ನೇತಾಜಿ ರಹಸ್ಯ ಕಡತ ಬಹಿರಂಗ: ತನಿಖಾ ವರದಿಗಳು ಹೇಳುವುದೇನು?

ನೇತಾಜಿ ಚೀನಾದಲ್ಲಿದ್ದರು ಎನ್ನುವ ವಾದವೂ ಇದೆ. ಐಎನ್‍ಎಯ ಲಕ್ಷ್ಮಿ ಸ್ವಾಮಿನಾಥನ್ ಅವರೂ ಇಂಥದ್ದೊಂದು ವಾದ ಮುಂದಿಟ್ಟಿದ್ದರು. ಸೋವಿಯತ್ ರಷ್ಯಾದಿಂದ ತಪ್ಪಿಸಿಕೊಂಡ ಬಳಿಕ ನೇತಾಜಿ ಚೀನಾಗೆ ಪಲಾಯನ ಮಾಡಿದ್ದರು...
ನೇತಾಜಿ ಸುಭಾಷ್ ಚಂದ್ರ ಬೋಸ್
ನೇತಾಜಿ ಸುಭಾಷ್ ಚಂದ್ರ ಬೋಸ್

ನೇತಾಜಿ ಚೀನಾದಲ್ಲಿದ್ದರು ಎನ್ನುವ ವಾದವೂ ಇದೆ. ಐಎನ್‍ಎಯ ಲಕ್ಷ್ಮಿ ಸ್ವಾಮಿನಾಥನ್ ಅವರೂ ಇಂಥದ್ದೊಂದು ವಾದ ಮುಂದಿಟ್ಟಿದ್ದರು. ಸೋವಿಯತ್ ರಷ್ಯಾದಿಂದ ತಪ್ಪಿಸಿಕೊಂಡ ಬಳಿಕ  ನೇತಾಜಿ ಚೀನಾಗೆ ಪಲಾಯನ ಮಾಡಿದ್ದರು ಎಂದು ಸಂಶೋಧಕ ಅನುಜ್ ಧರ್ ಅವರ ಕೃತಿ `ನೋ ಸೀಕ್ರೆಟ್'ನಲ್ಲಿ ಹೇಳಲಾಗಿದೆ.

ನೇತಾಜಿ ಅವರ ಹಿರಿಯ ಸಹೋದರ ಶರತ್ ಚಂದ್ರಬೋಸ್ ಈ ಸಂಬಂಧ ದಿ ನೇಷನ್ ಪತ್ರಿಕೆಗೆ 1949ರಲ್ಲಿ ಮುಖಪುಟ ಲೇಖನವೊಂದನ್ನು ಬರೆದಿದ್ದರು. ನೇತಾಜಿ ಚೀನಾದಲ್ಲಿದ್ದಾರೆ ಎಂದು   ಲೇಖನದಲ್ಲಿ ಪ್ರತಿಪಾದಿಸಿದ್ದರು. 1956 ರಲ್ಲಿ ಬೋಸ್ ಆತ್ಮೀಯರಲ್ಲೊಬ್ಬರಾದ ಮುತ್ತು ರಾಮಲಿಂಗಂ ಥೇವರ್, ತಾವು ಬೋಸ್ ಸೂಚನೆಯಂತೆ ರಹಸ್ಯವಾಗಿ ಚೀನಾಗೆ ಭೇಟಿ ನೀಡಿದ್ದಾಗಿ  ಹಿಂದೂಸ್ತಾನ್ ಸ್ಟ್ಯಾಂಡರ್ಡ್ ಪತ್ರಿಕೆಗೆ ಹೇಳಿಕೊಂಡಿದ್ದರು. ಅಮೆರಿಕ, ಬ್ರಿಟನ್ ಗುಪ್ತಚರ ಸಂಸ್ಥೆ ಕೂಡ ನೇತಾಜಿ ಚೀನಾದಲ್ಲಿದ್ದಾರೆ ಎನ್ನುವವಾದ ಮಂದಿಟ್ಟಿವೆ.

ತನಿಖಾ ವರದಿಗಳು ಹೇಳುವುದೇನು?
ಫಿಗ್ಗೆಸ್ ವರದಿ

ಇದು ಬೋಸ್ ಸಾವಿನ ಕುರಿತ ತನಿಖೆಗೆ ನೇಮಿಸಲಾದ ಮೊದಲ ಸಮಿತಿ. 1946ರಲ್ಲಿ ಈ ಸಮಿತಿ ಸಲ್ಲಿಸಿದ ವರದಿ ಬೋಸ್ ಆ.18, 1945ರಂದು ತೈವಾನ್ ನ ಆಸ್ಪತ್ರೆಯಲ್ಲಿ ಮೃತಪಟ್ಟರು ಎನ್   ನುತ್ತದೆ.

ಷಹನವಾಜ್ ಸಮಿತಿ
ಇದು ಸ್ವಾತಂತ್ರ್ಯಾನಂತರ ಬೋಸ್ ಸಾವಿನ ಕುರಿತು ರಚಿಸಲಾದ ಮೊದಲ ವಿಚಾರಣಾ ಸಮಿತಿ. ನೇತಾಜಿ ತೈಪೆಯಲ್ಲಿ ನಡೆದ ವಿಮಾನ ದುರಂತದಲ್ಲೇ ಮೃತಪಟ್ಟಿದ್ದಾರೆ ಎಂದಿದೆ. ನೇತಾಜಿ  ಆತ್ಮೀಯ ಕರ್ನಲ್ ಹಬೀಬುರ್ ರೆಹಮಾನ್ ಸಂದರ್ಶನ ಮಾಡಿ ಈ ವರದಿ ಸಿದ್ಧಪಡಿಸಲಾಗಿತ್ತು. ಆದರೆ, ಸಮಿತಿಯ ಸದಸ್ಯರಲ್ಲೊಬ್ಬರಾಗಿದ್ದ ನೇತಾಜಿ ಸಹೋದರ ಮಾತ್ರ ಈ ವರದಿಗೆ  ವಿರೋಧ ವ್ಯಕ್ತಪಡಿಸಿದ್ದರು.

ಖೋಸ್ಲಾ ಸಮಿತಿ
1970ರಲ್ಲಿ ನೇಮಕವಾದ ಸಮಿತಿ. ಈ ಸಮಿತಿ ವಿಚಾರಣೆ ವೇಳೆ ಕರ್ನಲ್ ಹಬೀಬುರ್ ತಾವು ಷಾ ಸಮಿತಿಗೆ ಸುಳ್ಳು ಹೇಳಿದ್ದಾಗಿ ತಿಳಿಸಿದ್ದರು.

ಮುಖರ್ಜಿ ಸಮಿತಿ
2005ರಲ್ಲಿ ಸುಪ್ರೀಂ ಕೋರ್ಟ್ ನಿವೃತ್ತ ಎಂ.ಕೆ. ಮುಖರ್ಜಿ ನೇತೃತ್ವದ ಏಕಸದಸ್ಯ ಸಮಿತಿ ಮಾತ್ರ ನೇತಾಜಿ ಸೋವಿಯತ್ ರಷ್ಯಾದಲ್ಲಿದ್ದರು. ಟೋಕಿಯೋದಲ್ಲಿರುವ ರೆಂಕೋಜಿ   ದೇಗುಲದಲ್ಲಿರುವುದು ನೇತಾಜಿಯ ಅಸ್ಥಿಯೇ ಹೊರತು ಜಪಾನ್ ಯೋಧನದ್ದಲ್ಲ ಎಂದಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com