ಪಾಕ್ ಬುಡಕಟು ನ್ಯಾಯಾಲಯ ವಿಧಿಸಿದ ದಂಡ ಪಾವತಿಸಲು ಮಕ್ಕಳನ್ನೇ ಮಾರಾಟಕ್ಕಿಟ್ಟ!

ಪಾಕಿಸ್ತಾನದ ಬುಡಕಟ್ಟು ನ್ಯಾಯಾಲಯ ವಿಧಿಸಿರುವ ದಂಡ ಪಾವತಿ ಮಾಡಲು ವ್ಯಕ್ತಿಯೊಬ್ಬ ತನ್ನ ನಾಲ್ಕು ಮಕ್ಕಳನ್ನು 1 .6 ಮಿಲಿಯನ್ ಬೆಲೆಗೆ ಮಾರಾಟಕ್ಕಿಟ್ಟಿದ್ದಾನೆ.
ಪಾಕ್  ಬುಡಕಟು ನ್ಯಾಯಾಲಯ ವಿಧಿಸಿದ ದಂಡ ಪಾವತಿಸಲು ಮಕ್ಕಳ ಮಾರಾಟ
ಪಾಕ್ ಬುಡಕಟು ನ್ಯಾಯಾಲಯ ವಿಧಿಸಿದ ದಂಡ ಪಾವತಿಸಲು ಮಕ್ಕಳ ಮಾರಾಟ

ಇಸ್ಲಾಮಾಬಾದ್: ಪಾಕಿಸ್ತಾನದ ಬುಡಕಟ್ಟು ನ್ಯಾಯಾಲಯ ವಿಧಿಸಿರುವ ದಂಡ ಪಾವತಿ ಮಾಡಲು ವ್ಯಕ್ತಿಯೊಬ್ಬ ತನ್ನ ನಾಲ್ಕು ಮಕ್ಕಳನ್ನು 1 .6 ಮಿಲಿಯನ್ ಬೆಲೆಗೆ ಮಾರಾಟಕ್ಕಿಟ್ಟಿದ್ದಾನೆ.

ಗುಲಾಮ್ ರಸೂಲ್ ಖತೋಹರ್ ಎಂಬಾತ, ಮೂರು ಹಾಗೂ 8 ವರ್ಷದ ನಡುವಿನ ತನ್ನ ನಾಲ್ಕು ಜನ ಮಕ್ಕಳನ್ನು ಪಾಕ್ ನಲ್ಲಿರುವ ಜಾಕೋಬಾಬಾದ್ ನಲ್ಲಿರುವ ಪ್ರೆಸ್ ಕ್ಲಬ್ ನಲ್ಲಿ ಮಾರಾಟಕ್ಕಿಟ್ಟಿದ್ದಾನೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.

ಖತೋಹರ್ ಮಗ ಖೋಸೊ ಬುಡಕಟ್ಟಿಗೆ ಸೇರಿದ ಮಹಿಳೆಯೊಂದಿಗೆ 2 ವರ್ಷದ ಹಿಂದೆ ಅಕ್ರಮ ಸಂಬಂಧ ಹೊಂದಿದ್ದ ಆರೋಪ ಎದುರಿಸುತ್ತಿದ್ದಾನೆ. ಖೋಸೊ ಬುಡಕಟ್ಟು ಕುಟುಂಬ ಈ ವಿಷಯವನ್ನು ಬುಡಕಟ್ಟು ನ್ಯಾಯಾಲಯಕ್ಕೆ ಕೊಂಡೊಯ್ದಿದ್ದಾರೆ. ಅಪರಾಧ ಸಾಬೀತಾಗಿರುವುದರಿಂದ ಖತೋಹರ್ ಕುಟುಂಬ ಖೋಸೊ ಬುಡಕಟ್ಟು ಕುಟುಂಬಕ್ಕೆ 1 .6 ಮಿಲಿಯನ್ ದಂಡ ಪಾವತಿಸಬೇಕು ಎಂದು ಆದೇಶ ನೀಡಿದೆ.

1 .6  ಮಿಲಿಯನ್ ಹಣ ಖತೋಹರ್ ಬಳಿ ಇಲ್ಲವಾದ ಕಾರಣ ದಂಡ ಪಾವತಿಸಲು ತನ್ನ ಇಬ್ಬರು ಹೆಣ್ಣು ಮಕ್ಕಳು ಹಾಗೂ ಇಬ್ಬರು ಮೊಮ್ಮಕ್ಕಳನ್ನು ಮಾರಾಟಕ್ಕಿಟ್ಟಿದ್ದಾನೆ ಎಂದು ಡಾನ್ ವರದಿ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com