4 ಮಹಾನಗರಗಳಲ್ಲಿ ಕಾಗದರಹಿತ ಕಾಯ್ದಿರಿಸದ ಟಿಕೆಟ್ ವ್ಯವಸ್ಥೆ ಜಾರಿ

ಟಿಕೆಟ್ ಕೌಂಟರ್ ಗಳಲ್ಲಿ ಗಂಟೆಗಟ್ಟಲೆ ನಿಂತುಕೊಳ್ಳುವುದನ್ನು ತಪ್ಪಿಸಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಲು ದೇಶದ ನಾಲ್ಕು...
ದೆಹಲಿ-ಪಲ್ವಾಲ್ ಉಪನಗರದಲ್ಲಿ ಮಂಗಳವಾರ ಮೊಬೈಲ್ ನಲ್ಲಿ ಕಾಗದರಹಿತ ಕಾಯ್ದಿರಿಸದ ಟಿಕೆಟ್ ವ್ಯವಸ್ಥೆಗೆ ಚಾಲನೆ ನೀಡಿದ ರೈಲ್ವೆ ಖಾತೆ ಸಚಿವ ಸುರೇಶ್ ಪ್ರಭು
ದೆಹಲಿ-ಪಲ್ವಾಲ್ ಉಪನಗರದಲ್ಲಿ ಮಂಗಳವಾರ ಮೊಬೈಲ್ ನಲ್ಲಿ ಕಾಗದರಹಿತ ಕಾಯ್ದಿರಿಸದ ಟಿಕೆಟ್ ವ್ಯವಸ್ಥೆಗೆ ಚಾಲನೆ ನೀಡಿದ ರೈಲ್ವೆ ಖಾತೆ ಸಚಿವ ಸುರೇಶ್ ಪ್ರಭು

ನವದೆಹಲಿ: ಟಿಕೆಟ್ ಕೌಂಟರ್ ಗಳಲ್ಲಿ ಗಂಟೆಗಟ್ಟಲೆ ನಿಂತುಕೊಳ್ಳುವುದನ್ನು ತಪ್ಪಿಸಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಲು ದೇಶದ ನಾಲ್ಕು ಮಹಾನಗರಗಳಲ್ಲಿ ಭಾರತೀಯ ರೈಲ್ವೆ ಇಲಾಖೆ ತಿಂಗಳ ಕಾಗದರಹಿತ ಸೀಸನ್ ಟಿಕೆಟ್ ಮತ್ತು ಪ್ಲಾಟ್ ಫಾರಂ ಟಿಕೆಟ್ ನ್ನು ಆರಂಭಿಸಲು ಮೊಬೈಲ್ ಅಪ್ಲಿಕೇಶನ್ ಒಂದನ್ನು ಪರಿಚಯಿಸುತ್ತಿದೆ.

ದೆಹಲಿ-ಪಲ್ವಾಲ್ ಉಪನಗರದಲ್ಲಿ ನಿನ್ನೆ ಕಾಗದರಹಿತ ಕಾಯ್ದಿರಿಸದ ಟಿಕೆಟ್ ವ್ಯವಸ್ಥೆಗೆ ಚಾಲನೆ ನೀಡಿ ಮಾತನಾಡಿದ ರೈಲ್ವೆ ಖಾತೆ ಸಚಿವ ಸುರೇಶ್ ಪ್ರಭು, ಈ ವ್ಯವಸ್ಥೆ ಆರಂಭದಲ್ಲಿ ಮುಂಬೈ, ದೆಹಲಿ, ಚೆನ್ನೈ ಮತ್ತು ಕೋಲ್ಕತ್ತಾಗಳಲ್ಲಿ ಇನ್ನು ಕೆಲವು ದಿನಗಳಲ್ಲಿ ಜಾರಿಗೆ ಬರಲಿದೆ ಎಂದು ಹೇಳಿದರು. ಅವರು ಈ ಸಂದರ್ಭದಲ್ಲಿ ದೆಹಲಿ ರೈಲ್ವೆ ನಿಲ್ದಾಣದಲ್ಲಿ ಕ್ಯಾಶ್-ಸ್ಮಾರ್ಟ್ ಕಾರ್ಡು ನಿರ್ವಹಣಾ ಟಿಕೆಟ್ ಮಾರಾಟ ಯಂತ್ರಕ್ಕೆ ಮತ್ತು ಸರಕು ಕಾರ್ಯಾಚರಣೆ ಉಸ್ತುವಾರಿ ಪರಿಚಾಲನೆಗೂ  ಚಾಲನೆ ನೀಡಿದರು.

ದಕ್ಷಿಣ ರೈಲ್ವೆಯ ಚೆನ್ನೈ-ಎಗ್ಮೋರ್ ಮತ್ತು ತಂಬರಂ ಉಪನಗರ ವಲಯಗಳಿಗೆ ಏಪ್ರಿಲ್ ನಲ್ಲಿ ಮತ್ತು ಪಶ್ಮಿಮ ರೈಲ್ವೆಯ ಚರ್ಚ್ ಗೇಟ್-ದಹನು ರಸ್ತೆ ಉಪನಗರ ವಲಯಗಳಲ್ಲಿ ಜುಲೈಯಲ್ಲಿ ಕಾಗದರಹಿತ ಟಿಕೆಟ್  ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ.

ಮುಂಬೈ ನಗರದಲ್ಲಿ ಪ್ರತಿ ತಿಂಗಳು ಸುಮಾರು 75 ಲಕ್ಷ ಜನ ಪ್ರಯಾಣಿಕರು ತಿಂಗಳ ಚಿಕೆಟ್ ಕೊಂಡುಕೊಳ್ಳುತ್ತಾರೆ. ಇವರಿಗೆ ಈ ಮೊಬೈಲ್ ಆಪ್ಲಿಕೇಶನ್ ವ್ಯವಸ್ಥೆ ಉತ್ತಮವಾಗಲಿದೆ ಎಂದರು.

ಸರ್ಕಾರದ ಮೇಕ್ ಇನ್ ಇಂಡಿಯಾ ಯೋಜನೆಯಡಿ ಇದನ್ನು ಜಾರಿಗೆ ತರಲಾಗುತ್ತಿದೆ ಎಂದು ಸುರೇಶ್ ಪ್ರಭು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com