ಮದ್ರಾಸ್ ಹೈಕೋರ್ಟಲ್ಲಿ ಜಡ್ಜ್ ಗಳಿಗೆ ಭೀತಿ: ಸಿಜೆಐ

ಹೈಕೋರ್ಟ್‍ನ ಕೆಲ ಗುಂಪಿನ ವಕೀಲರ ದುಂಡಾವರ್ತನೆಯಿಂದ ನ್ಯಾಯ ಮೂರ್ತಿಗಳು ಭಯಭಿೀತಿಯಲ್ಲಿ ಕಲಾಪ ನಡೆಸುವಂತಹ ಸ್ಥಿತಿ ನಿರ್ಮಿಸಿದೆ...
ಸುಪ್ರೀಂಕೋರ್ಟ್
ಸುಪ್ರೀಂಕೋರ್ಟ್

ಮದ್ರಾಸ್: ಹೈಕೋರ್ಟ್‍ನ ಕೆಲ ಗುಂಪಿನ ವಕೀಲರ ದುಂಡಾವರ್ತನೆಯಿಂದ ನ್ಯಾಯ ಮೂರ್ತಿಗಳು ಭಯಭೀತಿಯಲ್ಲಿ ಕಲಾಪ ನಡೆಸುವಂತಹ ಸ್ಥಿತಿ ನಿರ್ಮಿಸಿದೆ ಎಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಚ್.ಎಲ್. ದತ್ತು ಆಕ್ಷೇಪಿಸಿದ್ದಾರೆ.

ತಮಿಳು ಭಾಷೆಯಲ್ಲಿ ಕಲಾಪ ನಡೆಸಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ಮದ್ರಾಸ್ ಹೈಕೋರ್ಟ್ ವಕೀಲರ ವರ್ತನೆ ಕಾನೂನು ಎಲ್ಲೆ ಮೀರಿದ್ದು, ಅದರಿಂದಾಗಿ ನ್ಯಾಯಾಧೀಶರು ಮತ್ತು ಕೋರ್ಟ್ ಸಿಬ್ಬಂದಿ ಭಯದ ವಾತಾವರಣದಲ್ಲಿ ಕರ್ತವ್ಯ ನಿರ್ವಹಿಸಬೇಕಾಗಿದೆ ಎಂದು ಹೈಕೋರ್ಟ್ ಪರ ಹಿರಿಯ ವಕೀಲ ಕೆ ಕೆ ವೇಣುಗೋಪಾಲ್ ನ್ಯಾಯಾಲಯದ ಸ್ಥಿತಿ ವಿವರಿಸಿದರು ಎಂದು ಖಾಸಗಿ ಪತ್ರಿಕೆಯೊಂದು ವರದಿ ಮಾಡಿದ್ದು, ಅವರ ಅಹವಾಲು ಆಲಿಸಿದ ಸಿಜೆಐ, ಅಲ್ಲಿನ ಸ್ಥಿತಿಗೆ ಈಗ ನಾನೇನಾದರೂ ಹೇಳಿದರೆ ಅದು ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಸದ್ಯಕ್ಕೆ ನಾವು ಕ್ರಮಕ್ಕೆ ಮುನ್ನ ಪರಿಸ್ಥಿತಿ ಕಾದು ನೋಡೋಣ ಎಂದರು.

ಇದೇ ವೇಳೆ, ತಮಿಳುನಾಡು ಪೊಲೀಸರ ಮೇಲಿನ ವಿಶ್ವಾಸ ಕಳೆದುಕೊಂಡಿದ್ದೇನೆ ಎಂದೇನೂ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಹೇಳಿಲ್ಲ ಎಂದು ಸಿಎಂ ಜಯಲಲಿತಾ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com