ಇಸಿಸ್ ಸೇರಿದ ಮೊದಲ ಭಾರತೀಯ ಮಹಿಳೆ ಹೈದ್ರಾಬಾದ್ ನಲ್ಲಿ ಬಂಧನ

ಐಎಸ್ ಐಎಸ್ ಉಗ್ರ ಸಂಘಟನೆಗೆ ಭಾರತೀಯ ಯುವಕರನ್ನು ಸೇರ್ಪಡೆ ಮಾಡುತಿದ್ದ ಮೊದಲ ಮಹಿಳೆಯನ್ನು ಹೈದ್ರಾಬಾದ್ ನಲ್ಲಿ...
ಅಫ್ಶಾ ಜಬೀನಾ ಅಲಿಯಾಸ್ ನಿಕ್ಕಿ ಜೋಸೆಫ್ (ಚಿತ್ರ ಕೃಪೆ: ಟ್ವಿಟರ್)
ಅಫ್ಶಾ ಜಬೀನಾ ಅಲಿಯಾಸ್ ನಿಕ್ಕಿ ಜೋಸೆಫ್ (ಚಿತ್ರ ಕೃಪೆ: ಟ್ವಿಟರ್)

ಹೈದ್ರಾಬಾದ್: ಇಸಿಸ್ ಉಗ್ರ ಸಂಘಟನೆಗೆ ಭಾರತೀಯ ಯುವಕರನ್ನು ಸೇರ್ಪಡೆ ಮಾಡುತಿದ್ದ ಮೊದಲ ಮಹಿಳೆಯನ್ನು ಹೈದ್ರಾಬಾದ್ ನಲ್ಲಿ ಶುಕ್ರವಾರ ಬಂಧಿಸಲಾಗಿದೆ.

37 ವರ್ಷದ ಅಫ್ಶಾ ಜಬೀನಾ ಅಲಿಯಾಸ್ ನಿಕ್ಕಿ ಜೋಸೆಫ್ ಬಂಧಿತ ಆರೋಪಿಯಾಗಿದ್ದಾಳೆ. ಸಾಮಾಜಿಕ ಜಾಲತಾಣದ ಮುಖಾಂತರ ಕೆಲಸದ ಹುಡುಕಾಟದಲ್ಲಿರುವ ಯುವಕರನ್ನು ಹುಡುಕಿ, ತಾನು ಬ್ರಿಟಿಷ್ ಪ್ರಜೆ ಎಂದು ಹೇಳಿ ಪರಿಚಯ ಮಾಡಿಕೊಳ್ಳುತ್ತಿದ್ದಳು.

ಜಬೀನ್ ಮತ್ತು ಅವಳ ಪತಿ, ಮಕ್ಕಳನ್ನು ಗಡಿಪಾರು ಮಾಡಲಾಗಿತ್ತು. ಶುಕ್ರವಾರ ಹೈದ್ರಾಬಾದ್ ವಿಮಾನ ನಿಲ್ಧಾಣದಕ್ಕೆ ಬಂದಿಳಿದ ಜಬೀನಾಳನ್ನು ತ್ರೀವ ವಿಚಾರಣೆ ನಡೆಸಿದ ನಂತರ ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ದುಬೈನಿಂದ ಜಬೀನಾ ಹೈದ್ರಾಬಾದ್ ನಲ್ಲಿರುವ ಆಜಿಐ ವಿಮಾನನಿಲ್ಧಾಣಕ್ಕೆ ಆಗಮಿಸಿದ್ದಾಳೆ. ಆಕೆಯನ್ನು ವಶಕ್ಕೆ ಪಡೆಯಲಾಗಿದ್ದು, ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ಹೆಚ್ಚಿನ ವಿಚಾರಣೆಗಾಗಿ ಆಕೆಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಐಎಸ್​ಐಎಸ್ ಉಗ್ರ ಸಂಘಟನೆ ಸೇರಲು ಬಯಸಿದ್ದ ಹೈದರಾಬಾದ್​ಮೂಲದ ಯುವಕ ಸಲ್ಮಾನ್ ಮೊಹಿನುದ್ದಿನ್ ಪ್ರಕರಣದಲ್ಲಿ ಜಬೀನ್ ಪ್ರಮುಖ ಆರೋಪಿಯಾಗಿದ್ದಾಳೆ. ಹೈದರಾಬಾದ್​ನಿಂದ ದುಬೈಗೆ ತೆರಳಿ ಜಬೀನಾಳನ್ನು ಭೇಟಿಯಾಗುವುದು ಸಲ್ಮಾನ್​ನ ಉದ್ದೇಶವಾಗಿತ್ತು. ಭೇಟಿಯ ಬಳಿಕ ಜಬೀನಾ ಹಾಗೂ ಸಲ್ಮಾನ್ ಟರ್ಕಿಗೆ ತೆರಳಿ ಆಲ್ಲಿಂದ ಸಿರಿಯಾದ ಗಡಿ ದಾಟುವ ಗುರಿ ಹೊಂದಿದ್ದರು ಎಂದು ಪೊಲೀಸ್ ಮೂಲಗಳ ತಿಳಿಸಿವೆ.

ವಿಚಾರಣೆ ವೇಳೆ ಸಲ್ಮಾನ್ ಅಫ್ಶಾ ಜಬೀನ ಬಗ್ಗೆ ಬಾಯ್ಬಿಟ್ಟಿದ್ದ. ತದ ನಂತರ ಭಾರತೀಯ ಗುಪ್ತಚರ ಇಲಾಖೆ ಸಾಮಾಜಿಕ ಜಾಲತಾಣದಲ್ಲಿ ತನಿಖೆ ಆರಂಭಿಸಿತು.ಶುಕ್ರವಾರ ಆಕೆ ಹೈದ್ರಾಬಾದ್ ಬರುತ್ತಿದ್ದ ವಿಷಯ ತಿಳಿದು ಆಕೆಯನ್ನು ಬಂಧಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com