ಆಂಧ್ರಪ್ರದೇಶದಲ್ಲಿ ಗೋದಾವರಿ- ಕೃಷ್ಣಾ ನದಿ ಜೋಡಣೆ

ಗೋದಾವರಿ ನದಿಯನ್ನು ಕೃಷ್ಣಾ ನದಿಯೊಂದಿಗೆ ಜೋಡಣೆ ಮಾಡುವ ಮೂಲಕ ನದಿ ಜೋಡಣೆ ಉದ್ದೇಶದಲ್ಲಿ ಆಂಧ್ರಪ್ರದೇಶ ಮಹತ್ವದ ಮೈಲುಗಲ್ಲು ಸ್ಥಾಪಿಸಿದೆ.
ನದಿ ಜೋಡಣೆ(ಸಾಂಕೇತಿಕ ಚಿತ್ರ)
ನದಿ ಜೋಡಣೆ(ಸಾಂಕೇತಿಕ ಚಿತ್ರ)

ವಿಜಯವಾಡ: ಗೋದಾವರಿ ನದಿಯನ್ನು ಕೃಷ್ಣಾ ನದಿಯೊಂದಿಗೆ ಜೋಡಣೆ ಮಾಡುವ ಮೂಲಕ ನದಿ ಜೋಡಣೆ ಉದ್ದೇಶದಲ್ಲಿ ಆಂಧ್ರಪ್ರದೇಶ ಮಹತ್ವದ ಮೈಲುಗಲ್ಲು ಸ್ಥಾಪಿಸಿದೆ.

ವಿಜಯವಾಡ ಬಳಿ ಇರುವ ಇಬ್ರಾಹಿಂಪಟ್ಟಣದಲ್ಲಿ ಪೈಲೊನ್ ಉದ್ಘಾಟನೆ ಮಾಡುವ ಮೂಲಕ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಗೋದಾವರಿ- ಕೃಷ್ಣಾ ನದಿಗೆ ಔಪಚಾರಿಕವಾಗಿ ಸಂಪರ್ಕ ಕಲ್ಪಿಸಿದರು. ನದಿ ಜೋಡಣೆಯಿಂದ ಖ್ಯಾತ ಇಂಜಿನಿಯರ್ ಕೆ.ಎಲ್ ರಾವ್ ಅವರು ದಶಕಗಳ ಹಿಂದೆ ಸೂಚಿಸಿದ್ದ ಯೋಜನೆ ಕಾರ್ಯರೂಪಕ್ಕೆ ಬಂದಿದ್ದು ಇತಿಹಾಸ ನಿರ್ಮಾಣವಾಗಿ ಎಂದು ಚಂದ್ರಬಾಬು ನಾಯ್ಡು ತಿಳಿಸಿದ್ದಾರೆ.
ನೀರಿನ ಸಮಸ್ಯೆ ಎದುರಿಸುತ್ತಿದ್ದ ಕೃಷ್ಣಾ ಹಾಗೂ ಗುಂಟೂರು ಜಿಲ್ಲೆಯ ರೈತರಿಗೆ ನದಿ ಜೋಡಣೆಯಿಂದ ಅನುಕೂಲವಾಗಲಿದೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಅವಧಿಯಲ್ಲಿ ನದಿ ಜೋಡಣೆ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಆದರೆ ನಂತರ ಬಂದ ಯುಪಿಎ ಸರ್ಕಾರ ಇದನ್ನು ಪೂರ್ಣಗೊಳಿಸದೇ ಕಡೆಗಣಿಸಿತ್ತು ಎಂದು ಚಂದ್ರಬಾಬು ನಾಯ್ಡು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com