ಆನೆ ದಾಳಿಯಿಂದ ಕೂದಲೆಳೆ ಅಂತರದಲ್ಲಿ ಪಾರಾದ ಬೈಕ್ ಸವಾರರು..!

ತಮ್ಮ ಪಾಡಿಗೆ ರಸ್ತೆಯಲ್ಲಿ ಚಲಿಸುತ್ತಿದ್ದ ಬೈಕ್ ಸವಾರರ ಮೇಲೆ ಸಲಗವೊಂದು ದಿಢೀರನೆ ದಾಳಿ ನಡೆಸಿದ್ದು, ಕೂದಲೆಳೆ ಅಂತರದಲ್ಲಿ ಬೈಕ್ ಸವಾರರು ಪಾರಾದ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ...
ಆನೆ ದಾಳಿಗೊಳಗಾದ ಬೈಕ್ ಸವಾರರು
ಆನೆ ದಾಳಿಗೊಳಗಾದ ಬೈಕ್ ಸವಾರರು

ಕೋಲ್ಕತಾ: ತಮ್ಮ ಪಾಡಿಗೆ ರಸ್ತೆಯಲ್ಲಿ ಚಲಿಸುತ್ತಿದ್ದ ಬೈಕ್ ಸವಾರರ ಮೇಲೆ ಸಲಗವೊಂದು ದಿಢೀರನೆ ದಾಳಿ ನಡೆಸಿದ್ದು, ಕೂದಲೆಳೆ ಅಂತರದಲ್ಲಿ ಬೈಕ್ ಸವಾರರು ಪಾರಾದ ಘಟನೆ ಪಶ್ಚಿಮ  ಬಂಗಾಳದಲ್ಲಿ ನಡೆದಿದೆ.

ಪಶ್ಚಿಮ ಬಂಗಾಳದ ಜಲಪೈಗುರಿ ಜಿಲ್ಲೆಯಲ್ಲಿರುವ ಗೊರುಮರಾ ಸಂರಕ್ಷಿತಾರಣ್ಯ ಪ್ರದೇಶದ ರಾಷ್ಟ್ರೀಯ ಹೆದ್ದಾರಿ 31ರಲ್ಲಿ ಭಾನುವಾರ ಸಂಜೆ ಸುಮಾರು 4 ಗಂಟೆಯ ಹೊತ್ತಿನಲ್ಲಿ ಇಬ್ಬರು ಬೈಕ್  ಸವಾರರು ಚಲಿಸುತ್ತಿದ್ದರು. ಈ ವೇಳೆ ರಸ್ತೆಯಲ್ಲಿ ಸಲಗವೊಂದು ನಿಂತಿತ್ತು. ಸೌಮ್ಯವಾಗಿ ನಿಂತಿದ್ದ ಆನೆ ಏನೂ ಮಾಡುವುದಿಲ್ಲ ಎಂದು ಭಾವಿಸಿದ ಬೈಕ್ ಸವಾರರು ಚಲಿಸಲು ಮುಂದಾದರು.  ಇದರಿಂದ ಗಾಬರಿಗೊಳಗಾದ ಆನೆ ದಿಢೀರನೆ ಅವರತ್ತ ನುಗ್ಗಿತು. ಅನೆ ಬರುತ್ತಿದ್ದಂತೆಯೇ ಭಯಭೀತರಾದ ಬೈಕ್ ಸವಾರರು ಬೈಕ್ ಅನ್ನು ಅಲ್ಲಿಯೇ ಬಿಟ್ಟು ಓಡಲು ಮುಂದಾದರು.

ಬೈಕ್ ನಲ್ಲಿದ್ದ ಸವಾರ ಕೂಡಲೇ ಸಮೀಪದ ಪೊದೆಯೊಳಗೆ ಓಡಿ ಹೋದರೆ ಬೈಕ್ ನ ಹಿಂಬದಿಯಲ್ಲಿದ್ದವನು ಇಳಿಯುವಷ್ಟರಲ್ಲಿಯೇ ಆನೆ ಸಮೀಪಕ್ಕೆ ಧಾವಿಸಿತು. ಇನ್ನೇನು ಆನೆ ಆತನ ಮೇಲೆ  ದಾಳಿ ಮಾಡುತ್ತದೆ ಎನ್ನುವಷ್ಟರಲ್ಲಿಯೇ ಅದೃಷ್ಟವಶಾತ್ ಆತ ತಪ್ಪಿಸಿಕೊಂಡಿ ಹಿಂದಕ್ಕೆ ಓಡಿದ. ಬಳಿಕ ಅನೆ ಕೆಲ ಹೊತ್ತು ಬೈಕ್ ಬಳಿಯಲ್ಲಿಯೇ ನಿಂತಿತು. ವಿಷಯ ತಿಳಿದ ಅರಣ್ಯಾಧಿಕಾರಿಗಳು  ಸ್ಥಳಕ್ಕೆ ದೌಡಾಯಿಸಿ, ಪಟಾಕಿ ಸಿಡಿಸುವ ಮೂಲಕ ಆನೆಯನ್ನು ಕಾಡಿನೊಳಗೆ ಓಡಿಸಿದರು.

ಆನೆಯ ಕಾಲ್ತುಳಿತಕ್ಕೊಳಗಾದಿ ಬೈಕ್ ಜಖಂಗೊಂಡಿದೆ ಎಂದು ತಿಳಿದುಬಂದಿದೆ. ಇವಿಷ್ಟೂ ದೃಶ್ಯಾವಳಿಯನ್ನು ಅದೇ ರಸ್ತೆಯಲ್ಲಿ ಸಾಗುತ್ತಿದ್ದ ಪ್ರಯಾಣಿಕರೊಬ್ಬರು ತಮ್ಮ ಮೊಬೈಲ್ ನಲ್ಲಿ  ಚಿತ್ರೀಕರಿಸಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com