
ನವದೆಹಲಿ: ನ್ಯೂಯಾರ್ಕ್ ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನವನ್ನು ಹಾರಾಟದ ಎರಡು ವರೆ ಘಂಟೆಯ ನಂತರ ವೈದ್ಯಕೀಯ ತುರ್ತಿನಿಂದ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಾಪಸ್ ಬಂದಿಳಿದಿದೆ.
ಇಂದು ಮಧ್ಯಾಹ್ನ ೧:೫೬ಕ್ಕೆ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಏರ್ ಇಂಡಿಯಾ ಎಐ-೧೦೧ ವಿಮಾನ ಹೊರಟಿತ್ತು. ಆದರೆ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬ ಉಸಿರಾಟದ ತೊಂದರೆ ಎಂದು ದೂರಿದ್ದರಿಂದ ವಿಮಾನ, ನಿಲ್ದಾಣದಲ್ಲಿ ಸುಮಾರು ೫:೦೦ ಘಂಟೆಗೆ ಭೂಸ್ಪರ್ಶ ಮಾಡಿತು ಎಂದು ವಿಮಾನದ ಕಮ್ಯಾಂಡರ್ ತಿಳಿಸಿದ್ದಾರೆ.
"೩೨೭ ಪ್ರಯಾಣಿಕರನ್ನು ಹೊತ್ತ ಬೊಯಿಂಗ್ ಬಿ೭೭೭ ತಡೆರಹಿತ ವಿಮಾನ ನ್ಯೂಯಾರ್ಕ್ ಗೆ ಹೊರಟಿತ್ತು. ಆದರೆ ವಿಮಾನದಲ್ಲಿ ಪ್ರಾಯಾಣಿಸುತ್ತಿದ್ದ ವ್ಯಕ್ತಿಯೊಬ್ಬ ಉಸಿರಾಟದ ತೊಂದರೆ ಎಂದು ದೂರಿದ್ದರಿಂದ ಹಾಗೂ ಅವರಿಗೆ ತುರ್ತು ವೈದ್ಯಕೀಯ ಚಿತ್ಸೆಯ ಅಗತ್ಯವಿದ್ದರಿಂದ ಸೂಕ್ಷತೆಯನ್ನು ತೋರಿದ ಕಮ್ಯಾಂಡರ್ ಜೊಯಾ ಅಗರವಾಲ್ ದೆಹಲಿಗೆ ಹಿಂದಿರುಗಲು ನಿರ್ಧರಿಸಿದರು" ಎಂದು ಏರ್ ಇಂಡಿಯಾ ಹೇಳಿಕೆಯಲ್ಲಿ ತಿಳಿಸಿದೆ.
ದೆಹಲಿ ವಿಮಾನನಿಲ್ದಾಣದಲ್ಲಿ ೫ ಘಂಟೆಗೆ ವಿಮಾನ ಇಳಿದಾಕ್ಷಣ ಪ್ರಯಾಣಿಕನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ನಂತರ ಅವರ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.
Advertisement