
ಲಖನೌ: ವಿಧಾನಸಭಾ ಚುನಾವಣೆ ಹತ್ತಿರು ಬರುತ್ತಿರುವ ಸಲುವಾಗಿ ಸ್ಥಳೀಯ ನಾಗರೀಕರ ಗಮನ ಸೆಳೆಯಲು ಯತ್ನ ನಡೆಸಲು ಮುಂದಾಗಿರುವ ಉತ್ತರ ಪ್ರದೇಶದ ಸರ್ಕಾರ ಇದೀಗ ಅಲ್ಲಿನ ಹಿರಿಯ ನಾಗರೀಕರಿಗೆ ಉಚಿತ ತಿರುಪತಿ ಹಾಗೂ ರಾಮೇಶ್ವರ ಯಾತ್ರೆ ಸೌಲಭ್ಯ ಒದಗಿಸುವುದಾಗಿ ಬುಧವಾರ ಘೋಷಣೆ ಮಾಡಿದೆ.
ಈ ಕುರಿತಂತೆ ಮಾತನಾಡಿರುವ ಧಾರ್ಮಿಕ ವ್ಯವಹಾರಗಳ ಕಾರ್ಯದರ್ಶಿ ನವ್ನೀತ್ ಸೆಹ್ಗಲ್, ರಾಜ್ಯ ಸರ್ಕಾರ ಇದೀಗ ಒಟ್ಟು , 1 ಸಾವಿರ ಹಿರಿಯ ನಾಗರೀಕರನ್ನು ಉಚಿತವಾಗಿ ತಿರುಪತಿ ಮತ್ತು ರಾಮೇಶ್ವರಂ ಯಾತ್ರಗೆ ಕರೆದುಕೊಂಡು ಹೋಗಲು ಸರ್ಕಾರ ನಿರ್ಧರಿಸಿದ್ದು, ಈ ಸೇವೆ ನವೆಂಬರ್ 26ರಿಂದ ಆರಂಭವಾಗಿ ಡಿಸೆಂಬರ್ ವರೆಗೂ ಮುಂದುರೆಯಲಿದೆ ಎಂದು ಹೇಳಿದ್ದಾರೆ.
ಈ ಸೇವೆಯ ಎಲ್ಲಾ ಜವಾಬ್ದಾರಿಯನ್ನು ರೈಲ್ವೆ ಕೇಟರಿಂಗ್ ಮತ್ತು ಟೂರಿಸಂ ಕಾರ್ಪೊರೇಶನ್ ಹೊತ್ತುಕೊಳ್ಳಲಿದೆ. ಯಾತ್ರೆಗೆ ಹೋಗುವ ಯಾತ್ರಾರ್ಥಿಗಳನ್ನು ವಿಶೇಷ ರೈಲಿನಲ್ಲಿ ಕರೆದೊಯ್ಯಲಾಗುತ್ತದೆ. ಇದಕ್ಕಾಗಿ ಈಗಾಗಲೇ 1, 044 ರೈಲ್ವೆ ಟಿಕೆಟ್ ಗಳನ್ನು ಕಾಯ್ದಿರಿಸಲಾಗಿದ್ದು, ಯಾತ್ರಾರ್ಥಿಗಳ ಸಹಾಯಕ್ಕಾಗಿ ಸಹಾಯವಾಣಿ ಸಂಖ್ಯೆಗಳನ್ನು ತೆರೆಯಲಾಗಿದೆ ಎಂದು ಹೇಳಿದ್ದಾರೆ.
Advertisement