ಹಿಂದೂ ಗ್ರಂಥಕ್ಕೆ ಕುರಾನ್, ಬೈಬಲ್ ಸಮವಲ್ಲ

ಕುರಾನ್ ಆಗಲೀ, ಬೈಬಲ್ ಆಗಲೀ ಹಿಂದೂ ಧರ್ಮ ಗ್ರಂಥಗಳಿಗೆ ಸಮನಾದುದಲ್ಲ. ಹಾಗಾಗಿ ಶಾಲೆಗಳಲ್ಲಿ ರಾಮಾಯಣ, ಮಹಾಭಾರತ ಮತ್ತು ಭಗವದ್ಗೀತೆಯನ್ನು...
ಮಹೇಶ್ ಶರ್ಮಾ
ಮಹೇಶ್ ಶರ್ಮಾ

ನವದೆಹಲಿ: ಕುರಾನ್ ಆಗಲೀ, ಬೈಬಲ್ ಆಗಲೀ ಹಿಂದೂ ಧರ್ಮ ಗ್ರಂಥಗಳಿಗೆ ಸಮನಾದುದಲ್ಲ. ಹಾಗಾಗಿ ಶಾಲೆಗಳಲ್ಲಿ ರಾಮಾಯಣ, ಮಹಾಭಾರತ ಮತ್ತು ಭಗವದ್ಗೀತೆಯನ್ನು ಕಡ್ಡಾಯಗೊಳಿಸಬೇಕು. ಇಂತಹುದೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದು ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಖಾತೆ ಸಹಾಯಕ ಸಚಿವ, ಬಿಜೆಪಿ ನಾಯಕ ಮಹೇಶ್ ಶರ್ಮಾ. ಸೋಮವಾರ ಇಂಡಿಯಾ ಟುಡೇಗೆ ನೀಡಿದ ಸಂದರ್ಶನದಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.

``ನಾನು ಕುರಾನ್ ಮತ್ತು ಬೈಬಲ್ ಅನ್ನು ಗೌರವಿಸುತ್ತೇನೆ. ಆದರೆ, ಅವುಗಳು ಹಿಂದೂ ಗ್ರಂಥಗಳಾದ ರಾಮಾಯಣ, ಮಹಾ ಭಾರತ, ಗೀತೆಗೆ ಸಮವಾಗಲಾರದು. ಭಾರತದ ಸಂಸ್ಕೃತಿ ಸಚಿವನಾಗಿ ನಾನು ಶಾಲಾ ಪಠ್ಯದಲ್ಲಿ ಹಿಂದೂ ಗ್ರಂಥಗಳನ್ನು ಕಡ್ಡಾಯಗೊಳಿಸುವಂತೆ ಕೇಳಿಕೊಳ್ಳುತ್ತೇನೆ. ಈ ವಿಷಯದಲ್ಲಿ ಮುಂದುವರಿಯುವ ಸಲುವಾಗಿ ಎಚ್ ಆರ್‍ಡಿ ಸಚಿವೆ ಸ್ಮೃತಿ ಇರಾನಿ ಅವರೊಂದಿಗೆ ನಿರಂತರ ಮಾತುಕತೆ ನಡೆಸುತ್ತಿದ್ದೇನೆ'' ಎಂದೂ ಶರ್ಮಾ ಹೇಳಿದ್ದಾರೆ.

ನವರಾತ್ರಿಗೂ ಮಾಂಸ ನಿಷೇಧ: ಜೈನರ ಪರ್ಯುಶಾನ್ ಮಾತ್ರವಲ್ಲ, ನವರಾತ್ರಿಯ ಸಂದರ್ಭದಲ್ಲೂ 9 ದಿನಗಳ ಕಾಲ ಮಾಂಸ ಮಾರಾಟಕ್ಕೆ ನಿಷೇಧ ಹೇರಬೇಕು ಎಂದೂ ಹೇಳಿದ್ದಾರೆ ಶರ್ಮಾ. ಬಿಜೆಪಿ ಆಡಳಿತವಿರುವ ಅನೇಕ ರಾಜ್ಯಗಳು ಮಾಂಸ ನಿಷೇಧದ ಬಿಸಿ ಅನುಭವಿಸುತ್ತಿರುವ ನಡುವೆಯೇ ಅವರು ಈ ಹೇಳಿಕೆ ನೀಡಿದ್ದಾರೆ.

ಜತೆಗೆ, ಕೆಲವರು ಮಾಡುವ ತ್ಯಾಗ ದಿಂದ ಒಂದು ಸಮುದಾಯದವರ ಧಾರ್ಮಿಕ ಭಾವನೆಗಳನ್ನು ಗೌರವಿಸಿ ದಂತಾಗುವುದಾದರೆ, ಮಾಂಸ ನಿಷೇಧ ತಪ್ಪೇನಲ್ಲ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com