
ಬಾಲಸೋರ್: ಕಳೆದ ಜೂನ್ ನಲ್ಲಿ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರು ಬದುಕಿದ್ದಾಗಲೇ ಜಾರ್ಖಂಡ್ ಶಿಕ್ಷಣ ಸಚಿವೆ ನೀರಾ ಯಾದವ್ ಹೂಗುಚ್ಚ ಅರ್ಪಿಸಿ ಶ್ರದ್ದಾಜಂಲಿ ಸಲ್ಲಿಸಿದ್ದರು. ಇಂಥಹುದ್ದೆ ಮತ್ತೊಂದು ಘಟನೆ ಒಡಿಸ್ಸಾದಲ್ಲಿ ನಡೆದಿದೆ.
ಭಾರತ ರತ್ನ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನಿಧನ ಹೊಂದಿದರೆಂಬ ಸುಳ್ಳು ಮಾಹಿತಿಯನ್ನು ನಂಬಿ ಶಾಲೆಯಲ್ಲಿ ಸಂತಾಪ ಸೂಚಕ ಸಭೆ ನಡೆಸಿದ ಘಟನೆ ಬಿಹಾರದ ಬಾಲಸೋರ್ ಎಂಬಲ್ಲಿ ನಡೆದಿದೆ. ಈ ಹಿನ್ನೆಲೆಯಲ್ಲಿ ಶಾಲಾ ಮುಖ್ಯೋಪಾಧ್ಯಾಯರನ್ನು ಒಡಿಶಾ ಸರ್ಕಾರ ಮಾನತು ಮಾಡಿ ಆದೇಶ ಹೊರಡಿಸಿದೆ.
ಒಡಿಶಾದ ಬಾಲಸೋರ್ ಜಿಲ್ಲೆಯ ಔಪಾದಾ ಬ್ಲಾಕ್ ಗೆ ಸೇರಿದ ಬುಡಖುಂಟ ಯುಜಿಎಂಇ ಪ್ರಾಥಮಿಕ ಶಾಲೆಯಲ್ಲಿ ಕಳೆದ ಶುಕ್ರವಾರ ಈ ಪ್ರಮಾದ ನಡೆದಿದೆ. ತರಬೇತಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಬೇರೊಂದು ಸ್ಥಳಕ್ಕೆ ಹೋಗಿದ್ದ ಶಾಲೆಯ ಮುಖ್ಯೋಪಾಧ್ಯಾಯರು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನಿಧನ ಹೊಂದಿದರೆಂಬ ಸುಳ್ಳು ಮಾಹಿತಿಯನ್ನು ನಂಬಿ ಶಾಲೆಯ ಶಿಕ್ಷಕರೊಬ್ಬರಿಗೆ ಫೋನ್ ಮಾಡಿ ಸಂತಾಪ ಸೂಚಕ ಸಭೆ ನಡೆಸುವಂತೆ ಸೂಚಿಸಿದ್ದರು ಎಂಬ ವಿಷಯ ಜಿಲ್ಲಾ ಶಿಕ್ಷಣಾಧಿಕಾರಿ ನಡೆಸಿದ ತನಿಖೆಯಲ್ಲಿ ಗೊತ್ತಾಗಿದೆ.
ಅಲ್ಲದೆ ಶಾಲೆಗೆ ಆ ಪ್ರಯುಕ್ತ ಇಡೀ ದಿನ ರಜೆಯನ್ನು ಕೂಡ ನೀಡಲಾಗಿತ್ತು ಎಂದು ತಿಳಿದುಬಂದಿದೆ. ಪ್ರಮಾದ ಎಸಗಿರುವ ಶಾಲೆಯ ಮುಖ್ಯೋಪಾಧ್ಯಾಯರು ಕ್ಷಮೆ ಯಾಚಿಸಿದ್ದಾರೆ. ಆದರೆ ಜಿಲ್ಲಾಧಿಕಾರಿಗಳ ಆದೇಶದ ಪ್ರಕಾರ ಮುಖ್ಯೋಪಾಧ್ಯಾಯರನ್ನು ಅಮಾನತು ಮಾಡಲಾಗಿದೆ.
Advertisement