ತುಂಡುಡುಗೆ ಹಾಕಿ ಬಂದ ಮಹಿಳೆಗೆ ನೋ ಎಂಟ್ರಿ ಎಂದ ಇಂಡಿಗೋ

ತುಂಡುಡುಗೆ ಹಾಕಿ ವಿಮಾನ ಹತ್ತಲು ಹೋದ ಮಹಿಳೆಯೊಬ್ಬಳನ್ನು ಇದೇ ಮೊದಲ ಬಾರಿಗೆ ಇಂಡಿಗೋ ಏರ್ ವೇಸ್ ಸಿಬ್ಬಂದಿಗಳು ತಡೆದು ಆಕೆಗೆ ಬಟ್ಟೆ ಬದಲಿಸಿ ವಿಮಾನ ಹತ್ತುವಂತೆ ತಿಳಿಸಿದ್ದಾರೆ...
(ಸಾಂದರ್ಭಿಕ  ಚಿತ್ರ)
(ಸಾಂದರ್ಭಿಕ ಚಿತ್ರ)

ನವದೆಹಲಿ: ತುಂಡುಡುಗೆ ಹಾಕಿ ವಿಮಾನ ಹತ್ತಲು ಹೋದ ಮಹಿಳೆಯೊಬ್ಬಳನ್ನು ಇದೇ ಮೊದಲ ಬಾರಿಗೆ ಇಂಡಿಗೋ ಏರ್ ವೇಸ್ ಸಿಬ್ಬಂದಿಗಳು ತಡೆದು ಆಕೆಗೆ ಬಟ್ಟೆ ಬದಲಿಸಿ ವಿಮಾನ ಹತ್ತುವಂತೆ ತಿಳಿಸಿದ್ದಾರೆ.

ಮಹಿಳೆಯೊಬ್ಬಳು ಮುಂಬೈನಿಂದ ನವದೆಹಲಿಗೆ ತೆರಳಲು ವಿಮಾನ ಹತ್ತಿದ್ದರು. ಆದರೆ, ಆಕೆಯ ಉಡುಗೆ ಅಶ್ಲೀಲವಾಗಿದೆ ಎಂದು ತಗಾದೆ ಎತ್ತಿದ ಇಂಡಿಗೋ ವಿಮಾನದ ಸಿಬ್ಬಂದಿಗಳು ಏಕಾಏಕಿ ಆಕೆಯನ್ನು ವಿಮಾನದಿಂದ ಇಳಿಸಿದ್ದಾರೆ. ನಂತರ ಸರಿಯಾಗಿ ಬಟ್ಟೆ ಹಾಕಿಕೊಂಡು ಬಂದರೆ ಮಾತ್ರ ಮತ್ತೊಂದು ವಿಮಾನದಲ್ಲಿ ಪ್ರಯಾಣಿಸಲು ಅನುವು ಮಾಡಿಕೊಡಲಾಗುವುದು ಎಂದು ಹೇಳಿದ್ದಾರೆ. ಸಿಬ್ಬಂದಿಗಳ ಈ ಮಾತಿನಿಂದ ಆಶ್ಚರ್ಯಚಕಿತ ಹಾಗೂ ಆತಂಕ ಗೊಂಡ ಮಹಿಳೆ ಅನಿವಾರ್ಯವಾಗಿ ಬಟ್ಟೆ ಬದಲಿಸಿ ಬಂದು ಮತ್ತೊಂದು ವಿಮಾನದಲ್ಲಿ ದೆಹಲಿಗೆ ಪ್ರಯಾಣಿಸಿದ್ದಾರೆ.

ಸಿಬ್ಬಂದಿಗಳ ಈ ಕ್ರಮವನ್ನು ಸಮರ್ಥಿಸಿಕೊಂಡಿರುವ ಇಂಡಿಗೋ ಸಂಸ್ಥೆಯು, ಸಂಸ್ಥೆಯ ಉದ್ಯೋಗಿಗಳಿಗೆ ಡ್ರೆಸ್ ಕೋಡ್ ಇದೆ, ಇದು ಉದ್ಯೋಗಿಗಳ ಕುಟುಂಬಕ್ಕೂ ಅನ್ವಯಿಸುತ್ತದೆ. ಸಿಬ್ಬಂದಿ ಹೊರಹಾಕಿದ ಮಹಿಳೆ ಹಿಂದೊಮ್ಮೆ ನಮ್ಮದೇ ಸಂಸ್ಥೆಯ ಉದ್ಯೋಗಿಯಾಗಿದ್ದಳು. ಅವರ ಸಹೋದರಿ ಈಗಲೂ ನಮ್ಮ ಸಂಸ್ಥೆಯ ಉದ್ಯೋಗಿಯಾಗಿದ್ದಾರೆ. ಡ್ರೆಸ್ ಕೋಟ್ ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ ಸಿಬ್ಬಂದಿಗಳು ಈ ಕ್ರಮ ಕೈಗೊಂಡಿದ್ದಾರೆ ಎಂದು ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com