1984ರ ಸಂತ್ರಸ್ತರಿಗೆ ನ್ಯಾಯ ದೊರಕಿದ್ದರೆ, ಗುಜರಾತ್ ಗಲಭೆ ನಡೆಯುತ್ತಿರಲಿಲ್ಲ: ಕೇಜ್ರಿವಾಲ್

ಒಂದು ವೇಳೆ 1984ರ ಸಂತ್ರಸ್ತರಿಗೆ ಅಂದು ನ್ಯಾಯ ದೊರಕಿದ್ದರೆ, 2002ರಲ್ಲಿ ನಡೆದ ಗುಜರಾತ್ ಗಲಭೆ ಹಾಗೂ ದಾದ್ರಿ ಪ್ರಕರಣಗಳಂತ ಘಟನೆಗಳು ಇಂದು ನಡೆಯುತ್ತಿರಲಿಲ್ಲ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಭಾನುವಾರ ಹೇಳಿದ್ದಾರೆ...
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (ಸಂಗ್ರಹ ಚಿತ್ರ)
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (ಸಂಗ್ರಹ ಚಿತ್ರ)

ನವದೆಹಲಿ: ಒಂದು ವೇಳೆ 1984ರ ಸಂತ್ರಸ್ತರಿಗೆ ಅಂದು ನ್ಯಾಯ ದೊರಕಿದ್ದರೆ, 2002ರಲ್ಲಿ ನಡೆದ ಗುಜರಾತ್ ಗಲಭೆ ಹಾಗೂ ದಾದ್ರಿ ಪ್ರಕರಣಗಳಂತ ಘಟನೆಗಳು ಇಂದು ನಡೆಯುತ್ತಿರಲಿಲ್ಲ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಭಾನುವಾರ ಹೇಳಿದ್ದಾರೆ.

1984 ಸಿಖ್ ಗಲಭೆಯಲ್ಲಿ ಬಲಿಯಾದ ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ಧನ ನೀಡಿ ಮಾತನಾಡಿರುವ ಅವರು, ಒಂದು ವೇಳೆ 1984ರಲ್ಲಿ ನಡೆದ ಗಲಭೆಯಲ್ಲಿ ಬಲಿಯಾದವರಿಗೆ ಅಂದೇ ನ್ಯಾಯ ಸಿಕ್ಕಿದ್ದರೆ, ಗುಜರಾತ್ ಗಲಭೆ ಹಾಗೂ ಉತ್ತರ ಪ್ರದೇಶದಲ್ಲಿ ನಡೆದ ದಾದ್ರಿ ಪ್ರಕರಣಗಳು ಮತ್ತೆ ನಡೆಯುತ್ತಿರಲಿಲ್ಲ. ಗಲಭೆಗಳ ಮೂಲಕ ರಾಜಕೀಯದಲ್ಲಿ ತನ್ನ ಅಂಕಗಳನ್ನು ಹೆಚ್ಚಿಸಿಕೊಳ್ಳಲು ಬಿಜೆಪಿ ಪ್ರಯತ್ನ ಮಾಡುತ್ತಿದೆ ಎಂದು ಹೇಳಿದ್ದಾರೆ.

ನಾನು ಅಧಿಕಾರಕ್ಕೆ ಬರುವುದಕ್ಕೂ ಒಂದು ದಿನದ ಹಿಂದಷ್ಟೇ ಕೇಂದ್ರ ಸರ್ಕಾರವು 1984ರ ಗಲಭೆ ಪ್ರಕರಣ ಸಂಬಂಧ ತನಿಖೆಗಾಗಿ ವಿಶೇಷ ತಂಡವೊಂದನ್ನು ರಚನೆ ಮಾಡಿತ್ತು. ನಾನು ಅಧಿಕಾರಕ್ಕೆ ಬಂದ ನಂತರ ಎಲ್ಲಿ ಪ್ರಾಮಾಣಿಕ ಅಧಿಕಾರಗಳನ್ನು ನೇಮಿಸುತ್ತೇನೋ ಎಂದು ಕೇಂದ್ರ ಸರ್ಕಾರ ಭಯ ಪಟ್ಟಿತ್ತು ಎಂದು ಹೇಳಿದ್ದಾರೆ.

ಗಲಭೆ ಪ್ರಕರಣದಲ್ಲಿ ಸಂತ್ರಸ್ತರಿಗೆ ಪರಿಹಾರ ಧನ ನೀಡುತ್ತಿರುವುದು ನಿಜಕ್ಕೂ ಒಳ್ಳೆಯ ವಿಚಾರ ಆದರೆ, ಗಲಭೆಗೆ ಕಾರಣರಾದ ಆರೋಪಿಗಳು ಸ್ವತಂತ್ರವಾಗಿ ಓಡಾಡುತ್ತಿರುವುದನ್ನು ನೋಡುತ್ತಿದ್ದರೆ ನನ್ನ ರಕ್ತ ಕುದಿಯುತ್ತದೆ ಎಂದು ಸಂತ್ರಸ್ತ ಕುಟುಂಬದ ಸದಸ್ಯರೊಬ್ಬರು ಹೇಳಿದ್ದಾರೆ.

ಘಟನೆ ನಡೆಯುತ್ತಿದ್ದಂತೆ ಸರ್ಕಾರ 50 ಲಕ್ಷ ಪರಿಹಾರವನ್ನು ಘೋಷಿಸುತ್ತದೆ. ಆದರೆ 31 ವರ್ಷದ ಹಿಂದೆ ನಡೆದ ದುರಂತಕ್ಕೆ ಈ ವರೆಗೂ ನ್ಯಾಯ ಸಿಕ್ಕಿಲ್ಲ. ನಮಗೆ ರು.5 ಲಕ್ಷ ಪರಿಹಾರ ಸಿಗುತ್ತಿದೆ ಎಂದು ಮತ್ತೊಬ್ಬ ಸಂತ್ರಸ್ತ ಕುಟುಂಬದ ಸದಸ್ಯರೊಬ್ಬರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com