು ಕುಸಿದು ಬಿದ್ದ ಪರಿಣಾಮ 4 ಮಕ್ಕಳು ಸೇರಿ 10 ಮಂದಿ ಗಾಯಗೊಂಡಿರುವ ಘಟನೆ ಬಿಹಾರದ ಬಾಘದಲ್ಲಿ ಗುರುವಾರ ನಡೆದಿದೆ.

ಚುನಾವಣೆ ಹಿನ್ನೆಲೆಯಲ್ಲಿ ರ್ಯಾಲಿ ನಡೆಸಲು ಬಿಹಾರ ಬಾಬುಯ್ ಟೋಲಾ ಕ್ರೀಡಾಂಗಣಕ್ಕೆ ಅಮಿತ್ ಶಾ ಬಂದಿದ್ದರು. ಈ ವೇಳೆ ಹೆಲಿಕಾಪ್ಟರ್ ನಿಂದ ಇಳಿಯುತ್ತಿದ್ದ ಅಮಿತ್ ಶಾ ಅವರನ್ನು ನೋಡಲು ಮಕ್ಕಳು ಸೇರಿದಂತೆ ಹಲವು ಗೋಡೆ ಮೇಲೆ ಹತ್ತಿದ್ದರು. ಈ ವೇಳೆ ಗೋಡೆ ಕುಸಿದು ಬಿದ್ದಿದೆ ಎಂದು ವರಿಷ್ಠಾಧಿಕಾರಿ ಆನಂದ್ ಕುಮಾರ್ ಸಿಂಗ್ ಅವರು ಹೇಳಿದ್ದಾರೆ.

ಗೋಡೆ ತೀರಾ ಹಳೆಯ ಕಾಲದ್ದಾದ್ದರಿಂದ ಮಳೆ ಬಿದ್ದು ಬಿರುಕುಗಳು ಬಿಟ್ಟಿದ್ದವು. ಬಿರುಕು ಬಿದ್ದ ಗೋಡೆಯ ಮೇಲೆ ಜನರು ನಿಂತ ಕಾರಣ ಕುಸಿದು ಬಿದ್ದಿದೆ. ಗೋಡೆ ಧರೆಗುರುಳುತ್ತಿದ್ದಂತೆ ಸ್ಥಳದಲ್ಲೆ ಕೆಲವು ಗಂಟೆಗಳ ಕಾಲ ಉದ್ವಿಘ್ನ ವಾತಾವರಣ ನಿರ್ಮಾಣವಾಗಿತ್ತು. ಇದೀಗ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಅವರು ಹೇಳಿದ್ದಾರೆ.

ಪ್ರಸ್ತುತ  ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಬಾಘ ಪೊಲೀಸ್ ಠಾಣಾಧಿಕಾರಿ ಸತ್ಯೇಂದರ್ ರಾಮ್ ಹೇಳಿದ್ದಾರೆ.

ಘಟನೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅಮಿತ್ ಶಾ ಅವರು, ಗಾಯಾಳುಕುರಿತಂತೆ ಸಹಾನುಭೂತಿ ವ್ಯಕ್ತಪಡಿಸಿದ್ದು, ಶೀಘ್ರದಲ್ಲೇ ಗುಣಮುಖರಾಗುವಂತೆ ಕೋರಿದ್ದಾರೆ.

ಘಟನೆ ನಂತರ ಪರಿಸ್ಥಿತಿ ನಿಯಂತ್ರಣಕ್ಕೆ ಬರುತ್ತಿದ್ದಂತೆ ತಮ್ಮ ರ್ಯಾಲಿಯನ್ನು ಆರಂಭಿಸಿದ ಅಮಿತ್ ಶಾ ಅವರು, ಮಹಾಮೈತ್ರಿ ಕೂಟವನ್ನು ಸೋಲುವಂತೆ ಮಾಡಿ ರಾಜ್ಯದ ಅಭಿವೃದ್ಧಿಗಾಗಿ ಬಿಜೆಪಿ ಪಕ್ಷಕ್ಕೆ ಮತ ಹಾಕುವಂತೆ ಜನತೆಯ ಬಳಿ ಮನವಿ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com