ನಾನು ಇಸ್ಲಾಂ ಪಂಡಿತನಲ್ಲ, ಸದುದ್ದೇಶದಿಂದ ಚಿತ್ರಕ್ಕೆ ಸಂಗೀತ ನೀಡಿದ್ದೇನೆ: ಎ.ಆರ್ ರೆಹಮಾನ್

ಪ್ರವಾದಿ ಮುಹಮ್ಮದ್‌ ಕುರಿತ ಚಿತ್ರಕ್ಕೆ ಸಂಗೀತ ನೀಡಿರುವ ಸಂಬಂಧ ತಮ್ಮ ವಿರುದ್ಧ ಹೊರಡಿಸಿರುವ ಫತ್ವಾ ವಿರುದ್ಧ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್‌ ...
ಎ,ಆರ್ ರೆಹಮಾನ್
ಎ,ಆರ್ ರೆಹಮಾನ್
Updated on

ಚೆನ್ನೈ: ಪ್ರವಾದಿ ಮುಹಮ್ಮದ್‌ ಕುರಿತ ಚಿತ್ರಕ್ಕೆ ಸಂಗೀತ ನೀಡಿರುವ ಸಂಬಂಧ ತಮ್ಮ ವಿರುದ್ಧ ಹೊರಡಿಸಿರುವ ಫತ್ವಾ ವಿರುದ್ಧ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್‌ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಸದುದ್ದೇಶದಿಂದ ಇರಾನಿನ ಖ್ಯಾತ ಚಿತ್ರ ನಿರ್ಮಾಕ ಮಜಿದ್‌ ಮಜಿದಿ ಅವರ ಚಿತ್ರಕ್ಕೆಸಂಗೀತ ನೀಡಿದ್ದೇನೆ ಹೊರತು ದ್ರೋಹ ಬಗೆಯುವ ಉದ್ದೇಶದಿಂದ ಅಲ್ಲ ಎಂದು ರೆಹಮಾನ್‌ ಸ್ಪಷ್ಟಪಡಿಸಿದ್ದಾರೆ.

ಮಹಮದ್ ಮೆಸೆಂಜರ್‌ ಆಫ್‌ ಗಾಡ್‌' . ಚಿತ್ರವನ್ನು ನಾನು ನಿರ್ದೇಶಿಸಿಲ್ಲ. ಅದರ ನಿರ್ಮಾಪಕ ಕೂಡ ನಾನಲ್ಲ. ಸಂಗೀತ ನೀಡಿದ್ದೇನೆ ಅಷ್ಟೆ. ಆಧ್ಯಾತ್ಮಕ ಅನುಭವಗಳು ನನ್ನ ಖಾಸಗಿ ವಿಷಯ, ಅದನ್ನು ಎಲ್ಲರೊಂದಿಗೆ ಹಂಚಿಕೊಳ್ಳಲು ಬಯಸುವುದಿಲ್ಲ,' ಎಂದು  ಎ.ಆರ್ ರೆಹಮಾನ್ ಫೇಸ್‌ಬುಕ್‌ ನಲ್ಲಿ ಸ್ಟೇಟಸ್ ಹಾಕಿಕೊಂಡಿದ್ದಾರೆ.

'ನಾನು ಇಸ್ಲಾಂ ಪಂಡಿತನಲ್ಲ. ಸ್ವಲ್ಪ ಮಟ್ಟಿನ ಸಂಪ್ರದಾಯ ಹಾಗೂ ವೈಚಾರಿಕತೆ ಎರಡನ್ನೂ ಜೀವನದಲ್ಲಿ ಅಳವಡಿಸಿಕೊಂಡಿದ್ದೇನೆ. ಪೂರ್ವ ಹಾಗೂ ಪಶ್ಚಿಮದ ಸಂಸ್ಕೃತಿಯಲ್ಲಿ ಬದುಕುತ್ತಿದ್ದೇನೆ. ಪೂರ್ವಾಗ್ರಹ ಇಲ್ಲದೇ ಎಲ್ಲರನ್ನೂ ಪ್ರೀತಿಸುತ್ತೇನೆ,' ಎಂದು ರೆಹಮಾನ್‌ ಹೇಳಿದ್ದಾರೆ.

'ಮುಹಮ್ಮದ್‌ ಮೆಸೆಂಜರ್‌ ಆಫ್‌ ಗಾಡ್‌' ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿರುವ ರೆಹಮಾನ್‌ ವಿರುದ್ಧ ಮುಂಬಯಿ ಮೂಲದ ಸುನ್ನಿ ಮುಸ್ಲಿಂ ಸಂಘಟನೆ ರಜಾ ಅಕಾಡೆಮಿ ಕಳೆದ ವಾರ ಫತ್ವಾ ಹೊರಡಿಸಿತ್ತು. ಮಾನವ ಕುಲವನ್ನು ಒಗ್ಗೂಡಿಸುವ, ತಪ್ಪು ಅಭಿಪ್ರಾಯಗಳನ್ನು ನಿವಾರಿಸುವ, ಬಡಜನರ ಏಳಿಗೆಗಾಗಿ ಜನ ಸೇವೆ ಮಾಡುವ, ದಯೆ ,ಕರುಣೆ ಜತೆಗೆ ದೇವರ ಹೆಸರಿನಲ್ಲಿ ಅಮಾಯಕರನ್ನು ಕೊಲ್ಲುವುದು ಸರಿ ಅಲ್ಲ ಎಂಬ ಸಂದೇಶ ಇರುವ ಚಿತ್ರಕ್ಕೆ ಸಂಗೀತ ನೀಡಿದ್ದೇನೆ ಎಂದು ತಮ್ಮನ್ನು ಸಮರ್ಥಿಸಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com