ಹೈಹೀಲ್ಸ್ ಧರಿಸಬಾರದು, ವಾಟ್ಸ್ ಆಪ್ ಬಳಸಬಾರದು: ವಿದ್ಯಾರ್ಥಿನಿಯರಿಗೆ ಚೆನ್ನೈ ಕಾಲೇಜ್ ನ ನಿರ್ಬಂಧ

ಚೆನ್ನೈ ನ ಶ್ರೀ ಸಾಯಿ ರಾಮ್ ಇಂಜಿನಿಯರಿಂಗ್ ಕಾಲೇಜು, ವಿದ್ಯಾರ್ಥಿನಿಯರಿಗೆ ವಿಲಕ್ಷಣವಾದ ನಿರ್ಬಂಧಗಳನ್ನು ವಿಧಿಸಿದೆ.
ವಿದ್ಯಾರ್ಥಿನಿಯರಿಗೆ ವಿಧಿಸಲಾಗಿರುವ ವಿಲಕ್ಷಣ ನಿರ್ಬಂಧಗಳ ಪಟ್ಟಿ
ವಿದ್ಯಾರ್ಥಿನಿಯರಿಗೆ ವಿಧಿಸಲಾಗಿರುವ ವಿಲಕ್ಷಣ ನಿರ್ಬಂಧಗಳ ಪಟ್ಟಿ
Updated on: 

ಚೆನ್ನೈ: ಚೆನ್ನೈ ನ ಶ್ರೀ ಸಾಯಿ ರಾಮ್ ಇಂಜಿನಿಯರಿಂಗ್ ಕಾಲೇಜು, ವಿದ್ಯಾರ್ಥಿನಿಯರಿಗೆ ವಿಲಕ್ಷಣವಾದ ನಿರ್ಬಂಧಗಳನ್ನು ವಿಧಿಸಿದೆ.
ನಿರ್ಬಂಧಗಳ ಪಟ್ಟಿಯ ಪ್ರಕಾರ, ವಿದ್ಯಾರ್ಥಿನಿಯರು ಹೈಹೀಲ್ಸ್ ಪಾದರಕ್ಷೆಗಳನ್ನು ಹಾಕುವಂತಿಲ್ಲ. ವಾಟ್ಸ್ ಆಪ್ ಬಳಸುವಂತಿಲ್ಲ. ಕಾಲೇಜು ಕ್ಯಾಂಪಸ್ ಒಳಗೆ ಚಾಕಲೇಟ್ ಗಳನ್ನು ತರುವಂತಿಲ್ಲ. ಇಷ್ಟೇ ಅಲ್ಲದೇ ಹುಡುಗರೊಂದಿಗೆ ಮಾತನಾಡುವುದಕ್ಕೂ ನಿರ್ಬಂಧ ವಿಧಿಸಲಾಗಿದೆ.
ಕಾಲೇಜು ಆಡಳಿತ ಮಂಡಲಿ ವಿಧಿಸಿರುವ ನಿರ್ಬಂಧಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಆದರೆ ನಿರ್ಬಂಧ ವಿಧಿಸಿರುವುದನ್ನೇ ಕಾಲೇಜು ತಳ್ಳಿಹಾಕಿದ್ದು, ನಕಲಿ ನಿರ್ಬಂಧ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದೆ. ಕಾಲೇಜಿನ ಪ್ರೊಫೆಸರ್ ಕೆ.ಮಾರನ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಕಾಲೇಜು ವಿಧಿಸಿದ್ದ ಇತರ ನಿರ್ಬಂಧಗಳೊಂದಿಗೆ ಈ ವಿಲಕ್ಷಣ ನಿರ್ಬಂಧಗಳನ್ನೂ ಸೇರಿಸಲಾಗಿದೆ ಎಂದು ಹೇಳಿದ್ದಾರೆ.  
ಕಾಲೇಜಿನ ಹೆಸರಿನಲ್ಲಿ ನಕಲಿ ನಿರ್ಬಂಧ ಪಟ್ಟಿಯನ್ನು ಬಿಡುಗಡೆ ಮಾಡಿರುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಮಾರನ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com