ಕಾಂಗ್ರೆಸ್‍ನಲ್ಲಿ ಇತ್ತು ಗೊಂದಲ

ಸನಾತನ ಸಂಸ್ಥೆ ಮೇಲೆ ನಿಷೇಧ ಹೇರುವ ಬಗ್ಗೆ ಕಾಂಗ್ರೆಸ್‍ನಲ್ಲೇ ಗೊಂದಲಗಳು ಎದ್ದಿದ್ದವು. 2011ರಲ್ಲಿ ಮಹಾರಾಷ್ಟ್ರ ಸರ್ಕಾರ ನಿಷೇಧ ಸಂಬಂಧ ಕೇಂದ್ರಕ್ಕೆ ಶಿಫಾರಸು ಮಾಡಿತ್ತು ಎಂದು ಮಾಜಿ ಮುಖ್ಯಮಂತ್ರಿ ಪೃಥ್ವಿರಾಜ್ ಚೌಹಾಣ್ ತಿಳಿಸಿದ್ದಾರೆ...
ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಪೃಥ್ವಿರಾಜ್ ಚೌಹ್ವಾಣ್ (ಸಂಗ್ರಹ ಚಿತ್ರ)
ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಪೃಥ್ವಿರಾಜ್ ಚೌಹ್ವಾಣ್ (ಸಂಗ್ರಹ ಚಿತ್ರ)

ನವದೆಹಲಿ: ಸನಾತನ ಸಂಸ್ಥೆ ಮೇಲೆ ನಿಷೇಧ ಹೇರುವ ಬಗ್ಗೆ ಕಾಂಗ್ರೆಸ್‍ನಲ್ಲೇ ಗೊಂದಲಗಳು ಎದ್ದಿದ್ದವು. 2011ರಲ್ಲಿ ಮಹಾರಾಷ್ಟ್ರ ಸರ್ಕಾರ ನಿಷೇಧ ಸಂಬಂಧ ಕೇಂದ್ರಕ್ಕೆ ಶಿಫಾರಸು ಮಾಡಿತ್ತು ಎಂದು ಮಾಜಿ ಮುಖ್ಯಮಂತ್ರಿ ಪೃಥ್ವಿರಾಜ್ ಚೌಹಾಣ್ ತಿಳಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಗೃಹ ಖಾತೆ ಮಾಜಿ ಕಾರ್ಯದರ್ಶಿ ಆರ್.ಕೆ. ಸಿಂಗ್ ``ನಿಷೇಧಿಸಲು ಸಾಕ್ಷ್ಯಾಧಾರಗಳು ಬೇಕು. ಯಾವುದೇ ಸಂಘಟನೆ ವಿರುದ್ಧ ಭಯೋತ್ಪಾದನೆ ವಿರುದ್ಧ ಆರೋಪಗಳಿದ್ದರೆ ಅದಕ್ಕೆ ಸಾಕ್ಷ್ಯ ನೀಡಬೇಕು. ಆಗಿನ ಗೃಹ ಸಚಿವ ಚಿದಂಬರಂ ಕೂಡ ಕಡತದಲ್ಲಿ ನಿಷೇಧ ಹೇರುವಂಥ ಅಂಶಗಳು ಇದ್ದಿರಲಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು'' ಎಂದಿದ್ದಾರೆ.

ಸಾಹಿತಿಗಳ ಮನೆಗೆ ಮುಂದುವರಿದ ಭದ್ರತೆ
ಧಾರವಾಡ:
ನಾಡೋಜ ಡಾ. ಚೆನ್ನವೀರ ಕಣವಿ ಹಾಗೂ ಡಾ. ಗಿರಡ್ಡಿ ಗೋವಿಂದರಾಜ ಅವರ ನಿವಾಸಗಳಿಗೆ ನೀಡಲಾಗಿದ್ದ ಪೊಲೀಸ್ ಭದ್ರತೆ ಮುಂದುವರಿಸಲಾಗಿದೆ.

ಡಾ. ಎಂ.ಎಂ. ಕಲಬುರ್ಗಿ ಹತ್ಯೆ ವಿರೋಧಿಸಿ ಸೆ. 14ರಂದು ಧಾರವಾಡದಲ್ಲಿ ನಡೆದ ಪ್ರತಿಭಟನೆ ಹಾಗೂ ಸರ್ಕಾರಕ್ಕೆ ಸಲ್ಲಿಸಿದ ಮನವಿಯಲ್ಲಿ ಶ್ರೀರಾಮ ಸೇನೆ ಹೆಸರು ಬಂದಿರುವ ಕಾರಣ ನಾಲ್ಕು ದಿನಗಳ ಹಿಂದೆ ರಾಯಚೂರಿನ ಶ್ರೀರಾಮ ಸೇನೆ ಮುಖ್ಯಸ್ಥ ಈ ಇಬ್ಬರು ಸಾಹಿತಿಗಳು ಕ್ಷಮೆ ಕೋರದಿದ್ದರೆ ಅವರ ಮನೆಗಳನ್ನು ಧ್ವಂಸ ಮಾಡುತ್ತೇವೆಂದು ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಅಂದಿನಿಂದ ನೀಡಿದ್ದ ಪೊಲೀಸ್ ಭದ್ರತೆ ಈಗಲೂ ಮುಂದುವರಿದಿದೆ. ಆರಂಭದಲ್ಲಿ ಇಬ್ಬರು ಪೊಲೀಸರ ಭದ್ರತೆ ನೀಡಿದ್ದು, ಎರಡು ದಿನಗಳಿಂದ ಒಬ್ಬ ಪೊಲೀಸ್ ಅಧಿಕಾರಿಯನ್ನು ನಿಯೋಜಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com